For Quick Alerts
ALLOW NOTIFICATIONS  
For Daily Alerts
 

Sarfaraz Khan: ಪಪ್ಪಾ ಕೆಹತೇ ಹೈ ಬಡಾ ನಾಮ್ ಕರೇಗಾ... ಕಣ್ಣಂಚಲ್ಲಿ ಆನಂದಭಾಷ್ಪ: ಅಪ್ಪನ್ನೊಂದಿಗೆ ಬಿಗಿ ಅಪ್ಪುಗೆ

ಕ್ರಿಕೆಟ್ ಆಟಗಾರನಿಗೆ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡುವ ಕನಸು ಇದ್ದೇ ಇರುತ್ತದೆ. ತನ್ನನ್ನು ರಾಷ್ಟ್ರೀಯ ತಂಡದಲ್ಲಿ ಆಯ್ಕೆ ಮಾಡಿದಾಗಲೇ ಅರ್ಧ ಕೆಲಸ ಆಗಿರುತ್ತದೆ. ಇನ್ನು ಅರ್ಧ ಕೆಲಸ ತಂಡದಲ್ಲಿ ಸ್ಥಾನ ಪಡೆಯುವುದು. ಒಂದು ವೇಳೆ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಕ್ಕರೆ ಅದು ಸ್ಮರಣೀಯ ಘಳಿಗೆ. ವರ್ಷಗಟ್ಟಲೇ ಮಾಡಿದ ತಪಸ್ಸಿಗೆ ದೇವರು ಬಂದು ವರ ನೀಡಿದಂತೆ ಆಗುತ್ತದೆ.

ಇಂತಹದ್ದೇ ಸನ್ನವೇಶಕ್ಕೆ ರಾಜ್‌ಕೋಟ್‌ ಅಂಗಳ ಸಾಕ್ಷಿಯಾಗಿತ್ತು. ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರಿಸಿ ಬೊಬ್ಬೆರಿದ ಮುಂಬೈ ತಂಡದ ಸ್ಟಾರ್ ಬ್ಯಾಟರ್‌ ಸರ್ಫರಾಜ್‌ ಖಾನ್‌, ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶವನ್ನು ಪಡೆದರು. ಸರ್ಫರಾಜ್‌ ಸತತ ಕಠಿಣ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕದೆ. ಈ ಸಂತಸದ ಕ್ಷಣಕ್ಕೆ ಸರ್ಫರಾಜ್‌ ಕುಟುಂಬ ಸಾಕ್ಷಿ ಆಯಿತು. ನಿಜಕ್ಕೂ ಸರ್ಫರಾಜ್‌ ತಂದೆ ಖುಷಿಯಲ್ಲಿ ತೇಲಾಡಿದ ಕ್ಷಣ..

Sarfaraz Khan: Pappa Kehate Hai Bada Naam Karega.. Father Cant Control His Tears Big Hug With Dad

ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯಕ್ಕಾಗಿ ಭಾರತ ಪ್ಲೇಯಿಂಗ್ ಇಲೆವೆನ್‌ನಲ್ಲಿ ಬದಲಾವಣೆ ಮಾಡಿದೆ. ಟೀಂ ಇಂಡಿಯಾ ಸರ್ಫರಾಜ್ ಖಾನ್ ಗೆ ಅವಕಾಶ ನೀಡಿದೆ. ಸರ್ಫರಾಜ್ ಚೊಚ್ಚಲ ಟೆಸ್ಟ್ ಪಂದ್ಯ ಆಡುವ ಅವಕಾಶ ಪಡೆದರು. ಟಾಸ್‌ಗೂ ಮುನ್ನ ಅವರಿಗೆ ಭಾರತ ತಂಡದ ಕ್ಯಾಪ್ ನೀಡಲಾಯಿತು. ಸ್ಟಾರ್‌ ಸ್ಪಿನ್ ಬೌಲರ್‌ ಅನಿಲ್‌ ಕುಂಬ್ಳೆ ಭಾರತ ತಂಡದ ಕ್ಯಾಪ್ ನೀಡಿದರು.

ಟೋಪಿಯನ್ನು ಪಡೆದ ಸರ್ಫರಾಜ್ ಕ್ರೀಡಾಂಗಣದಲ್ಲಿ ನಿಂತಿದ್ದ ತಂದೆಯ ಬಳಿಗೆ ಸರ್ಫರಾಜ್ ಹೋದರು. ಟೀಂ ಇಂಡಿಯಾ ಕ್ಯಾಪ್ ನೋಡಿದ ಸರ್ಫರಾಜ್ ತಂದೆಗೆ ಕಣ್ಣೀರು ತಡೆಯಲಾಗಲಿಲ್ಲ. ಸರ್ಫರಾಜ್ ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈಗ ಅವರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದಾರೆ.

Sarfaraz Khan: Pappa Kehate Hai Bada Naam Karega.. Father Cant Control His Tears Big Hug With Dad

ರಾಜ್‌ಕೋಟ್ ಟೆಸ್ಟ್‌ಗಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಹನ್ನೊಂದರಲ್ಲಿ ಸರ್ಫರಾಜ್ ಮತ್ತು ಧ್ರುವ್ ಜುರೆಲ್ ಸ್ಥಾನ ಪಡೆದಿದ್ದಾರೆ. ಈ ಇಬ್ಬರೂ ಆಟಗಾರರು ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಇದು ಸರ್ಫರಾಜ್ ವೃತ್ತಿ ಜೀವನದ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಈ ಇಬ್ಬರೂ ಆಟಗಾರರಿಗೆ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕ್ಯಾಪ್ ನೀಡಲಾಯಿತು. ಬಿಸಿಸಿಐ ಈ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.

ಸರ್ಫರಾಜ್ ಟೆಸ್ಟ್ ಕ್ಯಾಪ್ನೊಂದಿಗೆ ತನ್ನ ತಂದೆಯ ಹತ್ತ ಬಂದು ನಿಲ್ಲುತ್ತಾರೆ. ಇದನ್ನು ನೋಡಿದ ತಂದೆ ಭಾವುಕರಾದರು ಮತ್ತು ಕಣ್ಣೀರು ತಡೆಯಲಾಗಲಿಲ್ಲ. ಅವರು ಸರ್ಫರಾಜ್ ಅವರನ್ನು ತಬ್ಬಿಕೊಂಡರು.

Sarfaraz Khan: Pappa Kehate Hai Bada Naam Karega.. Father Cant Control His Tears Big Hug With Dad

ಸರ್ಫರಾಜ್ ವೃತ್ತಿಜೀವನ

ಸರ್ಫರಾಜ್ ಖಾನ್ ಅವರ ಈವರೆಗಿನ ದಾಖಲೆ ಉತ್ತಮವಾಗಿದೆ. ಪ್ರಥಮ ದರ್ಜೆಯಲ್ಲೂ ಅವರು ತ್ರಿಶತಕ ಬಾರಿಸಿದ್ದಾರೆ. ಈ ಮಾದರಿಯ 45 ಪಂದ್ಯಗಳಲ್ಲಿ ಸರ್ಫರಾಜ್ 3912 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 14 ಶತಕ ಮತ್ತು 11 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಸರ್ಫರಾಜ್ ಅಜೇಯ 301 ರನ್ ಗಳಿಸಿದ್ದು ಸರ್ಫರಾಜ್ ಅವರ ಅತ್ಯುತ್ತಮ ಸ್ಕೋರ್. ಮುಂಬೈ ಬ್ಯಾಟರ್‌ 37 ಲಿಸ್ಟ್ ಎ ಪಂದ್ಯಗಳಲ್ಲಿ 629 ರನ್ ಗಳಿಸಿದ್ದಾರೆ. ಸರ್ಫರಾಜ್ 96 ಟಿ20 ಪಂದ್ಯಗಳನ್ನೂ ಆಡಿದ್ದು, ಇದರಲ್ಲಿ 1188 ರನ್ ಗಳಿಸಿದ್ದಾರೆ.

ಭಾರತ ಎ ಪರ ಶತಕ

ಸರ್ಫರಾಜ್ ಭಾರತ ಎ ಪರ ಕೂಡ ಆಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ಶತಕ ಬಾರಿಸಿದ್ದರು. ಜನವರಿ 24 ರಂದು ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸರ್ಫರಾಜ್ 161 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಒಂದು ಇನ್ನಿಂಗ್ಸ್‌ನಲ್ಲಿ 55 ರನ್ ಗಳಿಸಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದರು.

Story first published: Thursday, February 15, 2024, 13:30 [IST]
Other articles published on Feb 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+