Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗ್ಲೆನ್ ಮ್ಯಾಕ್ಸ್‌ವೆಲ್ ಸಿಕ್ಸ್‌ ಏಟಿನಿಂದ ಮುರಿದ ಕುರ್ಚಿ ಹರಾಜಿಗೆ

Seat broken by Glenn Maxwells six in Wellington to go for auction

ಸಿಡ್ನಿ: ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸಿಕ್ಸರ್‌ನಿಂದ ಮುರಿದ ಕುರ್ಚಿ ಹರಾಜಿಗಾಗಿ ಹೋಗಲಿದೆ. ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20ಐನಲ್ಲಿ ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಆಗ ಕುರ್ಚಿ ಹಾನಿಗೀಡಾಗಿತ್ತು.

ಮಾರ್ಚ್ 3ರಂದು ವೆಲ್ಲಿಂಗ್ಟನ್‌ನ ವೆಸ್ಟ್‌ಪ್ಯಾಕ್ ಸ್ಟೇಡಿಯಂನಲ್ಲಿ ನಡೆದಿದ್ದ 3ನೇ ಟೆಸ್ಟ್‌ನಲ್ಲಿ 4ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ 31 ಎಸೆತಗಳಲ್ಲಿ 70 ರನ್ ಕೊಡುಗೆ ನೀಡಿದ್ದರು. ಈ ವೇಳೆ ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ 8 ಫೋರ್ಸ್, 5 ಸಿಕ್ಸರ್ ಸಿಡಿದಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ.

ಮ್ಯಾಕ್ಸ್‌ವೆಲ್ ಸಿಕ್ಸ್ ಚಚ್ಚುವಾಗ ಖಾಲಿ ಸ್ಟೇಡಿಯಂನ ಕುರ್ಚಿಯೊಂದು ಮುರಿದುಹೋಗಿತ್ತು. ಕೇವಲ 25 ಎಸೆತಗಳಲ್ಲೇ ಮ್ಯಾಕ್ಸ್‌ವೆಲ್ ಅರ್ಧ ಶತಕ ಸಿಡಿಸಿದ್ದರು. 17ನೇ ಓವರ್ನಲ್ಲಿ ನ್ಯೂಜಿಲೆಂಡ್ ಬೌಲರ್ ಜೇಮ್ಸ್ ನೀಶಮ್ ಓವರ್‌ ಒಂದರಲ್ಲೇ 28 ರನ್, 2 ಸಿಕ್ಸರ್, 4 ಬೌಂಡರಿ ಬಾರಿಸಿದ್ದರು.

ಮ್ಯಾಕ್ಸ್‌ವೆಲ್ ಸಿಕ್ಸ್‌ನಿಂದ ಹಳದಿ ಬಣ್ಣದ ಕುರ್ಚಿಗೆ ಹಾನಿಯಾಗಿತ್ತು. ಹೀಗಾಗಿ ಸ್ಟೇಡಿಯಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇನ್ ಹಾರ್ಮೋನ್, ಮ್ಯಾಕ್ಸ್‌ವೆಲ್ ಅವರಲ್ಲಿ ಅವರ ಸಹಿಗಾಗಿ ವಿನಂತಿಸಿಕೊಂಡಿದ್ದಾರೆ. ಮ್ಯಾಕ್ಸ್‌ವೆಲ್ ಸಹಿಯ ಬಳಿಕ ಆ ಕುರ್ಚಿ ಹರಾಜಿಗಾಗಿ ಹೋಗಲಿದ್ದು, ಬಂದ ಹಣದಿಂದ ಸ್ಥಳೀಯ ಮಹಿಳೆಯರಿಗೆ ಸೂರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶೇನ್ ತಿಳಿಸಿದ್ದಾರೆ.

Story first published: Wednesday, March 3, 2021, 18:50 [IST]
Other articles published on Mar 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+