ಸ್ಕಾಟ್ಲೆಂಡ್ ಕ್ರಿಕೆಟರ್ ಮಜೀದ್ ಹಕ್ ಕೊರೊನಾವೈರಸ್ ಸೋಂಕಿತ

ಎಡಿನ್‌ಬರ್ಗ್, ಮಾರ್ಚ್ 20: ಸ್ಕಾಟ್ಲೆಂಡ್ ಕ್ರಿಕೆಟರ್ ಮಜೀದ್ ಹಕ್‌ಗೆ ಕೊರೊನಾ ಸೋಂಕು ತಗುಲಿರುವುದು ಸಾಭೀತಾಗಿದೆ. ಕೊರೊನಾ ಪರೀಕ್ಷೆಗೊಳಗಾಗಿದ್ದ ಮಜೀದ್ ಅವರ ಫಲಿತಾಂಶ ಪಾಸಿಟಿವ್ ಎಂದು ಬಂದಿದೆ. ಆದರೆ 37ರ ಹರೆಯದ ಮಜೀದ್ ಸದ್ಯ ಮಾರಕ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆಫ್ ಸ್ಪಿನ್ನರ್ ಆಗಿರುವ ಮಜೀದ್ ಹಕ್ ಸ್ಕಾಟ್ಲೆಂಡ್ ಪರ 2006ರಿಂದ 2015ರ ಅವಧಿಯಲ್ಲಿ 54 ಏಕದಿನ ಪಂದ್ಯಗಳನ್ನು, 24 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಅವರಿಗೆ ಈಗ ಗ್ಲಾಸ್ಕೋದ ಪೈಸ್ಲಿ ಏರಿಯಾದಲ್ಲಿರುವ ರಾಯಲ್ ಅಲೆಕ್ಸಾಂಡ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
'ಕೊರೊನಾವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಬಂದ ನಂತರ ಇಂದು ಮನೆಗೆ ಮರಳಲು ಎದುರು ನೋಡುತ್ತಿದ್ದೇನೆ. ಪೈಸ್ಲಿಯ ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಮತ್ತು ನನಗೆ ಬೆಂಬಲ ಸೂಚಿಸಿ ಸಂದೇಶಗಳನ್ನು ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು,' ಎಂದು ಮಜೀದ್ ಹಕ್ ಟ್ವೀಟ್ ಮಾಡಿದ್ದಾರೆ.
ಗುರುವಾರ (ಮಾರ್ಚ್ 19) ಬೆಳಗ್ಗೆ 9 ಗಂಟೆಯ ವೇಳೆಗೆ ಸ್ಕಾಟ್ಲೆಂಡ್‌ನಲ್ಲಿ ಸುಮಾರು 266 ಕೊರೊನಾವೈರಸ್ ಪ್ರಕರಣಗಳು ಸಾಭೀತಾಗಿದ್ದವು. ಇನ್ನು ಯುನೈಟೆಡ್ ಕಿಂಗ್ಡಮ್‌ನಲ್ಲಿ ಒಟ್ಟಾರೆ 3,269 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications