ರಣಜಿ ಟ್ರೋಫಿ ಸೆಮಿಫೈನಲ್ ವಿವಾದ: 'ಚೇತೇಶ್ವರ್ ಚೀಟರ್' ಎಂದ ಟ್ವೀಟಿಗರು!

ಬೆಂಗಳೂರು, ಜನವರಿ 28: ದ್ವಿತೀಯ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ್ ಪೂಜಾರ ಅವರ ಆಕರ್ಷಕ ಶತಕದ ನೆರವಿನಿಂದ ಕರ್ನಾಟಕವನ್ನು ಸೋಲಿಸಿ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಫೈನಲ್‌ಗೆ ಪ್ರವೇಶಿಸಿದೆ. ಆದರೆ ಪೂಜಾರ ಅವರ ಶತಕ ಕ್ರಿಕೆಟ್ ಅಭಿಮಾನಿಗಳನ್ನು ಖುಷಿಗೊಳಿಸಿಲ್ಲ, ಬದಲಿಗೆ ಚೇತೇಶ್ವರ್ ಚೀಟರ್ ಎಂದು ಎಂದು ಟೀಕಿಸಲ್ಪಡುತ್ತಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ರಣಜಿ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ, ಸೌರಾಷ್ಟ್ರ ವಿರುದ್ಧ 5 ವಿಕೆಟ್ ಸೋಲನುಭವಿಸುವುದರೊಂದಿಗೆ ಪ್ರಶಸ್ತಿ ಸುತ್ತಿನ ಕನಸನ್ನು ನೆಲಕ್ಕೆ ಕೊಡವಿಕೊಂಡಿತು. ರಾಜ್ಯ ತಂಡದ ಸೋಲಿಗೆ ಪೂಜಾರ ಅವರ 'ನಾಟೌಟ್ ತೀರ್ಪು' ಈಗ ನೆಪವಾಗಿದೆ.
ಕರ್ನಾಟಕದ ವಿನಯ್ ಕುಮಾರ್ (24.3 ಓವರ್‌ನಲ್ಲಿ) ಎಸೆತಕ್ಕೆ ಪೂಜಾರ ಬ್ಯಾಟ್ ಬೀಸಿದರು. ಚೆಂಡು ಪೂಜಾರ ಬ್ಯಾಟ್ ತಾಗಿ ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಕೈ ಸೇರಿತ್ತು. ಶರತ್, ಫೀಲ್ಡ್ ಅಂಪೈರ್ ಅವರಲ್ಲಿ ಔಟ್‌ಗಾಗಿ ಅಪೀಲ್ ಮಾಡಿದರು. ಆದರೆ ಅಂಪೈರ್ ಔಟ್ ಕೊಟ್ಟಿರಲಿಲ್ಲ.
'ಚೀಟರ್ ಚೀಟರ್' ಕೂಗು
ಸೆಮಿಫೈನಲ್ ಪಂದ್ಯ ಮುಕ್ತಾಯದ ಬಳಿಕ ಪೂಜಾರ ಮೈದಾನದಿಂದ ಪೆಲಿವಿನ್‌ನತ್ತ ಆಗಮಿಸುತ್ತಲೇ ಪೆವಿಲಿಯನ್‌ನಲ್ಲಿ ಕೂತಿದ್ದ ಪ್ರೇಕ್ಷಕರೆಲ್ಲ ಪೂಜಾರ ಅವರನ್ನು ಬೊಟ್ಟು ಮಾಡಿ 'ಚೀಟರ್, ಚೀಟರ್..' ಎಂದು ಜೋರಾಗಿ ಕೂಗಿದರು. ಔಟ್ ಆಗಿದ್ದರೂ ಪೂಜಾರ ಕ್ರೀಸ್‌ನಿಂದ ಕದಲದಿದ್ದಿದ್ದು, ಕನ್ನಡಾಭಿಮಾನಿಗಳನ್ನು ಕೆರಳಿಸಿತ್ತು.
ಚೀಟೇಶ್ವರ್ ಪೂಜಾರ!
ರಣಜಿ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪೂಜಾರ ಅಜೇಯ 131 ರನ್ ಗಳಿಸಿದ್ದರು. ಆದರೆ ಪೂಜಾರ ಅವರ ಶತಕದ ಸಾಧನೆ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿಲ್ಲ. ಪೂಜಾರ್ ಔಟ್ ಆದರೂ ಅದನ್ನು ಒಪ್ಪಿಕೊಳ್ಳದೆ ವಂಚಿಸಿದ್ದಾರೆ ಎಂದಿರುವ ಕ್ರಿಕೆಟ್ ಅಭಿಮಾನಿಗಳು ಪೂಜಾರ ಅವರನ್ನು ಚೀಟೇಶ್ವರ್ ಪೂಜಾರ ಎಂದು ಕರೆದಿದ್ದಾರೆ.
ಜಂಟಲ್‌ಮನ್ ಗೇಮ್ ಅನ್ನೋದು ತಲೇಲಿರಲಿ
ಕ್ರಿಕೆಟ್ ಅನ್ನು ಜಂಟಲ್ ಮನ್‌ಗಳ ಗೇಮ್ ಅಂತಾರೆ. ಅದನ್ನು ತಲೇಲಿಟ್ಟುಕೊಳ್ಳಿ ಡಿಯರ್ ಪೂಜಾರ. ನೀವು ಹೀಗೆ ನಡೆದುಕೊಂಡಿದ್ದು 'ಜಂಟಲ್‌ಮನ್ ಗೇಮ್'ಗೆ ಸರಿಕಾಣುತ್ತಿಲ್ಲ ಎಂಬಂತೆ ತೇಜಸ್ವಿ ಅನ್ನುವವರು ಟ್ವೀಟ್ ಮಾಡಿದ್ದಾರೆ.
ಪೂಜಾರ ಚೀಟರ?!
ವಿಜಯೇಂದ್ರ ಎಂಬವರ ವಿಡಿಯೋ ಟ್ವೀಟ್‌ನಲ್ಲಿ ಎರಡು ವಿಡಿಯೋಗಳನ್ನು ಜೋಡಣೆ ಮಾಡಲಾಗಿದೆ. ಒಂದರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ದ್ರಾವಿಡ್ ಆಡುತ್ತಿರುವ, ಮತ್ತೊಂದರಲ್ಲಿ ಪೂಜಾರ ಇರುವ ವಿಡಿಯೋಗಳಿವೆ. ಅಂಪೈರ್ ಔಟ್ ಕೊಡದ ವಿನಹ ಆಟಗಾರ ಕ್ರೀಸ್‌ನಲ್ಲಿ ನಿಂತರೆ ಅದು ತಪ್ಪಲ್ಲ ಎಂದರ್ಥದ ಟ್ವೀಟ್ ಇದು.
ಹರ್ಷ ಭೋಗ್ಲೆ ಟ್ವೀಟ್
ಪೂಜಾರ ಬ್ಯಾಟಿಂಗ್ ಕುರಿತು ಕಾಮೆಂಟೇಟರ್ ಹರ್ಷ ಭೋಗ್ಲೆ ಟ್ವೀಟ್ ಮಾಡಿದ್ದಾರೆ. ಪಂದ್ಯದ ವೇಳೆ ಪೂಜಾರ ಎರಡೆರಡು ಸಾರಿ ಔಟ್ ಅನ್ನಿಸಿದರೂ ಕ್ರೀಸ್ ಬಿಟ್ಟು ಕದಲದ ಬಗ್ಗೆ ತಮಾಷೆಯಾಗಿ ಬೋಗ್ಲೆ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications