Duleep Trophy 2024: ಸರ್ಫರಾಜ್ ಖಾನ್ ಸಹೋದರ ಭರ್ಜರಿ ಶತಕ
2024ರ ಋತುವಿನ ದುಲೀಪ್ ಟ್ರೋಫಿ ಟೂರ್ನಿ ಆರಂಭವಾಗಿದೆ. ಇಂದು ಭಾರತ ಎ ಮತ್ತು ಭಾರತ ಬಿ ನಡುವೆ ಮೊದಲ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಯುವ ಪ್ರತಿಭೆಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಟೀಮ್ ಇಂಡಿಯಾ ಪರ ಆಡಲು ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಬಿ ತಂಡವು ಉತ್ತಮ ಆರಂಭವನ್ನು ಪಡೆಯಲಿಲ್ಲ. ಸ್ಟಾರ್ ಬ್ಯಾಟರ್‌ಗಳು ಇದ್ದರೂ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಪರಿಣಾಮ 80 ರನ್‌ಗಳ ಒಳಗೆ ತನ್ನ 5 ವಿಕೆಟ್‌ಗಳನ್ನು ಭಾರತ ಎ ತಂಡ ಕಳೆದುಕೊಂಡಿತು. ಈ ವೇಳೆ ಯುವ ಬ್ಯಾಟರ್ ತಂಡಕ್ಕೆ ಆಸರೆಯಾಗಿದ್ದಾರೆ.

ಕುಸಿತ ಕಂಡಿದ ಭಾರತ ಬಿ ತಂಡದ ಪರ ಮುಶೀರ್ ಖಾನ್ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಮುಶೀರ್ ಅವರ ಜವಾಬ್ದಾಯುತ ಇನ್ನಿಂಗ್ಸ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊದಲ ದಿನ ಅದ್ಭುತ ಪ್ರದರ್ಶನ ನೀಡಿದ ಮುಶೀರ್ ಖಾನ್ ಬೇರೆ ಯಾರು ಅಲ್ಲ, ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ.
ಜವಾಬ್ದಾರಿಯುತ ಇನ್ನಿಂಗ್ಸ್
ಭಾರತ ಬಿ ತಂಡದ 2 ವಿಕೆಟ್ ಪತನಗೊಂಡ ಬಳಿಕ ಬ್ಯಾಟಿಂಗ್‌ಗೆ ಬಂದ ಮುಶೀರ್ ಖಾನ್ ನಿಧನಗತಿಯಲ್ಲಿ ಆಟವಾಡಿದರು. ಮೊದಮೊದಲು ಚೆಂಡನ್ನು ಎದುರಿಸಲು ಒದ್ದಾಡಿದ ಅವರು, ಬಳಿಕ ಒಂದರ ಹಿಂದೊಂದರಂತೆ ಉತ್ತಮ ಶಾಟ್‌ಗಳನ್ನು ಆಡುವ ಮೂಲಕ ಅಮೋಘ ಶತಕ ಬಾರಿಸಿ ಸಂಭ್ರಮಿಸಿದರು. ಮೊದಲ 60 ಎಸೆತಗಳಲ್ಲಿ 6 ರನ್ ಗಳಿಸಿದ ಮುಶೀರ್, ಬಳಿಕ 118 ಎಸೆತಗಳಲ್ಲಿ 6 ಬೌಂಡರಿ ನೆರೆವಿನಿಂದ ಅರ್ಧಶತಕ ಪೂರೈಸಿದರು.
ಇಲ್ಲಿಗೆ ನಿಲ್ಲದ ಮುಶೀರ್ 205 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಭರ್ಜರಿ ಶತಕ ದಾಖಲಿಸಿದರು. ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡರು. ಇದಕ್ಕೂ ಮುನ್ನ ಮುಶೀರ್ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 2 ಶತಕಗಳನ್ನು ಕಲೆ ಹಾಕಿದ್ದು, ರಣಜಿ ಟ್ರೋಫಿಯಲ್ಲೂ ಮಿಂಚಿನ ಪ್ರದರ್ಶನ ನೀಡಿ ಶತಕ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications