IPL 2025 Punjab Kings: ಅನ್‌ಸೋಲ್ಡ್ RCB ಮಾಜಿ ಪ್ಲೇಯರ್‌ಗೆ ಜಾಕ್‌ಪಾಟ್
ಟೀಮ್ ಇಂಡಿಯಾದ ಭರವಸೆಯ ಆಟಗಾರ ಐಪಿಎಲ್ ಮೆಗಾ ಹರಾಜಿನಲ್ಲಿ ಬಿಕರಿಯಾಗದೇ ನಿರಾಸೆ ಅನುಭವಿಸಿದರು. ಇವರಿಗೆ ಯಾವೊಬ್ಬ ಮಾಲೀಕ ಆಗ ಮಣೆ ಹಾಕಿರಲಿಲ್ಲ. ಆದರೆ ಈಗ ಆ ಪ್ಲೇಯರ್‌ಗೆ ಜಾಕ್ ಪಾಟ್ ಹೊಡೆಯುವ ಸಾಧ್ಯತೆ ಇದೆ. ಬೆರೊಬ್ಬ ಪ್ಲೇಯರ್ ಗಾಯಕ್ಕೆ ತುತ್ತಾಗಿದ್ದರಿಂದ ಈ ಪ್ಲೇಯರ್ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ. ಹಾಗಿದ್ದರೆ ಆ ಪ್ಲೇಯರ್ ಯಾರು? ಯಾವ ತಂಡದ ಪರ ಖಣಕ್ಕೆ ಇಳಿಯಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಸೌದಿಯಲ್ಲಿ ಕಳೆದ ನವೆಂಬರ್‌ನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಿತು. ಈ ವೇಳೆ ದೇಶೀಯ ಸೇರಿದಂತೆ ವಿದೇಶಿ ಆಟಗಾರರು ಸಹ ಅಖಾಡದಲ್ಲಿದ್ದರು. ಆದರೆ ಟೀಮ್ ಂಇಂಡಿಯಾದ ಈ ಪ್ಲೇಯರ್‌ನನ್ನು ಖರೀದಿಸುವ ಮನಸ್ಸನ್ನು ಯಾವೊಬ್ಬ ಫ್ರಾಂಚೈಸಿ ಮಾಡಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಕೈ ಬಿಟ್ಟ ಪ್ಲೇಯರನನ್ನೇ ಹುಡುಕಾತ್ತಾ ಫ್ರಾಂಚೈಸಿ ಹೊರಟಿದೆ. ಹೀಗೆ ಪ್ಲೇಯರ್ ಹಿಂದೆ ಬಿದ್ದಿರುವ ತಂಡ ಪಂಜಾಬ್ ಕಿಂಗ್ಸ್ ಇದಕ್ಕೆ ಕಾರಣವೂ ಇದೆ.

ಪಂಜಾಬ್ ಪ್ಲೇಯರ್‌ಗೆ ಗಾಯ
ಪಂಜಾಬ್ ಕಿಂಗ್ಸ್ ತಂಡ ಈ ಬಾರಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಗಾಯಕ್ಕೆ ತುತ್ತಾಗಿದ್ದಾರೆ. ಇವರು ಐಪಿಎಲ್ 2025ರಲ್ಲಿ ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ. ಇವರ ಬದಲಿಗೆ ಪಂಜಾಬ್ ಬೇರೆ ಪ್ಲೇಯರ್ ಹುಡುಕಾಟದಲ್ಲಿದೆ. ಜೋಶ್‌ಗೆ ಪಂಜಾಬ್ ಹರಾಜಿನಲ್ಲಿ 2.60 ಕೋಟಿ ನೀಡಿ ತಂಡಕ್ಕೆ ಬರ ಮಾಡಿಕೊಂಡಿತ್ತು. ಆದರೆ ಈ ವಿಕೆಟ್ ಕೀಪರ್ ಗಾಯಕ್ಕೆ ತುತ್ತಾಗಿದ್ದು ಫ್ರಾಂಚೈಸಿ ಟೆನ್ಷನ್ ಹೆಚ್ಚಿಸಿದೆ.
ಜೋಶ್ ಗಾಯದ ಬಗ್ಗೆ ಫ್ರಾಂಚೈಸಿ ಇನ್ನು ಐಪಿಎಲ್ ಗರ್ವನರ್ ಕನ್ಸಿಲ್‌ಗೆ ಮಾಹಿತಿಯನ್ನು ನೀಡಿಲ್ಲ. ಮಾಲೀಕರು ಮಾಹಿತಿಯನ್ನು ನೀಡಿದ ಬಳಿಕ ಆಟಗಾರರ ಬದಲಾವಣೆಯ ಬಗ್ಗೆ ತಂಡ ಮನಸ್ಸು ಮಾಡಲಿದೆ. ಹಾಗಿದ್ದರೆ ತಂಡಕ್ಕೆ ಎಂಟ್ರಿ ನೀಡಲಿರುವ ಆ ಆಟಗಾರ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಪಂಜಾಬ್ ಸೇರಲಿರುವ ಭರವಸೆಯ ಪ್ಲೇಯರ್
ಐಪಿಎಲ್ ಹರಾಜಿನಲ್ಲಿ ಮಾಲೀಕರ ಚಿತ್ತ ಕದಿಯುವಲ್ಲಿ ವಿಫಲರಾಗಿದ್ದ ಟೀಮ್ ಇಂಡಿಯಾದ ಭರವಸೆಯ ಆಟಗಾರ ಸರ್ಫರಾಜ್ ಖಾನ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇವರು ಈಗಾಗಲೇ ಭಾರತ ತಂಡದ ಪರ ತಮ್ಮ ಧಮಾಕೆದಾರ್ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ತಂಡದ ಭಾಗವಾಗಿದ್ದರೂ ಸಹ ಆಡುವ ಅವಕಾಶ ಸಿಕ್ಕಿರಲಿಲ್ಲ. ಈಗ ಈ ಪ್ಲೇಯರ್‌ಗೆ ಪಂಜಾಬ್ ಅವಕಾಶ ನೀಡುವ ಸಾಧ್ಯತೆ ಇದೆ.
ಸರ್ಫರಾಜ್ ಖಾನ್ ದೇಶೀಯ ಟೂರ್ನಿಗಳಲ್ಲಿ ವಿಕೆಟ್ ಕೀಪರ್ ಆಗಿ ಸಹ ಕಾಣಿಸಿಕೊಂಡಿದ್ದರಿಂದ ಇವರಿಗೆ ಅವಕಾಶ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಇವರು ಈಗಾಗಲೇ ಆರ್‌ಸಿಬಿ ಡೆಲ್ಲಿ, ಪಂಜಾಬ್ ತಂಡದ ಪರ ಐಪಿಎಲ್‌ನಲ್ಲಿ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications