For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಟೆಸ್ಟ್ ಪ್ರವಾಸಕ್ಕೂ ಮುನ್ನ ನ್ಯೂಜಿಲ್ಯಾಂಡ್ ತಂಡಕ್ಕೆ ಹಿನ್ನಡೆ; ಸ್ಟಾರ್ ಬ್ಯಾಟ್ಸ್‌ಮನ್‌ಗೆ ಗಾಯ

ಜೂನ್ ತಿಂಗಳ ಮೊದಲ ವಾರದಲ್ಲಿ ಇಂಗ್ಲೆಂಡ್‌ಗೆ ಟೆಸ್ಟ್ ಸರಣಿ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲ್ಯಾಂಡ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಪ್ರವಾಸಕ್ಕೂ ಮೊದಲು ನ್ಯೂಜಿಲ್ಯಾಂಡ್ ತಂಡದ ಬ್ಯಾಟರ್ ಹೆನ್ರಿ ನಿಕೋಲಾಸ್ ಗಂಭೀರ ಗಾಯದಿಂದ ಬಳಲುತ್ತಿದ್ದಾರೆ.

ನ್ಯೂಜಿಲ್ಯಾಂಡ್ ಹಿರಿಯ ಬ್ಯಾಟರ್ ಹೆನ್ರಿ ನಿಕೋಲಾಸ್ ಅಭ್ಯಾಸದ ವೇಳೆ ಕಾಲಿಗೆ ಗಾಯವಾಗಿದ್ದರಿಂದ ನ್ಯೂಜಿಲ್ಯಾಂಡ್ ತಂಡಕ್ಕೆ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಗಾಯದ ಬರೆ ಎಳೆದಂತಾಗಿದೆ.

 Setback For The New Zealand Team Before The England Test tour; Star Batsman Injured

ಸೋಮವಾರದಂದು ರನ್ನಿಂಗ್ ಡ್ರಿಲ್‌ನಲ್ಲಿ ಐದನೇ ನಂಬರ್ ಅವರ ಬಲಗಾಲಿಗೆ ಗಾಯವಾಗಿದೆ ಎಂದು ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದು, ಜೂನ್ 2ರಂದು ಲಂಡನ್‌ನ ಲಾರ್ಡ್ಸ್‌ನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್‌ಗೆ ಮುಂಚಿತವಾಗಿ ನ್ಯೂಜಿಲ್ಯಾಂಡ್ ತಂಡವು ಮೇ ವಾರಾಂತ್ಯದಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ.

"ಹೆನ್ರಿ ನಿಕೋಲಾಸ್ ಗಾಯದ ನಂತರ ಇಂದು ಎಂಆರ್‌ಐ ಸ್ಕ್ಯಾನ್ ಮಾಡಿಸುತ್ತಿದ್ದಾರೆ, ಆದ್ದರಿಂದ ಅದರ ಬಗ್ಗೆ ನಾವು ಇನ್ನಷ್ಟು ತಿಳಿದುಕೊಳ್ಳುತ್ತೇವೆ," ಎಂದು ಮೌಂಟ್ ಮೌಂಗನುಯಿಯಲ್ಲಿನ ತಂಡದ ಶಿಬಿರದಿಂದ ಸುದ್ದಿಗಾರರಿಗೆ ಕೋಚ್ ಗ್ಯಾರಿ ಸ್ಟೇಡ್ ಹೇಳಿದರು.

 Setback For The New Zealand Team Before The England Test tour; Star Batsman Injured

ಮುಂದಿನ 24 ರಿಂದ 48 ಗಂಟೆಗಳ ಕಾಲ ಅದು ಎಷ್ಟು ಗಂಭೀರವಾಗಿರುತ್ತದೆ ಎಂಬುದರ ಸೂಚನೆ ತಿಳಿಯಲಿದೆ ಎಂದು ನಾನು ಭಾವಿಸುತ್ತೇನೆ. 30 ವರ್ಷದ ಹೆನ್ರಿ ನಿಕೋಲಾಸ್ ನ್ಯೂಜಿಲ್ಯಾಂಡ್‌ನ ಮಧ್ಯಮ ಕ್ರಮಾಂಕದ ಪ್ರಮುಖ ಭಾಗವಾಗಿದ್ದಾರೆ. ಇವರು 46 ಟೆಸ್ಟ್‌ಗಳಲ್ಲಿ ಎಂಟು ಶತಕಗಳೊಂದಿಗೆ 40.38 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ತವರಿನ ಸರಣಿಯಲ್ಲಿ ಹೆನ್ರಿ ನಿಕೋಲಾಸ್ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ ದೀರ್ಘಕಾಲದ ಮೊಣಕೈ ಸಮಸ್ಯೆಯಿಂದ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಮರಳಲು ಸಿದ್ಧರಾದರೆ ಹೆನ್ರಿ ನಿಕೋಲಾಸ್ ಅವರನ್ನು ಕೈಬಿಡುವ ನಿರೀಕ್ಷೆಯಿದೆ.

ನ್ಯೂಜಿಲ್ಯಾಂಡ್ ಕಳೆದ ವಾರ ಮೂರು ಟೆಸ್ಟ್‌ಗಳ ಸರಣಿಗೆ 20 ಮಂದಿಯ ವಿಸ್ತೃತ ತಂಡವನ್ನು ಹೆಸರಿಸಿದೆ. ಒಂಬತ್ತು ತಂಡಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಬ್ಲ್ಯಾಕ್ ಕ್ಯಾಪ್ಸ್, ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ವಾಸ್ತವಿಕ ಅವಕಾಶವನ್ನು ಹೊಂದಲು ಕೊನೆಯ ಸ್ಥಾನದಲ್ಲಿರುವ ಇಂಗ್ಲೆಂಡ್ ಅನ್ನು ವೈಟ್‌ವಾಶ್ ಆಗಿ ಸೋಲಿಸುವ ಅಗತ್ಯವಿದೆ.

Story first published: Tuesday, May 10, 2022, 18:00 [IST]
Other articles published on May 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+