Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ಎರಡನೇ ಟೆಸ್ಟ್‌ನಲ್ಲೂ ಸರ್ಫರಾಜ್‌ ಖಾನ್‌ಗೆ ಅವಕಾಶ ಸಿಗುವುದು ಡೌಟ್: ಇಲ್ಲಿದೆ ಕಾರಣ

ಸದ್ಯ ಭಾರತದಲ್ಲಿ ದೇಶೀಯ ಟೂರ್ನಿಗಳು ಆರಂಭವಾಗಿವೆ. ಈಗಾಗಲೇ ಭಾರತ ಎ ತಂಡ ದುಲೀಪ್‌ ಟ್ರೋಫಿಯಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಈಗ ಎರಡನೇ ಟ್ರೋಫಿಯ ಸಿದ್ಧತೆಗಳು ಭರದಿಂದ ಸಾಗಿವೆ. ಮುಂದಿನ ತಿಂಗಳು ಇರಾನಿ ಕಪ್ ಕ್ರಿಕೆಟ್‌ ಪಂದ್ಯಗಳಿ ನಡೆಯಲಿವೆ. ಈ ಟೂರ್ನಿಯಲ್ಲಿ ಮುಂಬೈ ಹಾಗೂ ರೆಸ್ಟ್‌ ಆಫ್‌ ಇಂಡಿಯಾ ತಂಡಗಳು ಕಾದಾಟ ನಡೆಸಲಿವೆ.

ಈಗಾಗಲೇ ಬಾಂಗ್ಲಾದೇಶದ ವಿರುದ್ಧ ಮೊದಲ ಹಾಗೂ ಎರಡನೇ ಟೆಸ್ಟ್‌ನಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಸರ್ಫರಾಜ್‌ ಖಾನ್‌, ಅವರನ್ನು ಬಿಸಿಸಿಐ ಭಾರತ ತಂಡದಿಂದ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಇರಾನಿ ಟ್ರೋಫಿಗೆ ಕ್ರಿಕೆಟ್‌ ಟೂರ್ನಿಗೆ ಲಕ್ನೋ ಆತಿಥ್ಯ ವಹಿಸಲಿದ್ದು, ಅಕ್ಟೋಬರ್ 1 ರಿಂದ 5 ರವರೆಗೆ ಪಂದ್ಯಗಳು ನಡೆಯಲಿವೆ. ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ತಪ್ಪಿಸಿಕೊಂಡಿದ್ದ ಸರ್ಫರಾಜ್ ಖಾನ್‌, ಎರಡನೇ ಟೆಸ್ಟ್‌ನಲ್ಲೂ ಆಡುವುದು ಡೌಟ್.

Sarfaraz Khan Likely to Miss Out on Second Test Against Bangladesh May Play in Irani Cup

ಕಾನ್ಪುರದಲ್ಲೂ ಅವಕಾಶ ಸಿಗುವುದು ಕಷ್ಟ

ಎರಡನೇ ಟೆಸ್ಟ್‌ನಲ್ಲಿ ಸರ್ಫರಾಜ್ ಖಾನ್‌ ತಂಡ ಸೇರುವುದು ಬಹಳ ಕಷ್ಟ. ತಂಡದಲ್ಲಿನ ಯಾರಾದರೂ ಆಟಗಾರರಿಗೆ ಗಾಯವಾಗಿ ತಂಡದಿಂದ ಹೊರ ನಡೆದರೆ ಮಾತ್ರ, ಸರ್ಫರಾಜ್ ಪ್ಲೇಯಿಂಗ್ ಇಲೆವೆನ್ ಸೇರುವ ಸಾಧ್ಯತೆಗಳು ಹೆಚ್ಚು. ಇಲ್ಲದಿದ್ದರೆ ಮತ್ತೆ ಅವರು ಮೊದಲ ಟೆಸ್ಟ್‌ ನಂತೆ ಬೆಂಚ್ ಕಾಯಬೇಕಾಗುತ್ತದೆ. ಕಾನ್ಪುರ್ ಟೆಸ್ಟ್‌ನಲ್ಲೂ ಭಾರತ ಕೆಎಲ್‌ ರಾಹುಲ್ ಅವರ ಆಟದ ಮೇಲೆ ನಂಬಿಕೆ ಇಟ್ಟು ಆಡುವ ಬಳಗದಲ್ಲಿ ಅವಕಾಶ ನೀಡಬಹುದು. ಹೀಗೆ ಆದಲ್ಲಿ ಸರ್ಫರಾಜ್ ಮತ್ತೆ ಬೆಂಚ್ ಕಾಯಬೇಕಾಗುತ್ತದೆ.

ಅಜಿಂಕ್ಯ ರಹಾನೆ ಮತ್ತೆ ಅಂಗಳಕ್ಕೆ ಪ್ರವೇಶಿಸಲಿದ್ದಾರೆ. ಈ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಮುಂಬೈ ಪರ ಶ್ರೇಯಸ್ ಅಯ್ಯರ್, ಮುಶೀರ್ ಖಾನ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್ ಅವರಂತಹ ಟಾಪ್ ಆಟಗಾರರು ಆಡುವುದು ಬಹುತೇಕ ಖಚಿತವಾಗಿದೆ. ಶಾರ್ದೂಲ್ ಠಾಕೂರ್ ಗಾಯದಿಂದ ಚೇತರಿಸಿಕೊಂಡ ಬಳಿಕ ಅಂಗಳಕ್ಕೆ ಇಳಿಯಲು ಫಿಟ ಆಗಿದ್ದಾರೆ.

ಇನ್ನು ಇಲ್ಲ ಸ್ಪಷ್ಟತೆ

ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ತಂಡದಲ್ಲಿರುವ ಸರ್ಫರಾಜ್ ಖಾನ್‌, ಇರಾನಿ ಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ. ಕಾನ್ಪುರದಿಂದ ಲಕ್ನೋಗೆ ತಲುಪಲು ಒಂದು ಗಂಟೆಯ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಎರಡನೇ ಟೆಸ್ಟ್‌ ಆರಂಭವಾದ ಮೇಲೂ ಸರ್ಫರಾಜ್ ಖಾನ್‌ ಮುಂಬೈ ತಂಡವನ್ನು ಸೇರಬಹುದು. ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ ಅಗರ್ಕರ್ ಸರ್ಫರಾಜ್ ಇರಾನಿ ಟೂರ್ನಿಯಲ್ಲಿ ಆಡಬೇಕೆಂದು ಬಯಸುತ್ತಾರೆ.

ಇರಾನಿ ಕಪ್‌ ಕ್ರಿಕೆಟ್‌ ಟೂರ್ನಿಗೆ ಬಿಸಿಸಿಐ ಇಂದು ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಪಾದದ ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ತುಷಾರ್ ದೇಶಪಾಂಡೆ ಅವರು ಈ ಪಂದ್ಯದಲ್ಲಿ ಆಡುವುದಿಲ್ಲ. ರಣಜಿ ಟ್ರೋಫಿಯ ಆರಂಭಿಕ ಪಂದ್ಯಗಳಲ್ಲಿ ಆಡುವುದು ಕಡಿಮೆ ಎಂದು ಹೇಳಲಾಗುತ್ತಿದೆ.

Story first published: Tuesday, September 24, 2024, 9:51 [IST]
Other articles published on Sep 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+