For Quick Alerts
ALLOW NOTIFICATIONS  
For Daily Alerts
 

ಸರ್ಫರಾಜ್‌ ಖಾನ್‌ ಮುಖದಲ್ಲಿ ಮಂದಹಾಸ: ಮನೆಗೆ ಹೊಸ ಅತಿಥಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ತಮ್ಮ ವೃತ್ತಿಜೀವನದ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಅದ್ಭುತ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸಿದ ನಂತರ ಅವರಿಗೆ ಭಾರತದ ಪರ ಆಡುವ ಅವಕಾಶ ಸಿಕ್ಕಿತ್ತು.

ಪ್ರಸ್ತುತ ಸರ್ಫರಾಜ್ ಖಾನ್ ಅವರು ಭಾರತ ಟೆಸ್ಟ್ ತಂಡದಲ್ಲಿ ಯಶಸ್ವಿ ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ. ಈ ಎಲ್ಲದರ ಸಂತಸದ ಮಧ್ಯೆ ಸರ್ಫರಾಜ್ ಖಾನ್ ಮನೆಯಲ್ಲಿ ಸಂಭ್ರಮಾಚರಣೆ ನಡೆದಿದೆ. ಸರ್ಫರಾಜ್ ಪತ್ನಿ ರೊಮಾನಾ ಜಹೂರ್ ಅವರು ಅಕ್ಟೋಬರ್ 21 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸರ್ಫರಾಜ್ ಖಾನ್ ಗಂಡು ಮಗುವಿಗೆ ತಂದೆಯಾಗಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಘೋಷಿಸಿದ್ದಾರೆ.

Sarfaraz Khan has become the father of baby boy

ಸರ್ಫರಾಜ್ ಖಾನ್ ತಮ್ಮ ತಂದೆ ನೌಶಾದ್ ಖಾನ್ ಅವರೊಂದಿಗೆ ತಮ್ಮ ಮಗನನ್ನು ತಮ್ಮ ಮಡಿಲಲ್ಲಿಟ್ಟುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಈ ಫೋಟೋ ಎಲ್ಲೆಡೆ ಭಾರೀ ವೈರಲ್ ಆಗಿದೆ. ಸರ್ಫರಾಜ್ ಖಾನ್ ವೃತ್ತಿಜೀವನವನ್ನು ರೂಪಿಸುವಲ್ಲಿ ಅವರ ತಂದೆ ಪ್ರಮುಖ ಪಾತ್ರ ವಹಿಸಿದ್ದಾರೆ.

ಲವ್‌ಸ್ಟೋರಿ

ಸರ್ಫರಾಜ್ ಖಾನ್ ಅವರ ಪತ್ನಿ ರೊಮಾನಾ ಜಹೂರ್ ಕಾಶ್ಮೀರದ ನಿವಾಸಿ. ಇಬ್ಬರ ಭೇಟಿಯೂ ಅದ್ಭುತವಾಗಿತ್ತು. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಸರ್ಫರಾಜ್ ಖಾನ್ ಮತ್ತು ರೊಮಾನಾ ಜಹೂರ್ ಮೊದಲ ಭೇಟಿಯಾಗಿತ್ತು. ಸರ್ಫರಾಜ್ ಅವರ ಸೋದರ ಸಂಬಂಧಿವೊಬ್ಬರು ರೊಮಾನಾ ಅವರನ್ನು ಸರ್ಫರಾಜ್ ಅವರಿಗೆ ಪರಿಚಯಿಸಿದ್ದರು. ಆಗ ರೊಮಾನಾ ದೆಹಲಿಯಲ್ಲಿ ಎಂಎಸ್‌ಸಿ ಓದುತ್ತಿದ್ದರು. ಸರ್ಫರಾಜ್ ಅವರ ಸೋದರಸಂಬಂಧಿ ಕೂಡ ಅವರೊಂದಿಗೆ ಅಧ್ಯಯನ ಮಾಡಿತ್ತಿದ್ದರು. ಹೀಗೆ ಮುಂದುವರೆದ ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಯಿತು. ಕೊನೆಗೆ ಕಳೆದ ವರ್ಷ ರೊಮಾನಾ ಅವರನ್ನು ಸರ್ಫರಾಜ್ ಖಾನ್ ಮದುವೆಯಾದರು.

ಸರ್ಫರಾಜ್ ಖಾನ್ ಅವರ ಜೀವನದಲ್ಲಿ 2024ರ ಇಸವಿ ಸಂತಸದ ಕ್ಷಣಗಳನ್ನು ನೀಡಿದೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಪಾರ್ದಪಾಣೆ ಮಾಡಿದರು. ಆಡಿದ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದರು. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸರ್ಫರಾಜ್ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸಿದ್ದರು. ಇದೀಗ ಗಂಡು ಮಗುವಿನ ಜನನವು ಅವರ ಜೀವನದಲ್ಲಿ ಸಂತೋಷದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ.

Story first published: Tuesday, October 22, 2024, 8:33 [IST]
Other articles published on Oct 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+