Sarfaraz Khan: ಬೆಂಗಳೂರಿನಲ್ಲಿ ಸ್ಮರಣೀಯ ಶತಕ ಬಾರಿಸಿದ ಸರ್ಫರಾಜ್ ಖಾನ್
ಭಾರತದ ಭರವಸೆಯ ಬ್ಯಾಟರ್ ಸರ್ಫರಾಜ್ ಖಾನ್ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಚಿನ್ನದಂತಹ ಇನಿಂಗ್ಸ್ ಕಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸರ್ಪರಾಜ್ ಖಾನ್, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿ ಅಬ್ಬರಿಸಿದರು.
ದೇಶೀಯ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಸರ್ಫರಾಜ್, ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದರು. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಆಡುವ ಅವಕಾವನ್ನು ಪಡೆದಿದ್ದ ಸರ್ಫರಾಜ್ ಆ ಸರಣಿಯಲ್ಲಿ ಮೂರು ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಬೆಂಗಳೂರು ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಪಡೆದ ಸರ್ಫರಾಜ್ ಖಾನ್, ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ತಮ ಕಲೆಯ ಅನಾವರಣ ಮಾಡಿದರು.

ಸರ್ಫರಾಜ್ ಶತಕ
ಬೆಂಗಳೂರು ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಪಂದ್ಯ ಆರಂಭವಾದಾಗ ಭಾರತ ತಂಡದ ಯುವ ಆಟಗಾರ ಸರ್ಫರಾಜ್ ಖಾನ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಸರ್ಫರಾಜ್ ಶುಕ್ರವಾರ 70 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದರು, ಶನಿವಾರ ಮೊದಲಾವಧಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಸರ್ಫರಾಜ್ ಅಬ್ಬರಿಸಿದರು. ಪಾಸಿಟಿವ್ ಇಂಟೆಂಟ್‌ನಲ್ಲಿ ಬ್ಯಾಟ್ ಮಾಡಿದ ಸರ್ಫರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಶತಕವನ್ನು ಬಾರಿಸಿದರು. ಕೇವಲ 110 ಎಸೆತಗಳಲ್ಲಿ ಇವರು ಮೊದಲ ಶತಕ ಬಾರಿಸಿದರು. ಇದು ಸರ್ಫರಾಜ್ ಅವರ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಪಂದ್ಯ.

ಗಿಲ್ ಸ್ಥಾನದಲ್ಲಿ ಸರ್ಫರಾಜ್
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶುಭಮನ್ ಗಿಲ್ ಅವರು ಬೆಂಗಳೂರು ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಯಕ್ಕೆ ತುತ್ತಾಗಿದ್ದರು. ಇವರು ಗಾಯಕ್ಕೆ ತುತ್ತಾಗುತ್ತಿದ್ದಂತೆ ಆಡುವ ಅವಕಾಶವನ್ನು ಸರ್ಫರಾಜ್ ಖಾನ್ ಆಡುವ ಪಡೆದರು. ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಈ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಮಾಡಿ, ನಾಲ್ಕನೇ ಕ್ರಮಾಂಕವನ್ನು ಸರ್ಫರಾಜ್‌ಗೆ ಬಿಟ್ಟು ಕೊಟ್ಟರು. ಸಿಕ್ಕ ಅವಕಶಾದಲ್ಲಿ ಸರ್ಫರಾಜ್ ಅಮೋಘ ಬ್ಯಾಟಿಂಗ್ ನಡೆಸಿದರು.
ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಸ ಲಭಿಸಲಿಲ್ಲ. ಇದರಿಂದ ಹತಾಶರಾಗದ ಸರ್ಫರಾಜ್ ಮತ್ತೆ ದೇಶೀಯ ಸರ್ಕಿಟ್‌ಗೆ ವಾಪಸ್ ಆದರು. ಇರಾನಿ ಟ್ರೋಫಿ ಕ್ರಿಕೆಟ್‌ನಲ್ಲಿ ಅಮೋಘ ದ್ವಿಶತಕ ಬಾರಿಸಿ ತಮ್ಮ ಕ್ಷಮತೆಯನ್ನು ಪ್ರದರ್ಶಿಸಿದರು. ಪರಿಣಾಮ ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸರ್ಫರಾಜ್‌ಗೆ ಆಡುವ ಅವಕಾಶವನ್ನು ಪಡೆದರು.
ದೇಶೀಯ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್ ಅಬ್ಬರದ ಪ್ರದರ್ಶನ ನೀಡಿದ್ದಾರೆ. ರನ್‌ಗಳನ್ನು ಕಲೆ ಹಾಕಿದ ಸರ್ಫರಾಜ್ ಇದೇ ವರ್ಷ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದರು. ತಮ್ಮಲ್ಲಿ ಎಲ್ಲ ರೀತಿಯ ಶಾಟ್‌ಗಳು ಇರುವುದಾಗಿ ಸರ್ಫರಾಜ್ ತಮ್ಮ ಬ್ಯಾಟಿಂಗ್‌ನಿಂದ ತೋರಿಸಿದರು.
ಬೆಂಗಳೂರಿನ ಅಂಗಳದಲ್ಲಿ ಈಗಾಗಲೇ ಆಡಿರುವ ಅನುಭವ ಹೊಂದಿರುವ ಸರ್ಫರಾಜ್ ಆರ್‌ಸಿಬಿ ಪರ ಆಡಿದ್ದಾರೆ. ಸರ್ಫರಾಜ್ ಈ ಅನುಭವ ಬಳಸಿಕೊಂಡು ಬ್ಯಾಟ್ ಮಾಡಿದ ಸರ್ಫರಾಜ್ ಇನಿಂಗ್ಸ್‌ನ 57ನೇ ಓವರ್‌ನಲ್ಲಿ ಶತಕ ಸಾಧನೆ ಮಾಡಿದರು. ಟೀಮ್ ಸೌಥಿಗೆ ಬ್ಯಾಕ್ ಫುಟ್‌ನಲ್ಲಿ ಅದ್ಭುತ ಪಂಚ್ ನೀಡುವ ಮೂಲಕ ಆ ಸಾಧನೆಯನ್ನು ಪೂರ್ಣಗೊಳಿಸಿದರು. ಸರ್ಫರಾಜ್ ಮುಖದಲ್ಲಿ ಈ ಶತಮಾನದ ಸಂತಸ ಸ್ಪಷ್ಟವಾಗಿ ಕಾಣುತ್ತಿತ್ತು. ಈ ಕ್ಷಣವನ್ನು ಮೈದಾನದಲ್ಲಿ ವಿಶೇಷವಾಗಿ ಸಂಭ್ರಮಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications