
ಬೆಂಗಳೂರು,ಸೆ. 01: ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಫನ್ನಿ ಟ್ವೀಟ್ ಗಳ ಜೊತೆಗೆ ಇನ್ಸ್ ಸ್ಟಾಗ್ರಾಮ್ ನಲ್ಲೂ ಚಿತ್ರಗಳ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕ, ಸಂವಹನದಲ್ಲಿ ತೊಡಗಿರುತ್ತಾರೆ.
2007ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದ ಪಂದ್ಯವೊಂದರ ಚಿತ್ರವನ್ನು ಸೆಹ್ವಾಗ್ ಹಂಚಿಕೊಂಡಿದ್ದರು. ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿಯೇ ಭಾರತ ನಿರ್ಗಮಿಸಿತ್ತು. ಚಿತ್ರದಲ್ಲಿ ಸೆಹ್ವಾಗ್ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ, ಪಕ್ಕದಲ್ಲಿ ಸಚಿನ್ ತೆಂಡೂಲ್ಕರ್ ಇದ್ದಾರೆ, ಕೆಳಗಡೆ ಸಾಲಿನಲ್ಲಿ ರಾಹುಲ್ ದ್ರಾವಿಡ್ ಹಾಗೂ ದಿನೇಶ್ ಕಾರ್ತಿಕ್ ಕುಳಿತಿದ್ದಾರೆ. ' ನಂಗಂತೂ ಈ ಚಿತ್ರ, ಮತ್ತೆ ನೋಡಲು ಸಾಧ್ಯವಿಲ್ಲ, ಈ ರೀತಿ ಬೇಸರ ನಿಮಗೆ ಯಾವಾಗ ಆಗಿತ್ತು" ಎಂದು ಪ್ರಶ್ನಿಸಿದ್ದಾರೆ.
ಈ ಪೋಸ್ಟ್‌ಗೆ ಲಕ್ಷಾಂತರ ಲೈಕ್ಸ್ ಹಾಗೂ ಸಾವಿರಾರು ಕಾಮೆಂಟ್‌ಗಳು ಬಂದಿದ್ದು, ಭಾರತದ ಮಾಜಿ ಸ್ಪಿನರ್ ಹರ್ಭಜನ್ ಸಿಂಗ್ ಕೂಡಾ ಉತ್ತರಿಸಿ, "ಈಗೇಕೆ ಈ ಫೋಟೋ ಹಂಚಿಕೊಂಡಿದ್ದೀಯಾ" ಎಂದು ಪ್ರಶ್ನಿಸಿದ್ದಾರೆ. ಕೆಲವು ಪ್ರತಿಕ್ರಿಯೆ ಹೀಗಿವೆ:
chaudharyrakesh.007: After my anatomy proff exam 😶😶😶
**
salman.sd_s: Against Bangladesh after loosing wickets in 2007 world cup
***
sanjayy_maher: When virender sehwag retired!
ಕಡೆಗೆ ಒಬ್ಬರು ಪ್ರಭಾಸ್ ಅಭಿನಯದ ಸಾಹೋ ಚಿತ್ರ ನೋಡಿದ ಮೇಲೆ ಎಂದು ದುಃಖ ತೋಡಿಕೊಂಡಿದ್ದಾರೆ. ಕೆಲವರು ಭಾನುವಾರ ಕಚೇರಿ ಕೆಲಸ ಇದ್ದಾಗ, ಮನೆಯಲ್ಲಿ ಅಮ್ಮ ಚಿಕನ್ ಮಾಡದೆ ಇದ್ದಾಗ ಈ ರೀತಿ ಬೇಸರದ ಮುಖ ಮಾಡಿಕೊಂಡಿದ್ದೆವು ಎಂದಿದ್ದಾರೆ. 2019 ವಿಶ್ವಕಪ್ ನಲ್ಲಿ ಧೋನಿ ರನೌಟ್ ಆಗಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ಪಂದ್ಯದಲ್ಲಿನ ಸೋಲಿನ ಕ್ಷಣವನ್ನು ಸ್ಮರಿಸಿದ್ದಾರೆ. ನೀವು ಕೂಡಾ ಕಾಮೆಂಟ್ ಮಾಡಿ..