Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೈಲ್ಡ್ ಕಾರ್ಡ್‌ ಮೂಲಕ ತಂಡಕ್ಕೆ ಎಂಟ್ರಿ: ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರದರ್ಶನ

ಟೀಮ್ ಇಂಡಿಯಾ ಏಕದಿನ ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಿದಾಗ ಆ ಪ್ಲೇಯರ್‌ ಮಿಸ್‌ ಇದ್ರು. ಆದರೆ ವಿಶ್ವಾಸ ಮಾತ್ರ ಬಿಟ್ಟಿರಲಿಲ್ಲ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದೇ ಇದ್ದಾಗ, ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದ ಸ್ಟಾರ್ ಆಟಗಾರ್ತಿಗೆ ಬಂದ ಆ ಒಂದು ಕಾಲ್‌ ಜೀವನವನ್ನೆ ಬದಲಿಸಿತು. ಆರಂಭಿಕ ಆಟಗಾರ್ತಿಗೆ ಆದ ಗಾಯ, ಈ ಪ್ಲೇಯರ್‌ಗೆ ವರದಾನವಾಯಿತು. ಒಂದು ವಾರದ ಹಿಂದೆ ಮನೆಯಲ್ಲಿ ಕುಳಿತು ವಿಶ್ವಕಪ್‌ ಪಂದ್ಯಗಳ ಮಜಾ ಸವಿಯುತ್ತಿದ್ದ ಪ್ಲೇಯರ್‌, ಒಂದು ವಾರದ ಬಳಿಕ ನಾಕೌಟ್‌ ಸ್ಟೇಜ್‌ಗಳಲ್ಲಿ ಭಾರತ ತಂಡಕ್ಕೆ ಎಂಟ್ರಿ ನೀಡಿ, ತಮ್ಮ ವೃತ್ತಿ ಜೀವನದ ಸ್ಮರಣೀಯ ಇನಿಂಗ್ಸ್ ಆಡಿದರು.

ತಂಡವನ್ನು ವಿಶ್ವಕಪ್‌ಗೆ ಪ್ರಕಟಿಸಿದಾಗ ಕಾಯ್ದಿರಿಸಿದ ಆಟಗಾರ್ತಿಯ ಪಟ್ಟಿಯಲ್ಲೂ ಇವರಿಗೆ ಸ್ಥಾನ ಇರಲಿಲ್ಲ. ಆದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಗಾಯಕ್ಕೆ ತುತ್ತಾದರು. ಇವರು ಟೂರ್ನಿಯಿಂದ ಹೊರ ನಡೆದ ಬಳಿಕ, ಈ ಆಟಗಾರ್ತಿಗೆ ಆಡುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಅದ್ಭುತವಾಗಿ ಮನಗೊಂಡಿದ್ದ ಈ ಪ್ಲೇಯರ್‌ ಫೈನಲ್‌ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆ ಪ್ಲೇಯರ್ ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ.

Shafali Verma From Sidelines to Star Her Iconic World Cup Final Performance

ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡುವಲ್ಲಿ ಸಂಘಟಿತ ಆಟ ಎದ್ದು ಕಾಣುತ್ತದೆ. ಆದರೆ ಸ್ಟ್ಯಾಂಡ್‌ ಔಟ್ ಪರ್ಫಾಮೆನ್ಸ್‌ ನೀಡಿದ್ದು ಮಾತ್ರ ಶೆಫಾಲಿ ವರ್ಮಾ. ಸೆಮಿಫೈನಲ್‌ ಹಂತ ತಂಡ ತಲುಪಿದಾಗ ತಂಡಕ್ಕೆ ಎಂಟ್ರಿ ನೀಡಿದ್ದ ಶೆಫಾಲಿ, ಆಸ್ಟ್ರೇಲಿಯಾ ವಿರುದ್ಧ ನಿರಾಸೆ ಅನುಭವಿಸಿದು. ಆದರೆ ಫೈನಲ್‌ನಲ್ಲಿ ಮಾತ್ರ ಶೆಫಾಲಿ ಅಮೋಘ ಆಟವನ್ನು ಆಡಿ ಎಲ್ಲರೂ ಹುಬ್ಬೇರುವಂತೆ ಮಾಡಿದರು.

ಫೈನಲ್‌ನಲ್ಲಿ ಅಬ್ಬರ

ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಶೆಫಾಲಿ ತಮ್ಮ ಏಕದಿನ ವೃತ್ತಿ ಜೀವನದ ಬೆಸ್ಟ್‌ ಇನಿಂಗ್ಸ್ ಕಟ್ಟಿದರು. ಇವರು 78 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 87 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಲ್ಲದೆ ಬೌಲಿಂಗ್‌ನಲ್ಲೂ ಕಮಾಲ್ ಪ್ರದರ್ಶನ ನೀಡಿದರು. ಶೆಫಾಲಿ ಬೌಲಿಂಗ್‌ನಲ್ಲೂ ಎರಡೂ ವಿಕೆಟ್‌ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಂದಹಾಗೆ ಶೆಫಾಲಿ ವರ್ಮಾ ತಮ್ಮ ಏಕದಿನ ಕ್ರಿಕೆಟ್‌ನಲ್ಲಿ ಫೈನಲ್‌ ಪಂದ್ಯಕ್ಕೂ ಮುನ್ನ ಒಟ್ಟು 14 ಓವರ್‌ಗಳನ್ನು ಬೌಲ್ ಮಾಡಿದ್ದರು. ಆದರೆ ಫೈನಲ್‌ನಲ್ಲಿ 7 ಓವರ್‌ ಬೌಲ್ ಮಾಡಿ 2 ವಿಕೆಟ್‌ ಉರುಳಿಸಿದರು. ಅಲ್ಲದೆ 3 ವರ್ಷಗಳ ಬಳಿಕ ವಿಕೆಟ್‌ ಪಡೆದ ಸಾಧನೆ ಮಾಡಿದರು.

Story first published: Monday, November 3, 2025, 8:20 [IST]
Other articles published on Nov 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+