T20 World Cup 2024: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಭದ್ರತೆ ಹೇಗಿದೆ ಗೊತ್ತಾ!
ಜೂನ್ 3 ಸೋಮವಾರ, ಐಸಿಸಿ ಪುರುಷರ 2024ರ ಟಿ20 ವಿಶ್ವಕಪ್‌ನ ಗ್ರೂಪ್ ಹಂತದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಜೂನ್ 9 ರಂದು ಈ ಪಂದ್ಯ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಮೇಲೆ ಐಸಿಸ್-ಕೆ "ಲೋನ್ ವುಲ್ಫ್" ದಾಳಿಗೆ ನಡೆಸುವುದಾಗಿ ಬೆದರಿವೊಡ್ಡಿದೆ. ಹೀಗಾಗಿ ನಸ್ಸೌ ಕೌಂಟಿ ಪೊಲೀಸ್ ಇಲಾಖೆಯು ಸ್ಟೇಡಿಯಂನ ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದೆ.

ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ 34 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ನಸ್ಸೌ ಕೌಂಟಿ ಪೊಲೀಸ್ ಇಲಾಖೆಯು ಜೂನ್ 3 ರಿಂದ 12 ರವರೆಗೆ ಲಾಂಗ್ ಐಲ್ಯಾಂಡ್ ಫೀಲ್ಡ್‌ನಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದೆ ಪಂದ್ಯಗಳು ನಡೆಯುವಂತೆ ಎಚ್ಚರಿಕೆ ವಹಿಸಲಾಗಿದೆ.
ಬಿಬಿಸಿ ತನ್ನ ವರದಿಯಲ್ಲಿ ನಸ್ಸೌ ಕೌಂಟಿ ಪೊಲೀಸ್ ಇಲಾಖೆಯ ಭದ್ರತಾ ವ್ಯವಸ್ಥೆಗಳ ಬಗ್ಗೆ ವಿವರಿಸಿದೆ. ನ್ಯೂಯಾರ್ಕ್‌ನ ತಾತ್ಕಾಲಿಕ ಕ್ರೀಡಾಂಗಣದಲ್ಲಿ ಟಿ 20 ವಿಶ್ವಕಪ್ ಪಂದ್ಯದ ಮೊದಲು ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮೈದಾನದ ಸುತ್ತಲಿನ ರಹಸ್ಯ ಸ್ಥಳಗಳಲ್ಲಿ ಪೊಲೀಸ್ ಸ್ನೈಪರ್‌ಗಳನ್ನು ನಿಯೋಜಿಸಲಾಗಿದೆ ಎಂದು ಬಿಬಿಸಿ ಹೇಳಿದೆ.
ಪರಿಣಿತ ಸ್ನೈಪರ್‌ಗಳೊಂದಿಗೆ SWAT ತಂಡಗಳು ಕೂಡ ಇದ್ದು, ಮೈದಾನದೊಳಗೆ ಪೊಲೀಸರು ಮಪ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನ್ಯೂಯಾರ್ಕ್ ಪೊಲೀಸ್ ಇಲಾಖೆ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್, ಯುಎಸ್ ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಇತರ ಏಜೆನ್ಸಿಗಳು ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಭಯೋತ್ಪಾದಕ ಸಂಘಟನೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸ್ಟೇಡಿಯಂ ಮೇಲೆ ಡ್ರೋನ್‌ಗಳು ಹಾರುತ್ತಿರುವುದನ್ನು ತೋರಿಸಲಾಗಿದೆ. ಹೀಗಾಗಿ ಎಂಟು ಪಂದ್ಯಗಳು ನಡೆಯುವರೆಗೂ ಮೈದಾನದ ಸುತ್ತಲಿನ ಪಾರ್ಕ್‌ಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಪಂದ್ಯವನ್ನು ವೀಕ್ಷಿಸಲು ಬರುವ ಪ್ರೇಕ್ಷಕರು ಭದ್ರತಾ ಸ್ಕ್ಯಾನರ್ ಮೂಲಕ ಹೋಗಬೇಕಾಗಿದೆ ಎಂದು ಬಿಬಿಸಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications