For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ತಂಡ ಸೇರ್ತಾರಾ ಮುಂಬೈ ಬ್ಯಾಟರ್?

ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಸರ್ಫರಾಜ್ ಖಾನ್‌ ತಂಡಕ್ಕೆ ಮರಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ದೇಶೀಯ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುತ್ತಿರುವ ಸರ್ಫರಾಜ್ ಖಾನ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ. ಕಿವೀಸ್‌ ವಿರುದ್ಧದ ಸರಣಿಗೆ ಭಾರತ ತಂಡವನ್ನು ಜನವರಿ 3 ರಂದು ಘೋಷಿಸುವ ಸಾಧ್ಯತೆ ಇದೆ.

ಬಿಸಿಸಿಐ ಆಯ್ಕೆ ಸಮಿತಿ ಇತ್ತೀಚೆಗಷ್ಟೇ ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಿದೆ. ಆದರೆ ನ್ಯೂಜಿಲೆಂಡ್‌ ತಂಡದ ವಿರುದ್ಧದ ಸರಣಿಗೆ ಇನ್ನು ತಂಡವನ್ನು ಪ್ರಕಟಿಸಿಲ್ಲ. ಈ ತಂಡದಲ್ಲಿ ಸ್ಥಾನ ಪಡೆಯುವ ಆಸೆ ಸರ್ಫರಾಜ್ ಖಾನ್‌ ಅವರದ್ದಾಗಿದೆ. ಇವರು ಈಗಾಗಲೇ ಭಾರತ ಟೆಸ್ಟ್‌ ತಂಡದ ಪರ ಈಗಾಗಲೇ ಬ್ಯಾಟ್ ಮಾಡಿದ್ದರು. ಆದರೆ ಇವರು ಸೀಮಿತ ಓವರ್‌ಗಳ ಪರ ಬ್ಯಾಟ್ ಮಾಡಿಲ್ಲ. ಸರ್ಫರಾಜ್‌ ಖಾನ್‌ ಈಗಾಗಲೇ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸುತ್ತಿದ್ದು ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಿದ್ದಾರೆ.

Sarfaraz Khan Eyes Team India Return for NZ Series R Ashwin Backs the CSK Star s Ability

ವಿಜಯ್‌ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಬ್ಯಾಟ್ ಮಾಡಿದ ಸರ್ಫರಾಜ್ ಖಾನ್‌ ಆಡಿದ 4 ಪಂದ್ಯಗಳಲ್ಲಿ 220 ರನ್‌ ಸಿಡಿಸಿದ್ದಾರೆ. ಗೋವಾ ವಿರುದ್ಧದ ಪಂದ್ಯದಲ್ಲಿ ಸರ್ಫರಾಜ್‌ ಅಬ್ಬರದ ಬ್ಯಾಟಿಂಗ್ ನಡೆಸಿದ್ದರು. 75 ಎಸೆತಗಳಲ್ಲಿ ಸರ್ಫರಾಜ್‌ ಖಾನ್‌ 157 ರನ್‌ ಸಿಡಿಸಿದ್ದರು. ಇದರಲ್ಲಿ 9 ಬೌಂಡರಿ, 14 ಸಿಕ್ಸರ್‌ ಸೇರಿವೆ. ಸರ್ಫರಾಜ್‌ ಖಾನ್‌ ಈಗಾಗಲೇ ಭಾರತ ತಂಡದ ಪರ 6 ಟೆಸ್ಟ್‌ ಪಂದ್ಯವನ್ನು ಆಡಿದ್ದು, 37ರ ಸರಾಸರಿಯಲ್ಲಿ 371 ರನ್‌ ಸಿಡಿಸಿದ್ದಾರೆ. ಆದರೆ ಇವರು ಕಳೆದ ಒಂದು ವರ್ಷದಿಂದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ವಿಜಯ್‌ ಹಜಾರೆಯಲ್ಲಿ ಸರ್ಫರಾಜ್ ಖಾನ್ ಅವರು ನೀಡಿದ ಪ್ರದರ್ಶನ ಇವರನ್ನು ಏಕದಿನ ಸರಣಿಗೂ ಪರಿಗಣಿಸುವಂತೆ ಅಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಸರಣಿಗೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ಸರ್ಫರಾಜ್ ಖಾನ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಪರಿಗಣಿಸುತ್ತದಾ? ಎಂಬ ಪ್ರಶ್ನೆ ಉದ್ಭವಿಸಿದೆ. ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಇವರು ವಿಜಯ್‌ ಹಜಾರೆ ಟ್ರೋಫಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದು, ಭರವಸೆ ಮೂಡಿಸಿದ್ದಾರೆ.

ಸರ್ಫರಾಜ್‌ ಬೆನ್ನಿಗೆ ನಿಂತ ಅಶ್ವಿನ್

ಸರ್ಫರಾಜ್‌ ಖಾನ್‌ ಅವರ ಆಟವನ್ನು ಅಶ್ವಿನ್‌ ಸಹ ಕೊಂಡಾಡಿದ್ದಾರೆ. ಇವರನ್ನು ಚೆನ್ನೈ ಸೂಪರ್ ಕಿಂಗ್ಸ್‌ ಇತ್ತೀಚಿಗೆ ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಖರೀದಿಸಿತ್ತು. ಇವರಲ್ಲಿನ ಕ್ಷಮತೆಯನ್ನು ಬಳಸಿಕೊಳ್ಳುವ ಅವಶ್ಯಕತೆ ಸಿಎಸ್‌ಕೆ ತಂಡದ್ದಾಗಿದೆ. ಅಲ್ಲದೆ ಚೆನ್ನೈ ಪಿಚ್‌ ಸ್ಪಿನ್ ಬೌಲರ್‌ಗಳಿಗೆ ಸಹಾಯ ನೀಡುತ್ತದೆ. ಸರ್ಫರಾಜ್‌ ಖಾನ್ ಸ್ಪಿನ್ ಬೌಲರ್‌ಗಳ ವಿರುದ್ಧ ಉತ್ತಮವಾಗಿ ಆಡುವ ಕ್ಷಮತೆಯನ್ನು ಹೊಂದಿದ್ದಾರೆ. ಅಲ್ಲದೆ ಇವರು ಚೆನ್ನೈ ತಂಡದ ಮಧ್ಯಮ ಕ್ರಮಾಂಕದಲ್ಲಿ ಆಡಿ ತಂಡಕ್ಕೆ ಬಲ ತುಂಬ ಬಲ್ಲ ಆಟಗಾರ ಎಂದು ಸ್ಪಿನ್ ಮಾಂತ್ರಿಕ ಅಶ್ವಿನ್ ಹೇಳಿದ್ದಾರೆ.

Story first published: Thursday, January 1, 2026, 23:16 [IST]
Other articles published on Jan 1, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+