Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಬುಕ್ಕಿಗಳು ಸಂಪರ್ಕಿಸಿದಾಗ ನೀವು ಆ ಕೂಡಲೇ ಬಿಸಿಸಿಐಗೆ ತಿಳಿಸಿಲ್ಲವೇಕೆ?'

SC asks Sreesanth why he didn’t inform BCCI about being approached for spot-fixing

ನವದೆಹಲಿ, ಜನವರಿ 30: ಸ್ಪಾಟ್ ಫಿಕ್ಸಿಂಗ್ ಆರೋಪದಡಿಯಲ್ಲಿ ಬಿಸಿಸಿಐನಿಂದ ಜಿವಾವಧಿ ನಿಷೇಧ ಶಿಕ್ಷೆಗೆ ಒಳಗಾಗಿರುವ ಶ್ರೀಶಾಂತ್ ಅವರನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಮ್ ಕೋರ್ಟ್, ನಿಮ್ಮನ್ನು ಬುಕ್ಕಿಗಳು ಸಂಪರ್ಕಿಸಿದಾಗ ಆ ಕೂಡಲೇ ವಿಚಾರವನ್ನು ಬಿಸಿಸಿಐ ಗಮನಕ್ಕೆ ಏಕೆ ತರಲಿಲ್ಲ ಎಂದು ಪ್ರಶ್ನಿಸಿದೆ.

ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಶ್ರೀಶಾಂತ್ ಐಪಿಎಲ್‌ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡ ಆರೋಪದಡಿಯಲ್ಲಿ ಬಂಧಿಸಲ್ಪಟ್ಟಿದ್ದರು. ಶ್ರೀಶಾಂತ್ ನಡವಳಿಕೆಯನ್ನು ಗಮನಿಸಿ, ವಿಚಾರಣೆ ನಡೆಸಿದ ಕೋರ್ಚ್ ಅಂತಿಮವಾಗಿ 'ಉತ್ತಮವಾಗಿಲ್ಲ' ಎಂದು ತೀರ್ಮಾನಿಸಿದೆ.

ವೇಗಿ ಶ್ರೀಶಾಂತ್ ಮತ್ತೆ ಕ್ರಿಕೆಟ್ ಆಡುವ ಇಂಗಿತ ವ್ಯಕ್ತಪಡಿಸಿದ್ದರು. ತಪ್ಪಿಗಾಗಿ ಕಣ್ಣೀರಿಟ್ಟಿದ್ದರು ಕೂಡ. ಆದರೆ ಶ್ರೀಶಾಂತ್ ಮೇಲೆ ಬಿಸಿಸಿಐ ನಿಧಿಸಿರುವ ನಿಷೇಧ ತೆರವಾಗಿಲ್ಲ. ಹಿಂದೊಮ್ಮೆ ಶ್ರೀಶಾಂತ್ ತಾನು ಬೇರೆ ದೇಶದ ಪರ ಆಡಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದರು. ತಾನು ಬಿಸಿಸಿಐಯಿಂದ ಮಾತ್ರ ನಿಷೇಧಕ್ಕೊಳಗಾಗಿದ್ದೇನೆ, ಐಸಿಸಿಯಿಂದಲ್ಲ ಎಂದು ಆ ವೇಳೆ ಶ್ರೀಶಾಂತ್ ಹೇಳಿದ್ದರು.

Story first published: Wednesday, January 30, 2019, 20:25 [IST]
Other articles published on Jan 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+