Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೌರಾಷ್ಟ್ರ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ: ನೇರಪ್ರಸಾರದ ಮಾಹಿತಿ

ಭಾರತದ ಪ್ರಮುಖ ದೇಶೀಯ ಟಿ20 ಪಂದ್ಯಾವಳಿಗಳಲ್ಲಿ ಒಂದಾದ ಸೌರಾಷ್ಟ್ರ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 23ರಿಂದ ಈ ಟೂರ್ನಿ ಆರಂಭವಾಗಲಿದ್ದು ಸೌರಾಷ್ಟ್ರದ ಅತ್ಯುತ್ತಮ ಪ್ರತಿಭೆಗಳು ಕಣಕ್ಕಿಳಿಯಲಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಲೀಗ್ ಟೂರ್ನಿಯನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ.

ಸೌರಾಷ್ಟ್ರ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಐದು ತಂಡಗ ಭಾಗವಹಿಸಲಿದ್ದು ರೌಂಡ್-ರಾಬಿನ್ ಸ್ವರೂಪದಲ್ಲಿ ಎಂಟು ದಿನಗಳ ಕಾಲ ಹೋರಾಡಲಿವೆ. ಅಂತಿಮವಾಗಿ ಅಗ್ರ ಎರಡು ತಂಡಗಳು ಆಗಸ್ಟ್ 31ರಂದು ಸೌರಾಷ್ಟ್ರದ ಟಿ20 ಚಾಂಪಿಯನ್ ಪಟ್ಟ ಅಲಂಕರಿಸಲು ಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ.

Saurashtra Premier League 2023: how to watch? Live Streaming Details

ಪಂದ್ಯದ ನೇರಪ್ರಸಾರದ ಮಾಹಿತಿ

ಸೌರಾಷ್ಟ್ರ ಪ್ರೀಮಿಯರ್ ಲೀಗ್‌ನ ಪಂದ್ಯಗಳು ಜಿಯೋಸಿನಿಮಾದಲ್ಲಿ ನೇರಪ್ರಸಾರವಾಗಲಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಈ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶವಿದೆ. ಪಂದ್ಯಗಳು ಪ್ರತಿದಿನ ರಾತ್ರಿ 7ಕ್ಕೆ ಪ್ರಾರಂಭವಾಗುತ್ತವೆ. ಆಗಸ್ಟ್ 25 ಮತ್ತು 26ರಂದು ಎರಡು ಪಂದ್ಯಗಳು (ಡಬಲ್ ಹೆಡರ್)ನಡೆಯಲಿದ್ದು, ದಿನದ ಮೊದಲ ಪಂದ್ಯ ಮಧ್ಯಾಹ್ನ 3ಕ್ಕೆ ಆರಂಭಗೊಳ್ಳಲಿದೆ.

ಐದು ತಂಡಗಳ ನಡುವಿನ ಸೆಣೆಸಾಟ

2023ರ ಸೌರಾಷ್ಟ್ರ ಪ್ರೀಮಿಯರ್ ಲೀಗ್‌ಲ್ಲಿ ಆಡಲಿರುವ ಐದು ತಂಡಗಳೆಂದರೆ ಜಲವಾಡ್ ರಾಯಲ್ಸ್, ಕಚ್ ವಾರಿಯರ್ಸ್, ಹಲಾರ್ ಹೀರೋಸ್, ಸೂರತ್ ಲಯನ್ಸ್ ಮತ್ತು ಗೋಹಿಲ್ವಾಡ್ ಗಾಲ್ಡಿಯೇಟರ್ಸ್. ಕಳೆದ ವರ್ಷದ ಫೈನಲಿಸ್ಟ್‌ಗಳಾದ ಹಲಾರ್ ಹೀರೋಸ್ ಮತ್ತು ಗೋಹಿಲ್ವಾಡ್ ಗಾಲ್ಡಿಯೇಟರ್ಸ್ ತಂಡಗಳ ನಡುವೆ ಈ ಆವೃತ್ತಿಯ ಮೊದಲ ಪಂದ್ಯ ನಡೆಯಲಿದೆ. ಇನ್ನು 2022-23ರ ರಣಜಿ ಟ್ರೋಫಿ ವಿಜೇತ ಸೌರಾಷ್ಟ್ರ ತಂಡದ ಭಾಗವಾಗಿದ್ದ 17 ಆಟಗಾರರ ಪೈಕಿ 16 ಆಟಗಾರರು ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಕ್ರಿಕೆಟ್‌ ನೇರಪ್ರಸಾರದಲ್ಲಿ ಮುಂದುವರಿದ ಜಿಯೋ ಸಿನಿಮಾ ಅಧಿಪತ್ಯ

ಈಗಾಗಲೇ ವಿಶ್ವದ ಹಲವು ಪ್ರಮುಖ ಕ್ರಿಕೆಟ್ ಟೂರ್ನಿ ಮತ್ತು ಲೀಗ್ ಕ್ರಿಕೆಟ್‌ಗಳ ಪ್ರಸಾರದ ಹಕ್ಕನ್ನು ಹೊಂದಿರುವ ಜಿಯೋ ಸಿನಿಮಾ ಈಗ ದೇಶೀಯ ಕ್ರಿಕೆಟ್‌ ಲೀಗ್ ಟೂರ್ನಿಗಳ ಮೇಲೆಗೂ ಪ್ರಮುಖ ಚಿತ್ತ ನೆಟ್ಟಿದ್ದು ಸೌರಾಷ್ಟ್ರ ಪ್ರೀಮಿಯರ್ ಲೀಗ್ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಐಪಿಎಲ್, ಟಾಟಾ ಡಬ್ಲ್ಯುಪಿಎಲ್, ಎಸ್ಎ20, ಎಂಎಲ್ಸಿ, ಅಬುಧಾಬಿ ಟಿ10, ಜಿಮ್-ಆಫ್ರೋ ಟಿ10, ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ, ಇತ್ತೀಚೆಗೆ ಭಾರತ ತಂಡದ ಐರ್ಲೆಂಡ್ ಪ್ರವಾಸದ ನೇರಪ್ರಸಾರದ ಬಳಿಕ ಇದೀಗ ಸೌರಾಷ್ಟ್ರ ಪ್ರೀಮಿಯರ್ ಲೀಗ್ ಕೂಡ ಜಿಯೋ ಸಿನಿಮಾದಲ್ಲಿಯೇ ನೇರಪ್ರಸಾರವಾಗಲಿದೆ.

Story first published: Wednesday, August 23, 2023, 14:54 [IST]
Other articles published on Aug 23, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+