ಆರೋಗ್ಯ ಸಮಸ್ಯೆ
'ಇದು ಬಹಳ ಕಠಿಣ ನಿರ್ಧಾರ ಆದರೆ ನಾನು ಮತ್ತು ನನ್ನ ಆರೋಗ್ಯ ಸಮಸ್ಯೆಯಿಂದಾಗಿ ಮುಂದುವರಿಯಲೇಬೇಕಿರುವುದರಿಂದ ಈ ನಿರ್ಧಾರ ಸರಿಯಾದುದು ಎಂದು ನಾನು ಭಾವಿಸುತ್ತೇನೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಹಿಂದಿನ ಮತ್ತು ಈಗಿನ ಸಹ ಆಟಗಾರ್ತಿಯರಿಗೆ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ,' ಎಂದುನಿವೃತ್ತಿ ಘೋಷಿಸುತ್ತ ಸಾರಾ ಹೇಳಿದ್ದಾರೆ.
ಬೆತ್ತಲೆ ಫೋಟೋ ಶೇರ್
ಆಗಸ್ಟ್ 14ರಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾರಾ ಬೆತ್ತಲೆ ಫೋಟೊ ಪ್ರಕಟಿಸಿದ್ದರು. ವಿಕೆಟ್ ಕೀಪಿಂಗ್ ಮಾಡುತ್ತಿರುವಂತೆ, ಸ್ಟಂಪ್ಸ್ ಮೇಲಿನ ಬೇಲ್ಸ್ ಉರುಳುತ್ತಿರುವ ರೀತಿಯಲ್ಲಿ ಪೋಸ್ ನೀಡಿದ್ದ ಸಾರಾ ಆ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿದ್ದರು. ಹೀಗೆ ಬೆತ್ತಲೆ ಪೋಸ್ ಕೊಡೋದು ನನ್ನ ಸಹನೆಗೆ ಮೀರಿದ್ದಾಗಿದ್ದರೂ ಕೂಡ ಒಂದು ಉದ್ದೇಶದ ಕಾರಣ ಈ ರೀತಿ ಮಾಡಿರುವುದಾಗಿ ಫೋಟೊ ಜೊತೆಗಿನ ಶೀರ್ಷಿಕೆಯಲ್ಲಿ ಆಗ ಸಾರಾ ಬರೆದುಕೊಂಡಿದ್ದರು.
ಮತ್ತೊಂದು ನಗ್ನ ಫೋಟೋ
'ವಿಮೆನ್ಸ್ ಹೆಲ್ತ್ ಯುಕೆ'ಯ ಎಂಬ ಆರೋಗ್ಯ ಸಂಬಂಧಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸಾರಾ, 'ನಗ್ನವಾಗಿ ಕಾಣಿಸಿಕೊಳ್ಳುವುದು ನನ್ನ ಸಹನೆಗೆ ಮೀರಿದ್ದು ಎಂಬುದನ್ನು ನನ್ನನ್ನು ಹತ್ತಿರದಿಂದ ಬಲ್ಲವರಿಗೆ ತಿಳಿದಿದೆ. ಆದರೆ, ಮಹಿಳೆಯರ ಸಮಸ್ಯೆಗಳ ಕುರಿತಾಗಿ ಜಾಗೃತಿ ಮೂಡಿಸಲು ಇಂಥದ್ದೊಂದು ಅಭಿಯಾನಕ್ಕೆ ಆಹ್ವಾನಿಸಿದ @womenshealthukಗೆ ಧನ್ಯವಾದಗಳು' ಎಂದು ನಗ್ನ ಫೋಟೋ ಶೇರ್ ಮಾಡಿದ್ದಾಗ ಸಾರಾ ಹೇಳಿಕೊಂಡಿದ್ದರು. ಅದಾಗಿ ಆಗಸ್ಟ್ 26ರಂದು ಸಾರಾ ಮತ್ತೊಂದು ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.
7 ಶತಕ, 20 ಅರ್ಧ ಶತಕ
126 ಏಕದಿನ ಪಂದ್ಯಗಳನ್ನಾಡಿರುವ ಸಾರಾ, 38.26ರ ಸರಾಸರಿಯಲ್ಲಿ 4056 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 7 ಶತಕ ಮತ್ತು 20 ಅರ್ಧಶತಕಗಳು ಸೇರಿವೆ. ಜೊತೆಗೆ ಆಡಿದ 10 ಟೆಸ್ಟ್ ಪಂದ್ಯಗಳಲ್ಲಿ 300 ರನ್ಗಳನ್ನು ಗಳಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 90 ಪಂದ್ಯಗಳನ್ನಾಡಿ 2177 ರನ್ಗಳನ್ನು ಚೆಚ್ಚಿದ್ದಾರೆ. ವಿಕೆಟ್ ಹಿಂಬದಿಯಲ್ಲೂ ಮಿಂಚಿರುವ ಅವರು, ಏಕದಿನ ಮತ್ತು ಟಿ20ಯಲ್ಲಿ ತಲಾ 51 ಸ್ಟಂಪಿಂಗ್ ಮಾಡಿದ್ದಾರೆ.