CT 2025: ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದ 7 ಸ್ಟಾರ್ ವೇಗಿಗಳು ಇವರೇ..
ಬಹುನಿರೀಕ್ಷಿತ ಪುರುಷರ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ವೇದಿಕೆ ಸಜ್ಜಾಗುತ್ತಿದೆ. ಈ ಮೆಗಾ ಟೂರ್ನಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ವಿಶ್ವದ ಟಾಪ್ ಎಂಟು ತಂಡಗಳು ತಮ್ಮ ತಮ್ಮ ಸಿದ್ಧತೆಗಳಲ್ಲಿ ನಿರತವಾಗಿವೆ. ಆದರೆ ಹೆಚ್ಚು ಚರ್ಚೆಯಾಗುತ್ತಿರುವುದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು. ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಿಂದ ಟೀಮ್ ಇಂಡಿಯಾ ಆಘಾತಕ್ಕೊಳಗಾಗಿದ್ದರೆ, ಆಸ್ಟ್ರೇಲಿಯಾ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಕೇವಲ ಒಬ್ಬರು ಅಥವಾ ಇಬ್ಬರು ಅಲ್ಲ, ಒಟ್ಟು 6 ಸ್ಟಾರ್ ವೇಗಿಗಳು ಈ ಮೆಗಾ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.
ಜಸ್ಪ್ರೀತ್ ಬುಮ್ರಾ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅವರು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ ಅವರು ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಹರ್ಷಿತ್ ರಾಣಾ ಅವರನ್ನು ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರಾಣಾ ಟೀಮ್ ಇಂಡಿಯಾ ಪರ 2 ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ.

ಆಸೀಸ್‌ಗೆ ಆಘಾತ
ಆಸ್ಟ್ರೇಲಿಯಾ ತಂಡದಲ್ಲಿ ಗಾಯಗೊಂಡ ಆಟಗಾರರ ಸೈನ್ಯವೇ ರೂಪುಗೊಂಡಿದೆ. ಮೊದಲು ನೆನಪಿಗೆ ಬರುವ ಹೆಸರು ಚಾಂಪಿಯನ್ ನಾಯಕ ಪ್ಯಾಟ್ ಕಮ್ಮಿನ್ಸ್, ಗಾಯದಿಂದಾಗಿ ಅವರು ಟೂರ್ನಿಯಿಂದ ಹೊರಗುಳಿದಿದ್ದರು. ಇದಲ್ಲದೆ, ಮಿಚೆಲ್ ಸ್ಟಾರ್ಕ್ ವೈಯಕ್ತಿಕ ಕಾರಣಗಳಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡರು. ಇನ್ನೂ ಸ್ಟಾರ್ ಬೌಲರ್ ಜೋಶ್ ಹ್ಯಾಜಲ್‌ವುಡ್ ಕೂಡ ಗಾಯದ ಕಾರಣದಿಂದಾಗಿ ಚಾಂಪಿಯನ್ಸ್ ಟ್ರೋಫಿಯ ಆಸ್ಟ್ರೇಲಿಯಾ ತಂಡದ ಭಾಗವಾಗಿಲ್ಲ. ಈ ಮೂವರು ಅನುಭವ ಆಟಗಾರರಲ್ಲದೆ, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್ ಮತ್ತು ಕ್ಯಾಮರೂನ್ ಗ್ರೀನ್ ಕೂಡ ಈ ಮೆಗಾ ಟೂರ್ನಿಯನ್ನು ಆಡುತ್ತಿಲ್ಲ.
ರೌಫ್-ನಾರ್ಟ್ಜೆ ಔಟ್
ಪಾಕಿಸ್ತಾನದ ಸ್ಟಾರ್ ಬೌಲರ್ ಹ್ಯಾರಿಸ್ ರೌಫ್ ಕೂಡ ಗಾಯದ ಕಾರಣದಿಂದಾಗಿ ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ತ್ರಿಕೋನ ಸರಣಿಯಲ್ಲಿ ಅವರು ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಈಗ ಪಾಕಿಸ್ತಾನ ತಂಡಕ್ಕೆ ಹ್ಯಾರಿಸ್ ರೌಫ್ ಬದಲಿಗೆ ಅಕಿಬ್ ಜಾವೇದ್ ಅವರಿಗೆ ಪಿಸಿಬಿ ಅವಕಾಶವನ್ನು ನೀಡಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್ ನಾರ್ಟ್ಜೆ
ಕೂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ನಡೆದಿದ್ದಾರೆ. ಅವರ ಬದಲಿಗೆ ಸ್ಟಾರ್ ಬಲಗೈ ವೇಗಿ ಕಾರ್ಬಿನ್ ಬಾಷ್ ತಂಡ ಸೇರಿಕೊಂಡಿದ್ದಾರೆ.
ಹೊರಗುಳಿದ ಸ್ಟಾರ್ ವೇಗಿಗಳು
ಜಸ್ಪ್ರೀತ್ ಬುಮ್ರಾ (ಭಾರತ)
ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ)
ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ)
ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
ಅನ್ರಿಕ್ ನೋರ್ಖಿಯಾ (ದಕ್ಷಿಣ ಆಫ್ರಿಕಾ)
ಹ್ಯಾರಿಸ್ ರೌಫ್ (ಪಾಕಿಸ್ತಾನ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications