For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ಸೊನ್ನೆ ಸುತ್ತಿದ ಪೂಜಾರ, ಸೋಲಿನ ಭೀತಿಯಲ್ಲಿ ಸೌರಾಷ್ಟ್ರ!

Sarwate scalps Cheteshwar Pujara for duck, Vidarbha close in on victory

ನಾಗ್ಪುರ, ಫೆಬ್ರವರಿ 6: ದ್ವಿತೀಯ ಮತ್ತು ನಿರ್ಣಾಯಕ ಇನ್ನಿಂಗ್ಸ್‌ನಲ್ಲಿ ಅನುಭವಿ ಆಟಗಾರ 0ಗೆ ಔಟ್ ಆಗಿದ್ದರಿಂದ ನಾಗ್ಪುರದಲ್ಲಿ ನಡೆಯುತ್ತಿರುವ ಸೌರಾಷ್ಟ್ರ-ವಿದರ್ಭ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಸೋಲಿನ ಭೀತಿಯಲ್ಲಿದೆ. ಬುಧವಾರ (ಫೆಬ್ರವರಿ 6) ದಿನದಾಟದ ಅಂತ್ಯಕ್ಕೆ ಸೌರಾಷ್ಟ್ರಕ್ಕೆ 5 ವಿಕೆಟ್‌ಗಳಲ್ಲಿ 148 ರನ್‌ಗಳ ಅಗತ್ಯವಿತ್ತು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆತಿಥೇಯ ವಿದರ್ಭ ತಂಡಕ್ಕೆ ಆರಂಭಿಕ ಇನ್ನಿಂಗ್ಸ್‌ನಲ್ಲಿ ಅಕ್ಷಯ್ ಕಾರ್ನೇವಾರ್ 73, ಅಕ್ಷಯ್ ವಾಡೇಕರ್ 45 ರಸ್ ಸೇರಿಸಿ ಬಲ ತುಂಬಿದರು. ತಂಡ 120.2 ಓವರ್‌ಗಳಲ್ಲಿ 312 ರನ್ ಗಳಿಸಿತ್ತು. ಸ್ನೆಲ್ ಪಟೇಲ್ 102, ನಾಯಕ ಜಯದೇವ್ ಉನಾದ್ಕತ್ 46 ರನ್ ನೆರವಿನಿಂದ ಸೌರಾಷ್ಟ್ರ 117 ಓವರ್‌ಗಳಲ್ಲಿ 307 ರನ್ ಕಲೆ ಹಾಕಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿದರ್ಭ 92.5 ಓವರ್‌ಗಳಲ್ಲಿ 200 ರನ್ ಸೇರಿಸಿತ್ತು. ಅಂತಿಮ ಇನ್ನಿಂಗ್ಸ್‌ಗೆ ಇಳಿದಿರುವ ಸೌರಾಷ್ಟ್ರ ಬುಧವಾರ 28 ಓವರ್‌ಗೆ ಅಮೂಲ್ಯ 5 ವಿಕೆಟ್ ಗಳನ್ನು ಕಳೆದು 58 ರನ್ ಗಳಿಸಿದೆ. ಹಾರ್ವಿಕ್ ದೇಸಾಯ್ 8, ಸ್ನೆಲ್ 12, ಪೂಜಾರ 0, ಆರ್ಪಿತ್ ವಾಸವಾಡ 7 ರನ್ನಿಗೆ ನಿರ್ಗಮಿಸಿದ್ದಾರೆ. ವಿಶ್ವರಾಜ್ ಜಡೇಜಾ (23), ಕಮಲೇಶ್ ಮಕ್ವಾನಾ (2) ಕ್ರೀಸ್‌ನಲ್ಲಿದ್ದಾರೆ.

Story first published: Thursday, February 7, 2019, 12:06 [IST]
Other articles published on Feb 7, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+