ಸೆಹ್ವಾಗ್ ಪುತ್ರ ಸೇರಿದಂತೆ ಅಂಡರ್ 16 ಆಟಗಾರರ ಪರದಾಟ
ಸದ್ಯ ದೇಶೀಯ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ಇದರಲ್ಲಿ ವಿಜಯ್ ಮರ್ಚೆಂಟ್ ಸಹ ಒಂದು. ಈ ಟೂರ್ನಿಯಲ್ಲಿ ಭಾಗವಹಿಸಲು ದೆಹಲಿಯ 16 ವರ್ಷದೊಳಗಿನ ಕ್ರಿಕೆಟ್ ತಂಡವು ವಿಜಯವಾಡಕ್ಕೆ ತೆರಳತಿತ್ತು. ಈ ವೇಳೆ ಆಟಗಾರರು 24 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ನಿಲ್ದಾಣದಲ್ಲೇ ಕಾಯುವ ಪರಿಸ್ಥಿತಿ ಎದುರಾಯಿತು.
ವಿಮಾನಯಾನ ಸಂಸ್ಥೆಯ ಆಟಗಾರರ ಬ್ಯಾಗ್‌ಗಳನ್ನು ಸರಿಯಾಗಿ ನಿರ್ವಹಿಸಿದ ಕಾರಣ ಈ ಸಮಸ್ಯೆ ಉಂಟಾಗಿದೆ. ಆಟಗಾರರ ಕಿಟ್ ಬ್ಯಾಗ್‌ಗಳು ಅವರನ್ನು ತಲುಪದ ಕಾರಣ ಆಟಗಾರರು ಕಿಟ್ ಬ್ಯಾಗ್ ಇಲ್ಲದೇ ವಿಜಯವಾಡಕ್ಕೆ ಪ್ರಯಾಣ ಬೆಳೆಸಿದರು. ಇದರಿಂದ ಆಟಗಾರರ ತರಬೇತಿ ಹಾಗೂ ಪಂದ್ಯದ ಸಿದ್ಧತೆಗೆ ದೊಡ್ಡ ಪೆಟ್ಟು ಬಿದ್ದಿದೆ. ಆಟಗಾರರು ಅಸಹಾಯಕರಾಗಿ ಕುಳಿತು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ದೆಹಲಿ ಅಂಡರ್ 16 ತಂಡದಲ್ಲಿ ಖ್ಯಾತ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ವೇದಾಂತ್ ಸಹ ಸ್ಥಾನ ಪಡೆದಿದ್ದಾರೆ. ಇವರು ಸಹ ಈ ಸಮಸ್ಯೆಯನ್ನು ಎದುರಿಸಿದ್ದಾರೆ. ವಿಮಾನಯಾನ ಸಂಸ್ಥೆಯಿಂದ ಆದ ಘಟನೆಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ಮಂಡಳಿ ಬೇಸರ ವ್ಯಕ್ತಪಡಿಸಿದೆ. ತಕ್ಷಣವೇ ಮಧ್ಯ ಪ್ರವೇಶಿಸಿ ಆಟಗಾರರು ಬ್ಯಾಗ್‌ಗಳನ್ನು ಮತ್ತೊಂದು ವಿಮಾನದ ಮೂಲಕ ಹೈದರಾಬಾದ್‌ಗೆ ಕಳುಹಿಸಿದೆ. ಅಲ್ಲಿಂದ ಈ ಬ್ಯಾಗ್‌ಗಳನ್ನು ರಸ್ತೆ ಮೂಲಕ ವಿಜಯವಾಡಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದೆ.
ಹರಿಯಾಣ ವಿರುದ್ಧ ಪಂದ್ಯ
ದೆಹಲಿ ಅಂಡರ್ 16 ಆಟಗಾರರ ಭಾನುವಾರ (ಡಿ.7) ರಂದು ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಹರಿಯಾಣ ವಿರುದ್ಧ ಆಡಲಿದೆ. ಇದಕ್ಕು ಮೊದಲು ಆಟಗಾರರು ಸ್ಥಳಿಯರಿಂದ ಉಪಕರಣಗಳನ್ನು ಪಡೆದು ಅಭ್ಯಾಸ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬಿಸಿಸಿಐ ಮಟ್ಟದ ಟೂರ್ನಿಗಳಲ್ಲಿ ಈ ರೀತಿಯ ನಿರ್ಲಕ್ಷ್ಯವು ತೀವ್ರ ನಿರಾಶೆಯನ್ನು ಉಂಟುಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications