Sarfaraz Khan: ತಂದೆಯಾದ ಸಂತಸದಲ್ಲಿ ಸರ್ಫರಾಜ್ ಖಾನ್; ಜಸ್ಟಿನ್ ಬೀಬರ್ ಹಾಡು ಹಾಡಿದ ವಿಡಿಯೋ ವೈರಲ್!
ತಂದೆಯ ಕನಸನ್ನು ನನಸು ಮಾಡಿ ಟೀಮ್ ಇಂಡಿಯಾದಲ್ಲಿ ಅಬ್ಬರಿಸುತ್ತಿರುವ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ಎಲ್ಲರ ಚಿತ್ತ ಕದ್ದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಬಾರಿಸಿದ ಮೊದಲ ಅಂತಾರಾಷ್ಟ್ರೀಯ ಶತಕದ ಸಂಭ್ರಮದಲ್ಲಿದ್ದ ಸರ್ಫರಾಜ್ ಖಾನ್ ಮನೆಗೆ ಭಾನುವಾರ ಮತ್ತೊಂದು ದೊಡ್ಡ ಗುಡ್ ನ್ಯೂಸ್ ತಲುಪಿತ್ತು.
ಸರ್ಫರಾಜ್ ಖಾನ್ ತಮ್ಮ ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ದೊಡ್ಡ ಉಡುಗೊರೆಯನ್ನು ಪಡೆದರು. ಸರ್ಫರಾಜ್ ಪತ್ನಿ ರೊಮಾನಾ ಜಹೂರ್ ಅವರು ಅಕ್ಟೋಬರ್ 21 ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಬಳಿಕ ಸರ್ಫರಾಜ್ ಖಾನ್ ತಮ್ಮ ತಂದೆ ನೌಶಾದ್ ಖಾನ್ ಅವರೊಂದಿಗೆ ತಮ್ಮ ಮಗನನ್ನು ಹಿಡಿದುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದರು. ಇದೀಗ ಸರ್ಫರಾಜ್ ಖಾನ್ ತಂದೆಯಾದ ಸಂತಸವನ್ನು ಹಾಡು ಹೇಳುವ ಮೂಲಕ ವ್ಯಕ್ತಡಿಸಿದ್ದಾರೆ.

ತಂದೆಯಾಗಿರುವ ಸರ್ಫರಾಜ್ ಖಾನ್ ಅವರ ಸಂತೋಷಕ್ಕೆ ಮಿತಿಯೇ ಇಲ್ಲ. ಅಷ್ಟರ ಮಟ್ಟಿಗೆ ಸರ್ಫರಾಜ್ ಖಾನ್ ಸಂತಸದ ಕಡಲಲ್ಲಿ ಮುಳುಗಿದ್ದಾರೆ. ಕೆನಡಾದ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಅವರ ಹಾಡು ಹಾಡುವ ಮೂಲಕ ಸರ್ಫರಾಜ್ ಖಾನ್ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಅವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಸರ್ಫರಾಜ್ ಖಾನ್ ಅವರಿಗೆ ಎಲ್ಲೆಡೆಯಿಂದ ಸಾಕಷ್ಟು ಅಭಿನಂದನೆಗಳು ಬಂದಿವೆ.
ಈ ವಿಡಿಯೋದಲ್ಲಿ ಸರ್ಫರಾಜ್ ಖಾನ್ ಜಸ್ಟಿನ್ ಬೈಬರ್ ಅವರ 'ಬೇಬಿ' ಹಾಡನ್ನು ಹಾಡುತ್ತಿದ್ದಾರೆ. ಒಟ್ಟಿಗೆ ಕುಳಿತಿದ್ದವರೆಲ್ಲ ನಗುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಇನ್‌ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ಮಾಡುವಾಗ, 'ಹುಟ್ಟುಹಬ್ಬದ ಶುಭಾಶಯಗಳು ಹೊಸ ಪಾಪಾ, ನಿಮ್ಮ ಮಗನಿಗಾಗಿ ಇದನ್ನು ಹಾಡಿ. ಜಸ್ಟಿನ್ ದಯವಿಟ್ಟು ಈ ಹಾಡನ್ನು ಕೇಳಬೇಡಿ ಎಂದು ತಮಾಷೆಯಾಗಿ ಬರೆದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸರ್ಫರಾಜ್ ಖಾನ್ ಅದ್ಭುತ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸಿದ ನಂತರ ಅವರಿಗೆ ಭಾರತದ ಪರ ಆಡುವ ಅವಕಾಶ ಸಿಕ್ಕಿತ್ತು. ಈ ವರ್ಷ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ತನ್ನ ತಾಕತ್ತು ಪ್ರದರ್ಶನ ಮಾಡಿದ ಸರ್ಫರಾಜ್ ಖಾನ್ ಅವರು ನಾಯಕ ರೋಹಿತ್ ಶರ್ಮಾ ಭರವಸೆಯನ್ನು ಉಳಿಸಿಕೊಂಡಿದ್ದರು.
ಇದಾದ ಬಳಿಕ ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು. ಆದರೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ತಮ್ಮ ವೃತ್ತಿಜೀವನದ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಮುಂದಿನ ಎರಡನೇ ಟೆಸ್ಟ್ ಪುಣೆಯಲ್ಲಿ ನಡೆಯಲಿದ್ದು, ಸರ್ಫರಾಜ್ ಮತ್ತೊಂದು ಶತಕ ಗಳಿಸಿಲು ಸಜ್ಜಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications