Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಟ್ರೋಫಿ ಗೆಲುವಿನ ರುವಾರಿ ಮಾರಕ ಬೌಲರ್ ವಿರುದ್ಧ ನೊಂದ ಮಹಿಳೆಯ ಆರೋಪಗಳ ಸುರಿಮಳೆ

ರಾಯಲ್‌ ಚಾಲೆಂಜರ್ಸ್‌ ತಂಡದ ವೇಗದ ಬೌಲರ್‌ ಯಶ್‌ ದಯಾಳ್‌ ವಿರುದ್ಧ ಒಬ್ಬ ಮಹಿಳೆ ಮದುವೆ ಆಗುವುದಾಗಿ ನಂಬಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಮಹಿಳೆ ಆರ್‌ಸಿಬಿ ಸ್ಟಾರ್ ಬೌಲರ್‌ ಜೊತೆ 5 ವರ್ಷಗಳ ಕಾಲ ಸಂಬಂಧ ಹೊಂದಿದ್ದರು. ಇದೇ ವೇಳೆ ಮಹಿಳೆ ದೈಹಿಕ, ಮಾನಸಿಕ, ಭಾವನಾತ್ಮಕ ಶೋಷಣೆಗೆ ಒಳಗಾಗಿದ್ದರು ಎಂದು ತಿಳಿಸಿದ್ದು, ಈಗ ಬರುತ್ತಿರುವ ವರದಿಗಳ ಅನುಸಾರ ಯಶ್ ದಯಾಳ್ ಹಲವು ಮಹಿಳೆಯರ ಜೊತೆ ಸಂಬಂಧ ಹೊಂದಿರುವುದು ವರದಿಗಳಿಂದ ಬಯಲಾಗಿದೆ.

ಆರ್‌ಸಿಬಿ ಬೌಲರ್‌ ವಿರುದ್ಧ ದೂರು ನೀಡಿದ್ದ ಮಹಿಳೆ ತನ್ನ ಆರೋಪ ಪಟ್ಟಿಯನ್ನು ವಿಸ್ತರಿಸಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಇದೇ ವೇಳೆ ಮಹಿಳೆ, ಯಶ್‌ಗೆ ಅನೇಕ ಮಹಿಳೆಯರ ಜೊತೆ ಸಂಬಂಧ ಇದ್ದದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯ ಹೇಳಿಕೆಯನ್ನು ಪಡೆದ ಗಾಜಿಯಾಬಾದ್‌ ಪೊಲೀಸರು ವೇಗಿಗೆ ನೊಟೀಸ್ ನೀಡಿದ್ದಾರೆ.

Sexual Harassment Allegations Mount Against RCB Bowler Yash Dayal

ಯಶ್ ದಯಾಳ ಹಾಗೂ ಆರೋಪಗಳ ಸುರಿಮಳೆ ಗೈಯುತ್ತಿರುವ ಮಹಿಳೆ ಆರಂಭದಲ್ಲಿ ಸಾಮಾಜಿಕ ತಾಣದ ಮೂಲಕ ಪರಿಚರಾದರು. ಈ ಮೂಲಕ ಈ ಮಹಿಳೆ ಯಶ್‌ ಮನೆಯವರಿಗೆ ಹತ್ತಿರವಾಗಿ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಆರೋಪಿತ ಮಹಿಳೆಯನ್ನು ಯಶ್‌ ತಂದೆ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಇನ್ನು ಇದೇ ವೇಳೆ ವೇಗಿಯ ವಿರುದ್ಧ ಆರೋಪ ನೀಡಿದ ಮಹಿಳೆ, ತಾವಿಬ್ಬರೂ ಆರ್‌ಸಿಬಿ ಆಟಗಾರನ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದಾಗಿ ಹೇಳಿದ್ದಾರೆ.

ಹಲವು ಮಹಿಳೆಯರೊಂದಿಗೆ ಸಂಬಂಧ

ಯಶ್‌ ದಯಾಳ್‌ ಅವರು ಬೇರೆ ಮಹಿಳೆಯ ಜೊತೆ ಸಂಬಂಧ ಹೊಂದಿರುವ ಸುದ್ದಿ ಏಪ್ರಿಲ್ 17 ರಂದು ಬೆಳಕಿಗೆ ಬಂದಿದ್ದಾಗಿ ದೂರುದಾರ ಮಹಿಳೆ ತಿಳಿಸಿದ್ದಾರೆ. ಅಲ್ಲದೆ ಅವರು ಯಶ್‌ ಜೊತೆಗಿನ ಸಂಬಂಧದ ಪುರಾವೆ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ನನ್ನನ್ನು ಹಣ, ಖ್ಯಾತಿಯ ಮೂಲಕ ತಡೆಯುವ ಪ್ರಯತ್ನಗಳು ನಡೆದವು. ಆದರೆ ನಾನು ಅದಕ್ಕೆ ಬೆದರಲಿಲ್ಲ. ಆಗ ಯಶ್‌ ನನಗೆ ಮೋಸ್ ಮಾಡುತ್ತಿದ್ದಾನೆಂದು ತಿಳಿಯಿತು. ಅವರ ಕುಟುಂಬಸ್ಥರು ನನ್ನ ವಿರುದ್ಧ ಅನುಚಿತ ವರ್ತನೆ ತೋರಿದಾಗ ನಾನು ಕಾನೂನು ಹೋರಾಟಕ್ಕೆ ಮುಂದಾಗಿದ್ದೇನೆ. ಅಲ್ಲದೆ ಭಾರತೀಯ ಕಾನೂನು ವ್ಯವಸ್ಥೆಯ ಮೇಲೆ ನನಗೆ ಅಪಾರ ನಂಬಿಕೆ ಇರುವುದಾಗಿ ದೂರುದಾರ ಮಹಿಳೆ ತಿಳಿಸಿದ್ದಾರೆ.

Sexual Harassment Allegations Mount Against RCB Bowler Yash Dayal

18ನೇ ಆವೃತ್ತಿಯ ಐಪಿಎಲ್‌ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್‌ಸಿಬಿ ತಂಡದ ವೇಗದ ಬೌಲರ್‌ ಯಶ್ ದಯಾಳ್ ವಿರುದ್ಧ ಲೈಗಿಂಕ ಕಿರುಕುಳದ ಆರೋಪ ಸಹ ಹೊರಿಸಲಾಗಿದೆ. ದೂರುದಾರ ಮಹಿಳೆ ಅನ್‌ಲೈನ್‌ನಲ್ಲಿ ದೂರು ದಾಖಲಿಸಿದ್ದಾರೆ.

Story first published: Monday, June 30, 2025, 18:13 [IST]
Other articles published on Jun 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+