Syed Mushtaq Ali Trophy: ಕರ್ನಾಟಕಕ್ಕೆ 5 ವಿಕೆಟ್ ಸೋಲು
ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಣ ಬಿ ಗುಂಪಿನ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ, ಮಯಾಂಕ್ ಪಡೆ ಮತ್ತೊಂದು ಸೋಲು ಕಂಡಿದೆ. ಈ ಮೂಲಕ ರಾಜ್ಯ ತಂಡ ಈ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿದೆ. 5 ವಿಕೆಟ್‌ಗಳಿಂದ ಪಂದ್ಯ ಗೆದ್ದ ಸೌರಾಷ್ಟ್ರ ಅಬ್ಬರಿಸಿದೆ. ಈ ಮೂಲಕ ಸೌರಾಷ್ಟ್ರ ಆಡಿದ 3 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿದ್ದು, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ತಲುಪಿದೆ.
ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಕರ್ನಾಟಕ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸೌರಾಷ್ಟ್ರ 18.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 173 ರನ್ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಎರಡನೇ ಗೆಲುವಿನ ಕನಸು ನುಚ್ಚುನೂರಾಗಿದೆ.

ಬ್ಯಾಟರ್ಸ್ ನಿರಾಸೆ
ಐಪಿಎಲ್ ಮೆಗಾ ಹರಾಜಿನಲ್ಲಿ ಅನ್ ಸೋಲ್ಡ್ ಆಗಿರುವ ಎಲ್‌ಆರ್ ಚೇತನ್, ಮಯಾಂಕ್ ಅಗರ್ವಾಲ್ ಸಿಂಗಲ್ ಡಿಜಿಟ್‌ನಲ್ಲಿ ಕೆಲಸ ಮುಗಿಸಿದರು. ಮಧ್ಯಮ ಕ್ರಮಾಂಕದ ಆರ್ ಸ್ಮರಣ್ 6 ರನ್‌ಗಳಿಗೆ ಆಟ ಮುಗಿಸಿದರು. ನಾಲ್ಕನೇ ವಿಕೆಟ್‌ಗೆ ಕೃಷ್ಣ ಶ್ರೀಜೇತ್ ಹಾಗೂ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ತಂಡಕ್ಕೆ ಅರ್ಧಶತಕ ಜೊತೆಯಾಟದ ಕಾಣಿಕೆ ನೀಡಿದರು. ಶ್ರೇಯಸ್ ಗೋಪಾಲ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಶ್ರೀಜೇತ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 31 ರನ್ ಬಾರಿಸಿ ಔಟ್ ಆದರು.
ಅಭಿನವ್ ಮನೋಹರ್ 14, ಶುಭಾಂಗ್ ಹೆಗಡೆ ಸೊಗಸಾದ ಬ್ಯಾಟಿಂಗ್ ನಡೆಸಿದರು. ಶುಭಾಂಗ್ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 43 ರನ್ ಸಿಡಿಸಿದರು. ಆರ್‌ಸಿಬಿ ತಂಡದ ಭಾಗವಾಗಿರುವ ಮನೋಜ್ ಭಾಂಡಗೆ 24 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
ಸೌರಾಷ್ಟ್ರ ಪರ ಜಯದೇವ್ ಉನದ್ಕಟ್, ಚಿರಾಗ್ ಜಾನಿ, ಪ್ರೇರಕ್ ಮಂಕಾದ್ ತಲಾ ಎರಡು ವಿಕೆಟ್ ಕಬಳಿಸಿದರು.
ಹಾರ್ವಿಕ್ ಅರ್ಧಶತಕ
ಗುರಿಯನ್ನು ಹಿಂಬಾಲಿಸಿದ ಸೌರಾಷ್ಟ್ರ ತಂಡದ ಆರಂಭ ಉತ್ತಮವಾಗಿತ್ತು. ಹಾರ್ವಿಕ್ ದೇಸಾಯಿ, ತರಂಗ್ ಗೊಹೆಲ್ ಮೊದಲ ವಿಕೆಟ್‌ಗೆ 44 ರನ್‌ಗಳ ಜತೆಯಾಟದ ಕಾಣಿಕೆ ನೀಡಿದರು. ಪ್ರೇರಕ್ ಮಂಕದ್ ದೊಡ್ಡ ಇನಿಂಗ್ಸ್ ಆಡುವ ಸೂಚನೆಯನ್ನು ನೀಡಿದರೂ ಫಲ ಲಭಿಸಲಿಲ್ಲ. ಇವರು 17 ರನ್ ಗಳಿಗೆ ಔಟ್ ಆದರು. ವಿಶ್ವರಾಜ್ ಜಡೇಜಾ ಅಜೇಯ 18 ರನ್ ಸಿಡಿಸಿದರು. ಆರಂಭಿಕ ಆಟಗಾರ ಹರ್ವಿಕ್ ದೇಸಾಯಿ 43 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 60 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದರು.
ಮಣಿಪುರ್‌ಗೆ ಜಯ
ಸಿ ಗುಂಪಿನ ಪಂದ್ಯದಲ್ಲಿ ಮಣೀಪುರ್ ತಂಡವನ್ನು 7 ವಿಕೆಟ್‌ಗಳಿಂದ ಉತ್ತರ ಪ್ರದೇಶ ತಂಡವನ್ನು ಮಣಿಸಿ ಅಬ್ಬರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications