ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ 2ನೇ ಏಕದಿನ ಪಂದ್ಯ ಮುಂದೂಡಿಕೆ

ಕೇಪ್‌ಟೌನ್: ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯ ಮುಂದೂಡಲ್ಪಟ್ಟಿದೆ. ಕೊರೊನಾ ವೈರಸ್ ಭೀತಿಯ ಕಾರಣ ಡಿಸೆಂಬರ್ 7ರಂದು ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದ್ದ ಎರಡನೇ ಏಕದಿನ ಪಂದ್ಯ ಮುಂದೂಡಲ್ಪಟ್ಟಿದೆ.
ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಮೊದಲನೇ ಏಕದಿನ ಪಂದ್ಯ ಕೂಡ ಕೊರೊನಾ ವೈರಸ್ ಕಾರಣ ರದ್ದಾಗಿತ್ತು. ದಕ್ಷಿಣ ಆಫ್ರಿಕಾ ತಂಡದಲ್ಲಿ ಕೊರೊನಾವೈರಸ್ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡಿಸೆಂಬರ್ 6ರ ಭಾನುವಾರ ನಡೆಯಲಿದ್ದ ಮೊದಲ ಏಕದಿನ ಪಂದ್ಯ ಮುಂದೂಡಲ್ಪಟ್ಟಿತ್ತು.
ಈಗ ಮತ್ತೆ ಎರಡು ಪ್ರಕರಣಗಳು ಕಾಣಿಸಿಕೊಂಡಿರುವುದರಿಂದ ದ್ವಿತೀಯ ಪಂದ್ಯವನ್ನೂ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಆರಂಭಿಕ ಪಂದ್ಯ ಮುಂದೂಡಲ್ಪಟ್ಟಿದ್ದರಿಂದ ಒಪ್ಪಂದದ ಪ್ರಕಾರ ಬೇರೆ ವೇಳಾಪಟ್ಟಿ ತಯಾರಿಸಲಾಗಿತ್ತು.
ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಮೂರು ಪಂದ್ಯಗಳ ಟಿ20ಐ ಸರಣಿಯನ್ನು 3-0ಯಿಂದ ಗೆದ್ದಿತ್ತು. ಆದರೆ ಏಕದಿನ ಸರಣಿಗೆ ಹಿನ್ನಡೆಯಾಗಿದೆ. ಏಕದಿನ ಸರಣಿ ರದ್ದಾಗುವ ಸಾಧ್ಯತೆಯಿರುವುದರಿಂದ ಗುರುವಾರ ಇಂಗ್ಲೆಂಡ್ ತಂಡ ತವರಿಗೆ ವಾಪಸ್ಸಾಗಲಿದೆ ಎಂದು ಹೇಳಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications