'ಭಾರತದಲ್ಲಿ ಸರಣಿ ಗೆದ್ದರೆ ಅದು ಆ್ಯಷಸ್ ಸರಣಿಗಿಂತಲೂ ಮಿಗಿಲು'

ಚೆನ್ನೈ: ಇಂಗ್ಲೆಂಡ್‌ನ ಮಾಜಿ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್‌ಗೆ ಭಾರತದಲ್ಲಿ ಸೋತ ಮತ್ತು ಗೆದ್ದ ಎರಡೂ ಅನುಭವಗಳಿವೆ. 2008ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಸ್ವಾನ್ ಪಾದಾರ್ಪಣೆ ಮಾಡಿದ್ದಾಗ ಭಾರತದ ವಿರುದ್ಧ ಇಂಗ್ಲೆಂಡ್ ಸೋತಿತ್ತು. ಆದರೆ ನಾಲ್ಕು ವರ್ಷಗಳ ಬಳಿಕ ಭಾರತಕ್ಕೆ ಮತ್ತೆ ಬಂದಿದ್ದ ಇಂಗ್ಲೆಂಡ್ 2-1ರಿಂದ ಸರಣಿ ಗೆದ್ದಿತ್ತು. ಆವತ್ತು ಆಂಗ್ಲರ ಗೆಲುವಿನಲ್ಲಿ ಸ್ವಾನ್ ಪ್ರಮುಖ ಪಾತ್ರವಹಿಸಿದ್ದರು.
ಭಾರತ-ಇಂಗ್ಲೆಂಡ್ ಸರಣಿಗೂ ಮುನ್ನ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಗ್ರೇಮ್ ಸ್ವಾನ್, ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದರೆ ಅದು ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಸರಣಿ ಗೆಲುವಿಗಿಂತಲೂ ಮಿಗಿಲು ಎಂದಿದ್ದಾರೆ. ಭಾರತ-ಇಂಗ್ಲೆಂಡ್ ಸರಣಿ ಫೆಬ್ರವರಿ 5ರಿಂದ ಆರಂಭಗೊಳ್ಳಲಿದೆ.
ಎರಡು ಬಲಿಷ್ಠ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಬಗ್ಗೆ ಏನನ್ನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾನ್, 'ಈ ಕ್ಷಣದಲ್ಲಿ ನನಗೆ ಭಾರತ ಗೆಲ್ಲುವ ತಂಡ ಅನ್ನಿಸುತ್ತಿದೆ. ಭಾರತಕ್ಕೆ ಹೋಗಿ ಅಲ್ಲಿ ಟೆಸ್ಟ್ ಸರಣಿ ಗೆಲ್ಲುವುದೆಂದರೆ ಇಂಗ್ಲೆಂಡ್ ಪಾಲಿಗೆ ಅದು ಆ್ಯಷಸ್ ಸರಣಿ ಗೆಲುವಿಗಿಂತಲೂ ದೊಡ್ಡದು,' ಎಂದಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 9.30 AMಗೆ ಆರಂಭಗೊಳ್ಳಲಿದೆ. 1933ರಿಂದ 2016ರ ವರೆಗೆ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಒಟ್ಟು 60 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 19 ಸಾರಿ ಗೆದ್ದಿದೆ. ಇಂಗ್ಲೆಂಡ್ 13 ಸಾರಿ ಜಯ ಕಂಡಿದೆ. 28 ಪಂದ್ಯಗಳು ಡ್ರಾ ಎನಿಸಿವೆ. ಚೆನ್ನೈ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಒಟ್ಟು 9 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಭಾರತ 5, ಇಂಗ್ಲೆಂಡ್ 3 ಪಂದ್ಯಗಳನ್ನು ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications