For Quick Alerts
ALLOW NOTIFICATIONS  
For Daily Alerts
 

Sarfaraz Khan: ಭರವಸೆಗೆ ತಕ್ಕ ಆಟವನ್ನು ಆಡಿದ ಸರ್ಫರಾಜ್: ಸ್ಮರಣೀಯ ಇನಿಂಗ್ಸ್ ಕಟ್ಟಿದ ಯುವ ಆಟಗಾರ

ಹಲವು ವರ್ಷಗಳ ಕಾಲ ಮೈದಾನದಲ್ಲಿ ಮಾಡಿದ ತಪ್ಪಸ್ಸಿಗೆ ಕೊನೆಗೂ ಗುರುವಾರ ಫಲ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಮುಂಬೈ ಬ್ಯಾಟರ್‌ ಅಬ್ಬರಿಸಿದರು. ಈ ಮೂಲಕ ತಮ್ಮನ್ನು ಮುಂದಿನ ಪಂದ್ಯಗಳಲ್ಲಿ ಕಡೆಗಣಿಸದಂತೆ ಬ್ಯಾಟ್ ಮಾಡಿದರು.

ತಮ್ಮ ನೈಜ ಧಾಟಿಯಲ್ಲೇ ಬ್ಯಾಟ್ ಮಾಡಿದ ಸರ್ಫರಾಜ್‌ ಮನಮೋಹಕ ಇನಿಂಗ್ಸ್ ಕಟ್ಟಿದರು. ಅಲ್ಲದೆ ರಾಜ್‌ಕೋಟ್‌ ಅಂಗಳದಲ್ಲಿ ಸ್ಮರಣೀಯ ಇನಿಂಗ್ಸ್‌ ಆಡಿದರು. ತಮ್ಮ ಬ್ಯಾಟಿಂಗ್ ಮೂಲಕ ಸರ್ಫರಾಜ್‌ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಸಹ ನೀಡಿದರು.

Sarfaraz who played a promising game: A young player with a memorable innings

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ಬಿರುಸಿನ ಅರ್ಧಶತಕ ಸಿಡಿಸುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ. ಈ ಯುವ ಬ್ಯಾಟ್ಸ್‌ಮನ್ ಕೇವಲ 47 ಎಸೆತಗಳಲ್ಲಿ ಐವತ್ತು ರನ್‌ಗಳ ಗಡಿ ದಾಟಿದರು. ಸರ್ಫರಾಜ್ ಖಾನ್ 66 ಎಸೆತಗಳಲ್ಲಿ 62 ರನ್ ಗಳಿಸಿ ಮುನ್ನುಗುತ್ತಿದ್ದಾಗ ಇಲ್ಲದ ರನ್‌ ಕದಿಯಲು ಹೋಗಿ ಔಟ್ ಆದರು.. ಸರ್ಫರಾಜ್‌ ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದಾರೆ.

ಈ ಮೂಲಕ ಸರ್ಫರಾಜ್ ಖಾನ್ ಚೊಚ್ಚಲ ಟೆಸ್ಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದಕ್ಕೂ ಮೊದಲು, ಸರ್ಫರಾಜ್ ಖಾನ್ ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ರನ್ ಗಳಿಸುತ್ತಿದ್ದರು. ಆದರೆ ಟೀಮ್ ಇಂಡಿಯಾಕ್ಕೆ ಅವಕಾಶಗಳು ಸಿಗಲಿಲ್ಲ. ಆದರೆ, ಇದೀಗ ಈ ಯುವ ಬ್ಯಾಟ್ಸ್‌ಮನ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.

Sarfaraz who played a promising game: A young player with a memorable innings

ಸ್ಪಿನ್ ಬೌಲರ್‌ಗಳನ್ನು ಕಾಡಿದ ಸರ್ಫರಾಜ್‌

ಟೀಮ್ ಇಂಡಿಯಾದ ಬ್ಯಾಟರ್‌ಗಳು ಸ್ಪಿನ್ ಬೌಲರ್‌ಗಳ ವಿರುದ್ಧ ಚೆನ್ನಾಗಿ ಆಡುತ್ತಾರೆ ಎಂಬ ಮಾತು ಇತ್ತು. ಆದರೆ ಆ ಮಾತು ಈಗ ಸುಳ್ಳು ಎಂಬಂತೆ ಭಾಸವಾಗುತ್ತಿತ್ತು. ಆದರೆ, ಸರ್ಫರಾಜ್‌ ಖಾನ್‌ ರಾಜ್‌ಕೋಟ್‌ ಅಂಗಳದಲ್ಲಿ ಬ್ಯಾಟ್ ಮಾಡಿದ ಧಾಟಿಯನ್ನು ನೋಡಿದರೆ, ಸ್ಪಿನ್ ಬೌಲರ್‌ಗಳಿಗೆ ಉತ್ತಮವಾಗಿ ಬ್ಯಾಟ್ ಮಾಡುವ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾಗೆ ಸಿಕ್ಕಂತೆ ಆಗಿದೆ.

ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ ಸರ್ಫರಾಜ್‌, ನಂತರ ಅಬ್ಬರದ ಬ್ಯಾಟಿಂಗ್‌ಗೆ ಮಣೆ ಹಾಕಿದರು. ಅನುಭವಿ ವೇಗದ ಬೌಲರ್‌ಗಳೇ ಆಗಿರಲಿ ಇಂಗ್ಲೆಂಡ್ ತಂಡದ ಸ್ಪಿನ್ ಬೌಲರ್‌ಗಳೇ ಆಗಿರಲಿ ಸರ್ಫರಾಜ್‌ ಅವರ ಆಟಕ್ಕೆ ಬ್ರೇಕ್ ಹಾಕಲು ಸಾಧ್ಯತೆ ಇರಲಿಲ್ಲ. ಸರ್ಫರಾಜ್‌ ಈ ಪಂದ್ಯದಲ್ಲಿ ಯಾವುದೇ ತಪ್ಪು ಶಾಟ್‌ಗಳ ಪ್ರಯೋಗವನ್ನು ಮಾಡಲಿಲ್ಲ. ಆದರೆ ರನೌಟ್‌ಗೆ ಗುರಿಯಾದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಔಟಾದ ಬಳಿಕ ಸರ್ಫರಾಜ್ ಖಾನ್ ಬ್ಯಾಟಿಂಗ್ ಗೆ ಬಂದರು. ರೋಹಿತ್ ಶರ್ಮಾ ಪೆವಿಲಿಯನ್ ಗೆ ಮರಳಿದಾಗ ಭಾರತದ ಸ್ಕೋರ್ 4 ವಿಕೆಟ್ ಗೆ 237 ರನ್ ಆಗಿತ್ತು. ಇದಕ್ಕೂ ಮುನ್ನ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ನಡುವೆ ನಾಲ್ಕನೇ ವಿಕೆಟ್‌ಗೆ 204 ರನ್‌ಗಳ ಜೊತೆಯಾಟ ನೀಡಿದರು.

ರೋಹಿತ್ ಶರ್ಮಾ ನಂತರ ಕ್ರೀಸ್ ಗೆ ಬಂದ ಸರ್ಫರಾಜ್ ಖಾನ್ ಆಕ್ರಮಣಕಾರಿ ಆಟ ಆಡಿದರು. ಈ ಯುವ ಬ್ಯಾಟ್ಸ್‌ಮನ್ ಇಂಗ್ಲಿಷ್ ಬೌಲರ್‌ಗಳ ಮೇಲೆ ಪ್ರಾಬಲ್ಯವನ್ನು ಮುಂದುವರೆಸಿದರು. ಕೆಟ್ಟ ಎಸೆತಗಳ ಜತೆಗೆ ಉತ್ತಮ ಎಸೆತಗಳನ್ನೂ ಬೌಂಡರಿ ಗೆರೆ ದಾಟಿಸುತ್ತಲೇ ಇದ್ದರು. ಹಾಗಾಗಿ ಸರ್ಫರಾಜ್ ಖಾನ್ ಕೇವಲ 47 ಎಸೆತಗಳಲ್ಲಿ ಐವತ್ತು ರನ್ ಗಡಿ ದಾಟಿದರು.

ಆರಂಭಿಕ ಹಿನ್ನಡೆಯ ನಂತರ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ನಡುವೆ 204 ರನ್‌ಗಳ ಜೊತೆಯಾಟವಿತ್ತು. ಭಾರತದ ಮೂವರು ಬ್ಯಾಟ್ಸ್‌ಮನ್‌ಗಳು 33 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದ್ದರು.

Story first published: Thursday, February 15, 2024, 17:20 [IST]
Other articles published on Feb 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+