For Quick Alerts
ALLOW NOTIFICATIONS  
For Daily Alerts
 

256ರ ಸ್ಟ್ರೈಕ್‌ರೇಟ್‌, 9 ಬೌಂಡರಿ, 3 ಸಿಕ್ಸರ್‌: ಹರಾಜಿಗೂ ಮುನ್ನ ಅಬ್ಬರಿಸಿದ ಮುಂಬೈ ಬ್ಯಾಟರ್‌

ಐಪಿಎಲ್‌ 2026ರ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದಾದ ಆಟಗಾರರ ಪಟ್ಟಿಯನ್ನು ಸಿದ್ಧ ಪಡಿಸಿಕೊಂಡಿದ್ದಾರೆ. ಭರವಸೆಯ ಆಟಗಾರರು ಈ ಬಾರಿ ಹರಾಜು ಅಂಗಳಕ್ಕೆ ಪ್ರವೇಶಿಸಲಿದ್ದು, ಇವರಿಗೆ ಹಣವನ್ನು ಹೂಡಲು ಮಾಲೀಕರು ಸಹ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹರಾಜು ದಿನಕ್ಕೆ ಇನ್ನು ಎರಡು ದಿನ ಬಾಕಿ ಇರುವಂತೆ ದೇಶೀಯ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಮುಂಬೈ ಪ್ಲೇಯರ್‌ ಮಾಲೀಕರ ಚಿತ್ತ ಕದ್ದಿದ್ದಾರೆ.

ಸೈಯದ್ ಮುಷ್ತಾಕ್‌ ಅಲಿ ಟೂರ್ನಿಗಳು ನಡೆಯುತ್ತಿವೆ. ಈ ವೇಳೆ ಭಾನುವಾರ ಹರಿಯಾಣ ಹಾಗೂ ಮುಂಬೈ ತಂಡಗಳು ಸೂಪರ್ ಲೀಗ್‌ ಹಂತದಲ್ಲಿ ಮುಖಾಮುಖಿ ಆದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹರಿಯಾಣ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 234 ರನ್‌ ಕಲೆ ಹಾಕಿತು. ಹರಿಯಾಣ ಪರ ಅಂಕಿತ್ ಕುಮಾರ್ 10 ಬೌಂಡರಿ, 6 ಸಿಕ್ಸರ್ ಸಹಾಯದಿಂದ 89 ರನ್‌ ಬಾರಿಸಿದರೆ, ನಿಶಾಂತ್ ಸಿಧು 38 ಎಸೆತಗಳಲ್ಲಿ 63 ರನ್‌ ಸಿಡಿಸಿದರು.

Mumbai Batter Sarfaraz Khan Smashes 64 Runs off 25 Balls with a 256 Strike Rate Ahead of IPL 2026 Auction

ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಮುಂಬೈ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಯಶಸ್ವಿ ಜೈಸ್ವಾಲ್‌ ಹಾಗೂ ಅಜಿಂಕ್ಯ ರಹಾನೆ 3.1 ಓವರ್‌ಗಳಲ್ಲಿ 53 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ರಹಾನೆ (21) ಔಟ್‌ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಸರ್ಫರಾಜ್‌ ಖಾನ್‌ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಕೇವಲ 25 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 64 ರನ್‌ ಬಾರಿಸಿದರು. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 256 ಆಗಿತ್ತು.

ಯಶಸ್ವಿ ಶತಕ

ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ 50 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 101 ರನ್ ಬಾರಿಸಿ ಅಬ್ಬರಿಸಿದರು. ಪರಿಣಾಮ ಮುಂಬೈ 17.3 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 238 ರನ್ ಕಲೆ ಹಾಕಿ ಅರ್ಹ ಗೆಲುವು ದಾಖಲಿಸಿತು.

ಮುಂಬೈ ಪರ ಬ್ಯಾಟ್ ಮಾಡಿದ ಸರ್ಫರಾಜ್ ಖಾನ್‌ ಐಪಿಎಲ್‌ 2026ರ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡಿರುವ ಆಟಗಾರ. ಹರಾಜಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಸರ್ಫರಾಜ್‌ ಅಬ್ಬರದ ಪ್ರದರ್ಶನ ಹಲವು ಮಾಲೀಕರ ಗಮನ ಸೆಳೆದಿದೆ. ಇವರು ₹75 ಲಕ್ಷ ಮೂಲ ಬೆಲೆಯೊಂದಿಗೆ ಅಖಾಡ ಅಂಗಳ ಪ್ರವೇಶಿಸಲಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಹುಡುಕುತ್ತಿರುವ ತಂಡಗಳಿಗೆ ಸರ್ಫರಾಜ್ ಖಾನ್‌ ಬೆಸ್ಟ್‌ ಚಾಯ್ಸ್‌. ಇವರಿಗೆ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ ಅನುಭವ ಎರಡೂ ಇದೆ. ಇವರು ಪಂಜಾಬ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಆರ್‌ಸಿಬಿ ಪರ ಬ್ಯಾಟ್ ಮಾಡಿದ್ದಾರೆ. ಐಪಿಎಲ್‌ನಲ್ಲಿ ಸರ್ಫರಾಜ್‌ ಖಾನ್‌ 50 ಪಂದ್ಯಗಳಲ್ಲಿ 22ರ ಸರಾಸರಿಯಲ್ಲಿ 585 ರನ್‌ ಕಲೆ ಹಾಕಿದ್ದಾರೆ.

Story first published: Sunday, December 14, 2025, 13:39 [IST]
Other articles published on Dec 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+