ಮತ್ತೊಮ್ಮೆ ಬೆತ್ತಲಾಗಿ ಫೋಸ್ ಕೊಟ್ಟ ಇಂಗ್ಲೆಂಡ್ ವಿಕೆಟ್ ಕೀಪರ್ ಸಾರಾ

ಇಂಗ್ಲೆಂಡ್ ತಂಡದ ಅನುಭವಿ ವಿಕೆಟ್‌ಕೀಪಿಂಗ್ ಬ್ಯಾಟರ್ ಸಾರಾ ಟೇಲರ್ ಮತ್ತೊಮ್ಮೆ ಬೆತ್ತಲಾಗಿ ಫೋಟೋ ಶೂಟ್ ನಡೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಾನಸಿಕ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಸಾರಾ ಅವರು ಈ ರೀತಿ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿರುವುದು ಇದು ಎರಡನೇ ಸಲ.
30 ವರ್ಷದ ಅನುಭವಿ ಆಟಗಾರ್ತಿ ಟೇಲರ್ ಇತ್ತೀಚೆಗಷ್ಟೇ ಮಾನಸಿಕ ಗೊಂದಲದಿಂದ ಬಳಲುತ್ತಿರುವುದಾಗಿ ಹೇಳಿ ಇಂಗ್ಲೆಂಡ್ ತಂಡದಿಂದ ಆಷಸ್ ಸರಣಿಯಿಂದ ಹೊರಗುಳಿದಿದ್ದರು. ಇದೀಗ, ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಗ್ನ ಫೋಟೊ ಒಂದನ್ನು ಮತ್ತೊಮ್ಮೆ ಪ್ರಕಟಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಅತಿಯಾದ ಮಾನಸಿಕ ಸಮಸ್ಯೆಯಿಂದ ಬಳಲಿದ್ದ ಸಾರಾ, ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಿಂದಲೂ ಹೊರಗುಳಿದಿದ್ದರು. ಆದರೀಗ ಅವರು ಚೇತರಿಸಿದ್ದು, ಸರೆ ಸ್ಟಾರ್ಸ್ ತಂಡದ ಪರ ಆಡಲು ಆರಂಭಿಸಿದ್ದರು.
"Waiting to go into bat like." ಎಂದು ಬರೆದುಕೊಂಡು ಹೊಸ ಇನ್ ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಎದೆಗೆ ಅಡ್ಡವಾಗಿ ಬ್ಯಾಟ್ ಹಿಡಿದು ನಿಂತಿದ್ದಾರೆ. ಈ ಚಿತ್ರ ಸುಮಾರು 94,679 ಬಾರಿ ವೀಕ್ಷಿಸಲ್ಪಟ್ಟಿದೆ. ಈ ಚಿತ್ರ ಕೂಡಾ ವುಮೆನ್ಸ್ ಹೆಲ್ತ್ ಸಹಯೋಗದ ಅಭಿಯಾನಕ್ಕಾಗಿ ಮಾಡಿರುವ ಫೋಟೋ ಶೂಟ್ ಎಂದು ಹ್ಯಾಶ್ ಟ್ಯಾಗ್ ಮೂಲಕ ಸಾರಾ ತಿಳಿಸಿದ್ದಾರೆ.

ಆಗಸ್ಟ್ 14ರಂದು ಮೊದಲ ಬಾರಿಗೆ
ಸಾರಾ, ಆಗಸ್ಟ್ 14ರಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ನಗ್ನ ಫೋಟೊ ಪ್ರಕಟಿಸಿದ್ದರು. ವಿಕೆಟ್‌ಕೀಪಿಂಗ್ ಮಾಡುತ್ತಿರುವಂತೆ ಸ್ಟಂಪ್ಸ್ ಮೇಲಿನ ಬೇಲ್ಸ್ ಎಗರಿಸಿರುವ ಸಾರಾ ಸಂಪೂರ್ಣ ನಗ್ನವಾಗಿ ಈ ಪೋಸ್ ನೀಡಿದ್ದಾರೆ. ಇದು ತಮ್ಮ ಸಹನೆಗೆ ಮೀರಿದ್ದಾಗಿದ್ದರೂ ಕೂಡ ಒಂದು ಉದ್ದೇಶ ಸಲುವಾಗಿ ಈ ರೀತಿ ಮಾಡಿರುವುದಾಗಿ ಫೋಟೊ ಜೊತೆಗಿನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದರು. ಈ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿತ್ತು.

ವಿಮೆನ್ಸ್ ಹೆಲ್ತ್ ಯುಕೆಯ ಅಭಿಯಾನ
ವಿಮೆನ್ಸ್ ಹೆಲ್ತ್ ಯುಕೆಯ ಅಭಿಯಾನದಲ್ಲಿ ಪಾಲ್ಗೊಂಡಿರುವ ಮಹಿಳಾ ಕ್ರಿಕೆಟರ್, "ನಗ್ನವಾಗಿ ಕಾಣಿಸಿಕೊಳ್ಳುವುದು ನನ್ನ ಸಹನೆಗೆ ಮೀರಿದ್ದು, ಎಂಬುದನ್ನು ನನ್ನನ್ನು ಹತ್ತಿರದಿಂದ ಬಲ್ಲವರಿಗೆ ತಿಳಿದಿದೆ. ಆದರೆ, ಮಹಿಳೆಯರ ಸಮಸ್ಯೆಗಳ ಕುರಿತಾಗಿ ಜಾಗೃತಿ ಮೂಡಿದಲು ಇಂಥದ್ದೊಂದು ಅಭಿಯಾನಕ್ಕೆ ಆಹ್ವಾನಿಸಿದ @womenshealthukಗೆ ಧನ್ಯವಾದಗಳು. ಪ್ರತಿಯೊಬ್ಬ ಮಹಿಳೆಯೂ ಅದ್ಭುತ!," ಎಂದು ಸಾರಾ ಬರೆದುಕೊಂಡಿದ್ದರು.

ಇಂಗ್ಲೆಂಡ್ ಮಹಿಳಾ ತಂಡದ ಪ್ರಮುಖ ಆಟಗಾರ್ತಿ
ಇಂಗ್ಲೆಂಡ್ ಮಹಿಳಾ ತಂಡದ ಪರ 126 ಏಕದಿನ ಪಂದ್ಯಗಳನ್ನಾಡಿರುವ ಸಾರಾ, 38.26ರ ಸರಾಸರಿಯಲ್ಲಿ 4056 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 7 ಶತಕ ಮತ್ತು 20 ಅರ್ಧಶತಕಗಳು ಸೇರಿವೆ. ಜೊತೆಗೆ ಆಡಿದ 10 ಟೆಸ್ಟ್ ಪಂದ್ಯಗಳಲ್ಲಿ 300 ರನ್‌ಗಳನ್ನು ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 90 ಪಂದ್ಯಗಳನ್ನಾಡಿ 2177 ರನ್‌ಗಳನ್ನು ಚೆಚ್ಚಿದ್ದಾರೆ. ವಿಕೆಟ್ ಹಿಂಬದಿಯಲ್ಲೂ ಮಿಂಚಿರುವ ಅವರು, ಏಕದಿನ ಮತ್ತು ಟಿ20ಯಲ್ಲಿ ತಲಾ 51 ಸ್ಟಂಪಿಂಗ್ ಮಾಡಿದ್ದಾರೆ.

Waiting to go into bat like.
"Waiting to go into bat like." ಎಂದು ಬರೆದುಕೊಂಡು ಹೊಸ ಇನ್ ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಎದೆಗೆ ಅಡ್ಡವಾಗಿ ಬ್ಯಾಟ್ ಹಿಡಿದು ನಿಂತಿದ್ದಾರೆ. ಈ ಚಿತ್ರ ಸುಮಾರು 94,679 ಬಾರಿ ವೀಕ್ಷಿಸಲ್ಪಟ್ಟಿದೆ. ಈ ಚಿತ್ರ ಕೂಡಾ ವುಮೆನ್ಸ್ ಹೆಲ್ತ್ ಸಹಯೋಗದ ಅಭಿಯಾನಕ್ಕಾಗಿ ಮಾಡಿರುವ ಫೋಟೋ ಶೂಟ್ ಎಂದು ಹ್ಯಾಶ್ ಟ್ಯಾಗ್ ಮೂಲಕ ಸಾರಾ ತಿಳಿಸಿದ್ದಾರೆ. ಮೊದಲ ಬಾರಿಗೆ ಪೋಸ್ಟ್ ಮಾಡಿದ 121899 ಕ್ಕೂ ಅಧಿಕ ಬಾರಿ ಲೈಕ್ಸ್ ಪಡೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications