ವಿಶ್ವಕಪ್ ಕ್ರಿಕೆಟ್ ಗೆ 14 ತಂಡಗಳ ಆರಿಸುವಂತೆ ಕೋರಿದ ಸ್ಕಾಟ್ಲೆಂಡ್


ಎಡಿನ್ ಬರ್ಗ್, ಜೂ. 12: ಏಕದಿನ ಕ್ರಿಕೆಟ್ ವಿಶ್ವ ರ್ಯಾಂಕಿಗ್ ನಲ್ಲಿ ಅಗ್ರ ಸ್ಥಾನದಲ್ಲಿರುವ ಇಂಗ್ಲೆಂಡ್, ಸೋಮವಾರ ಸ್ಕಾಟ್ಲೆಂಟ್ ಎದುರಿನ ಏಕೈಕ ಏಕದಿನ ಪಂದ್ಯದಲ್ಲಿ 6ರನ್ ಗಳಿಂದ ಸೋತಿತ್ತು. ಈ ಗೆಲುವಿನ ಬಳಿಕ ಸ್ಕಾಟ್ಲೆಂಡ್ ಮುಖ್ಯ ಕೋಚ್ ಗ್ರಾಂಟ್ ಬ್ರಾಡ್ಬರ್ನ್ ಅವರು ಐಸಿಸಿಗೆ ವಿನಂತಿಯೊಂದನ್ನು ಮಾಡಿಕೊಂಡಿಕೊಂಡಿದ್ದಾರೆ.
ಮುಂಬರಲಿರುವ ವಿಶ್ವಕಪ್ ಕ್ರಿಕೆಟ್ ಗೆ ತಮಗೂ ಅವಕಾಶ ದೊರೆಯುವಂತೆ 10 ತಂಡಗಳ ಬದಲಿಗೆ 14 ತಂಡಗಳನ್ನು ಪರಿಗಣಿಸಬೇಕೆಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನಲ್ಲಿ ಬ್ರಾಡ್ಬರ್ನ್ ಕೋರಿಕೊಂಡಿದ್ದಾರೆ.
2019ರ ವಿಶ್ವ ಕಪ್ ಕ್ರಿಕೆಟ್ ಗೆ ಸ್ಕಾಟ್ಲೆಂಟ್ ಅರ್ಹತೆ ಗಿಟ್ಟಿಸಿಕೊಂಡಿಲ್ಲ. ಅರ್ಹತೆಗಾಗಿ ಐಸಿಸಿ 14 ತಂಡಗಳನ್ನು ಪರಿಗಣಿಸುವ ಬದಲು ಕೇವಲ 10 ತಂಡಗಳನ್ನಷ್ಟೇ ಪರಿಗಣಿಸಿದ್ದರಿಂದ ಸ್ಕಾಟ್ಲೆಂಡ್ ಗೆ ಹಿನ್ನೆಡೆಯಾಗಿತ್ತು. ಆದರೆ ಬಲಿಷ್ಠ ಇಂಗ್ಲೆಂಡ್ ಎದುರು ಸೋಮವಾರದ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸ್ಲಾಟ್ಲೆಂಡ್ ಐಸಿಸಿಗೆ ಹೊಸ ಸಂದೇಶ ರವಾನಿಸಿದಂತಾಗಿದೆ.
'2019ರ ವಿಶ್ವಕಪ್ ಗೆ 10 ತಂಡಗಳನ್ನಷ್ಟೇ ಆಯ್ಕೆ ಮಾಡಿರುವ ಐಸಿಸಿ ನಿರ್ಧಾರವನ್ನು ಪುನರ್ ವಿಮರ್ಶೆ ಮಾಡಿಕೊಳ್ಳುವಂತೆ ಕೋರಿಕೊಳ್ಳುತ್ತೇವೆ. 2019ರ ವಿಶ್ವಕಪ್ ನಲ್ಲಿ ಪಾಲ್ಗೊಳ್ಳದಿದ್ದರೂ 2023ರ ವಿಶ್ವಕಪ್ ನಲ್ಲಾದರೂ ಪಾಲ್ಗೊಳ್ಳುವ ಇಂಗಿತ ನಮ್ಮದು' ಎಂದು ಬ್ರಾಡ್ಬರ್ನ್ ತಿಳಿಸಿದ್ದಾರೆ.
ಸೋಮವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಸ್ಕಾಟ್ಲೆಂಡ್ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 371 ರನ್ ಪೇರಿಸಿ ಇಂಗ್ಲೆಂಡ್ ಗೆ 378 ರನ್ ಗುರಿ ನೀಡಿತ್ತು. ಚೇಸಿಂಗ್ ಗೆ ಇಳಿದ ಇಂಗ್ಲೆಂಡ್ 48.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 365 ರನ್ ಪೇರಿಸಿ ಸ್ಕಾಟ್ಲೆಂಡ್ ಎದುರು ಶರಣಾಗಿತ್ತು.
94 ಎಸೆತಗಳಿಗೆ ಅಜೇಯ 140 ರನ್ ಮೂಲಕ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸ್ಕಾಟ್ಲೆಂಡ್ ನ ಮೆಕ್ಲಿಯೊಡ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು.
ಸ್ಕಾಟ್ಲೆಂಡ್ ಪರ ಮ್ಯಾಥ್ಯೂ ಕ್ರಾಸ್ 48, ಕೈಲ್ ಕೊಯೆಟ್ ಜರ್ 58, ರಿಚಿ ಬೆರಿಂಗ್ಟನ್ 39, ಜಾರ್ಜ್ ಮುನ್ಶಿ 55ರನ್ ಸೇರಿಸಿ ತಂಡದ ರನ್ ಹೆಚ್ಚಿಸುವಲ್ಲಿ ನೆರವಾದರು. ಈ ವೇಳೆ ಇಂಗ್ಲೆಂಡ್ ಬೌಲರ್ ಗಳಾದ ಮಾರ್ಕ್ ವ್ಯಾಟ್ 55ಕ್ಕೆ3, ಅಲಸ್ದೇರ್ ಇವಾನ್ಸ್ 50ಕ್ಕೆ2, ರಿಚಿ ಬೆರಿಂಗ್ಟನ್ 67ಕ್ಕೆ2 ವಿಕೆಟ್ ಉರುಳಿಸಿ ಪಾರಮ್ಯ ಮೆರೆದಿದ್ದರು.
ದ್ವಿತೀಯ ಇನ್ನಿಂಗ್ಸನಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಗಳು ಲೆಕ್ಕಾಚಾರದ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. ಜೇಸನ್ ರಾಯ್ 34, ಜಾನಿ ಬೇಸ್ಟೋ 105, ಅಲೆಕ್ಸ್ ಹೇಲ್ಸ್ 52, ಜೋ ರೂಟ್ 29, ಮೊಯೀನ್ ಅಲಿ 46, ಲಿಯಾಮ್ ಫ್ಲಂಕೆಟ್ ಔಟಾಗದೆ 47 ಪೇರಿಸಿ ತಂಡದ ಗೆಲುವಿಗೆ ಶ್ರಮಿಸಿದರಾದರೂ ಗೆಲುವು ಒಲಿಯಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications