ಬೇರೆ ದೇಶದಲ್ಲಿ ಸೆಹ್ವಾಗ್ ಆಡಿದ್ದರೆ 10,000 ರನ್‌ಗಳ ಗಡಿ ದಾಟಿರುತ್ತಿದ್ದರು: ಪಾಕ್ ಮಾಜಿ ನಾಯಕ

ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಎಲ್ಲಾ ಪ್ರಕಾರಗಳಲ್ಲೂ ಸೈ ಎನಿಸಿದ ಆಟಗಾರ. ಸ್ಪೋಟಕ ಆರಂಭಿಕ ಆಟಗಾರ ಎಂದೇ ಖ್ಯಾತಿ ಗಳಿಸಿದ್ದ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲೂ ಮಿಂಚು ಹರಿಸಿದ್ದರು. ಅದರೆ ಟೀಮ್ ಇಂಡಿಯಾದ ಈ ಆಟಗಾರನ ಬಗ್ಗೆ ಪಾಕಿಸ್ತಾನದ ಮಾಜಿ ಆಟಗಾರ ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಮಾತನಾಡುತ್ತಾ "ಟೀಮ್ ಇಂಡಿಯಾದ ವೀರೇಂದ್ರ ಸೆಹ್ವಾಗ್ ಬೇರೆ ದೇಶವನ್ನು ಪ್ರತಿನಿಧಿಸಿದ್ದರೆ ಅವರು 10 ಸಾವಿರ ರನ್ ದಾಟಿರುತ್ತಿದ್ದರು. ಅವರು ದಿಗ್ಗಜ ಕ್ರಿಕೆಟಿಗರ ನೆರಳಿನಲ್ಲಿ ಆಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 10,000ದ ಗಡಿ ದಾಟಲು ಕೇವಲ ಒಂದೂವರೆ ಸಾವಿರ ರನ್‌ಗಳ ಅವಶ್ಯಕತೆಯಷ್ಟೇ ಇತ್ತು ಎಂದು ಹೇಳಿದ್ದಾರೆ.
ಸೆಹ್ವಾಗ್ ಬಗ್ಗೆ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಏನೆಲ್ಲಾ ವಿಚಾರಗಳನ್ನು ಹೇಳಿದ್ದಾರೆ ಎನ್ನುವುದನ್ನು ಮುಂದೆ ಓದಿ

ಸೆಹ್ವಾಗ್ ದಾಖಲೆಯೇ ಹೇಳುತ್ತದೆ
ಸೆಹ್ವಾಗ್ ದಾಖಲೆಯೇ ಅವರ ಆಟದ ಬಗ್ಗೆ ಹೇಳುತ್ತದೆ, ಟೆಸ್ಟ್ ಕ್ರಿಕೆಟ್‌ನಲ್ಲಿ 8ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಅವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರಂತವರ ಜೊತೆಗೆ ಆಡಿದರು. ಈ ಸಂದರ್ಭದಲ್ಲಿ ದಿಗ್ಜ ಆಟಗಾರರ ನೆರಳಿನಲ್ಲೇ ಅವರು ಉಳಿದು ಬಿಟ್ಟರು ಎಂದು ರಶೀದ್ ಲತೀಫ್ ಹೇಳಿದ್ದಾರೆ.

ಎದುರಾಳಿಗಳಿಗೆ ಸೆಹ್ವಾಗ್ ಬಗ್ಗೆ ಆತಂಕ
ಟೀಮ್ ಇಂಡಿಯಾದಲ್ಲಿ ಆಗ ವಿಶ್ವವಿಖ್ಯಾತ ಆಟಗಾರರಿದ್ದರು. ಆದರೆ ಅವರೆಲ್ಲರಿಗಿಂತ ಎದುರಾಳಿ ತಂಡ ಸೆಹ್ವಾಗ್ ಬಗ್ಗೆ ಹೆಚ್ಚು ಭಯಹೊಂದಿತ್ತು ಮತ್ತು ಅವರ ಆಟ ಫಲಿತಾಂಶವನ್ನು ಬದಲಾಯಿಸಿಬಿಡಬಹುದು ಎಂಬ ಆತಂಕವನ್ನು ಹೊಂದಿದ್ದರು ಎಂದು ರಶೀದ್ ಲತೀಫ್ ಮಾತನಾಡುತ್ತಾ ಹೇಳಿದ್ದಾರೆ.

ಪರಿಣಾಮಕಾರಿ ಆಟಗಾರ
ವೀರೇಂದ್ರ ಸೆಹ್ವಾಗ್ ಎದುರಾಳಿ ಬೌಲರ್‌ಗಳ ವಿರುದ್ಧ ಸಂಪೂರ್ಣ ಪ್ರಾಬಲ್ಯವನ್ನು ಮೆರೆಯುತ್ತಿದ್ದರು. ಗ್ಲೆನ್ ಮೆಕ್‌ಗ್ರಾಥ್, ಬ್ರೇಟ್ ಲೀ, ವಾಸಿಂ ಅಕ್ರಂ, ಅಥವಾ ಶೋಯೆಬ್ ಅಖ್ತರ್‌ರಂತಾ ಬೌಲರ್‌ಗಳಿಗೆ ಬ್ಯಾಟ್ಸ್‌ಮನ್‌ಗಳು ತಿಣುಕಾಡುತ್ತಿದ್ದರು. ಆದರೆ ವೀರೇಂದ್ರ ಸೆಹ್ವಾಗ್ ಯಾವ ಬೌಲರ ಬಗ್ಗೆಯೂ ಭೀತಿಯನ್ನು ಹೊಂದಿರಲಿಲ್ಲ. ಆತನೋರ್ವ ಪರಿಣಾಮಕಾರಿ ಬ್ಯಾಟ್ಸ್‌ಮನ್ ಎಂದು ಲತೀಫ್ ಹೇಳಿದರು.

ಎರಡು ತ್ರಿಶತಕ ಬಾರಿಸಿದ ಏಕೈಕ ಭಾರತೀಯ
ವೀರೇಂದ್ರ ಸೆಹ್ವಾಗ್ ಟೀಮ್ ಇಂಡಿಯಾ ಪರವಾಗಿ ಎರಡು ತ್ರಿಶತಕವನ್ನು ಬಾರಿಸಿದ ಏಕೈಕ ಆಟಗಾರನಾಗಿದ್ದಾರೆ. 49.34ರ ಟೆಸ್ಟ್ ಬ್ಯಾಟಿಂಗ್ ಸರಾಸರಿಯಲ್ಲಿ ಹೊಂದಿರುವ ಸೆಹ್ವಾಗ್ 104 ಟೆಸ್ಟ್‌ಗಳಲ್ಲಿ 23 ಶತಕ ಮತ್ತು 8586 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಸೆಹ್ವಾಗ್ 251 ಟೆಸ್ಟ್ ಪಂದ್ಯಗಳಿಂದ 8273 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications