Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shabnim Ismail: ಟಿ20 ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ದಕ್ಷಿಣ ಆಫ್ರಿಕಾದ ವೇಗಿ: ಇಂಗ್ಲೆಂಡ್‌ ಫೈನಲ್‌ಗೆ

ಮಹಿಳಾ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 40 ರನ್‌ಗಳಿಂದ ಮಣಿಸಿದ ಇಂಗ್ಲೆಂಡ್‌ ಫೈನಲ್‌ಗೆ ಅರ್ಹತೆ ಪಡೆದಿದೆ. ಭಾನುವಾರ ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ನಡೆಯಲಿರುವ ಫೈನಲ್‌ ಫೈಟ್‌ನಲ್ಲಿ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲು ಕಂಡರೂ, ಶಬ್ನಿಮ್ ಇಸ್ಮಾಯಿಲ್ ಇತಿಹಾಸ ನಿರ್ಮಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಅನುಭವಿ ವೇಗದ ಬೌಲರ್‌ ಶಬ್ನಿಮ್ ಇಸ್ಮಾಯಿಲ್ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಶಬ್ನಿಮ್ ಇಸ್ಮಾಯಿಲ್ ಎರಡು ವಿಕೆಟ್‌ ಪಡೆಯುತ್ತಲೇ ದೊಡ್ಡ ಸಾಧನೆ ಮಾಡಿದರು. ಈ ಮೂಲಕ ಪುರುಷ ಮತ್ತು ಮಹಿಳಾ ಟಿ20 ವಿಶ್ವಕಪ್‌ಗಳ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿದ್ದಾರೆ. ಈ ಮೂಲಕ ಇವರು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

Shabnim Ismail

2026 ರ ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾದ ಮಹಿಳಾ ವೇಗಿ ಶಬ್ನಿಮ್ ಇಸ್ಮಾಯಿಲ್‌ ಸ್ಥಿರ ಪ್ರದರ್ಶನ ನೀಡಿಲ್ಲ. ಇವರು ಆಡಿದ 6 ಪಂದ್ಯಗಳಲ್ಲಿ 8 ವಿಕೆಟ್‌ ಕಬಳಿಸಿದ್ದಾರೆ. ಈ ಮೂಲಕ ಶಬ್ನಿಮ್ ಟಿ20 ವಿಶ್ವಕಪ್‌ನಲ್ಲಿ 50 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಈ ಮೂಲಕ ಇವರು ಶಕಿಬ್ ಅಲ್ ಹಸನ್ ಅವರನ್ನು ಹಿಂದಿಕ್ಕಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದರು.

Women's T20 World Cup 2026: ಎಲ್ಲಿಸ್ ಪೆರ್ರಿ ಜವಾಬ್ದಾರಿಯುತ ಆಟ: ಹರ್ಮನ್‌ಪ್ರಿತ್ ಕೌರ್‌ ಅಭಿಯಾನ ಅಂತ್ಯ

Women's T20 World Cup 2026: ಎಲ್ಲಿಸ್ ಪೆರ್ರಿ ಜವಾಬ್ದಾರಿಯುತ ಆಟ: ಹರ್ಮನ್‌ಪ್ರಿತ್ ಕೌರ್‌ ಅಭಿಯಾನ ಅಂತ್ಯ

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌

ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ ಮಹಿಳಾ ತಂಡ), 51 ವಿಕೆಟ್‌ಗಳು
ಶಕಿಬ್ ಅಲ್ ಹಸನ್ (ಬಾಂಗ್ಲಾದೇಶ ಪುರುಷರ ತಂಡ), 50 ವಿಕೆಟ್‌ಗಳು
ಮೇಗನ್ ಶುಟ್ (ಆಸ್ಟ್ರೇಲಿಯಾ ಮಹಿಳಾ ತಂಡ), 48 ವಿಕೆಟ್‌ಗಳು
ಎಲಿಸ್ ಪೆರ್ರಿ (ಆಸ್ಟ್ರೇಲಿಯಾ ಮಹಿಳಾ ತಂಡ), 44 ವಿಕೆಟ್‌ಗಳು
ಆಡಮ್ ಜಂಪಾ (ಆಸ್ಟ್ರೇಲಿಯಾ ಪುರುಷರ ತಂಡ), 44 ವಿಕೆಟ್‌ಗಳು
ಆದಿಲ್ ರಶೀದ್ (ಇಂಗ್ಲೆಂಡ್ ಪುರುಷರ ತಂಡ), 44 ವಿಕೆಟ್‌ಗಳು

IND W vs AUS W: ಟೀಮ್ ಇಂಡಿಯಾ ಗೆದ್ದರೆ ಸೆಮಿಫೈನಲ್‌ ಪ್ರವೇಶ ಸುಲಭ; ಪಿಚ್‌ ವರದಿ, ನೇರಪ್ರಸಾರದ ಮಾಹಿತಿ

IND W vs AUS W: ಟೀಮ್ ಇಂಡಿಯಾ ಗೆದ್ದರೆ ಸೆಮಿಫೈನಲ್‌ ಪ್ರವೇಶ ಸುಲಭ; ಪಿಚ್‌ ವರದಿ, ನೇರಪ್ರಸಾರದ ಮಾಹಿತಿ

ಇಂಗ್ಲೆಂಡ್‌ ಫೈನಲ್‌ಗೆ

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 169 ರನ್‌ ಕಲೆ ಹಾಕಿದರು. ಇಂಗ್ಲೆಂಡ್ ತಂಡದ ಪರ ನ್ಯಾಟ್ ಸ್ಕಿವರ್-ಬ್ರಂಟ್ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 75 ರನ್‌ ಬಾರಿಸಿದರು. ಹೀದರ್ ನೈಟ್ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 58 ರನ್‌ ಸಿಡಿಸಿದರು. ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 129 ರನ್‌ ಕಲೆ ಹಾಕಿ ಸೋಲು ಕಂಡಿತು. ದಕ್ಷಿಣ ಆಫ್ರಿಕಾ ತಂಡದ ಪರ ತಜ್ಮಿನ್ ಬ್ರಿಟ್ಸ್ 51 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು. ಇಂಗ್ಲೆಂಡ್‌ ಸತತ ಎರಡನೇ ಬಾರಿಗೆ ಮಹಿಳಾ ಟಿ20 ವಿಶ್ವಕಪ್‌ ಎತ್ತುವ ಕನಸಿನಲ್ಲಿದೆ.

Story first published: Friday, July 3, 2026, 12:47 [IST]
Other articles published on Jul 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+