
ಮಹಿಳಾ ಕ್ರಿಕೆಟ್‌ನಲ್ಲಿ ಮಿಂಚುಹರಿಸುತ್ತಿರುವ ಶೆಫಾಲಿ ವರ್ಮ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ವಿಶ್ವಕಪ್‌ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಅತ್ಯುತ್ತಮಮ ಆಟವನ್ನು ಪ್ರದರ್ಶಿಸುತ್ತಿರುವ ಶೆಫಾಲಿ ವರ್ಮ ಮತ್ತೊಂದು ಅದ್ಭುತ ಸಾಧನೆಯನ್ನು ಮಾಡಿದ್ದಾರೆ.
ಮಹಿಳಾ ಟಿ20 ಕ್ರಿಕೆಟ್‌ನ ಶ್ರೇಯಾಂಕ ಪಟ್ಟಿಯನ್ನು ಐಸಿಸಿ ಬಿಡುಗಡೆಗೊಳಿಸಿದ್ದು ಟೀಮ್ ಇಂಡಿಯಾದ ಆಟಗಾರ್ತಿ ಶೆಫಾಲಿ ವರ್ಮ ಎಲ್ಲರನ್ನೂ ಹಿಂದಿಕ್ಕಿ ಮೊದಲ ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ.ಈ ಮೂಲಕ ಕ್ರಿಕೆಟ್‌ಲೋಕವನ್ನು ಅಚ್ಚರಿಗೊಳಪಡಿಸಿದ್ದಾರೆ.
ಹೌದು ಈ ಅಚ್ಚರಿಗೆ ಕಾರಣವೂ ಇದೆ. ಶೆಫಾಲಿ ವರ್ಮ ಆಡಿದ ಪಂದ್ಯಗಳ ಸಂಖ್ಯೆ ಮತ್ತು ಆಕೆಯ ವಯಸ್ಸು. ಶೆಫಾಲಿ ವರ್ಮ ಈವರೆಗೆ ಆಡಿದ ಪಂದ್ಯಗಳ ಸಂಖ್ಯೆ ಕೇವಲ 18. ಆಕೆಯ ವಯಸ್ಸು ಇನ್ನೂ 16 ವರ್ಷ. ಇಷ್ಟು ಕಡಿಮೆ ಪಂದ್ಯಗಳಲ್ಲಿ ಇಷ್ಟು ಸಣ್ಣ ವಯಸ್ಸಿನಲ್ಲಿ ಶೆಫಾಲಿ ವರ್ಮ ನಂಬರ್ 1 ಸ್ಥಾನಕ್ಕೇರಿದ್ದಾರೆ.
ಶೆಫಾಲಿ ವರ್ಮ 19 ಸ್ಥಾನಗಳ ಏರಿಕೆಯನ್ನು ಕಂಡು ಮೊದಲ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದ ಸುಯಿ ಬ್ಯಾಟಸ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿ ಮೊದಲ ಸ್ಥಾನದಲ್ಲಿ ಶೆಫಾಲಿ ಈ ಸಾಧನೆಯನ್ನು ಮಾಡಿದ್ದಾರೆ. ಟೀಮ್ ಇಂಡಿಯಾದ ಮತ್ತೋರ್ವ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಎರಡು ಸ್ಥಾನಗಳ ಕುಸಿತ ಕಂಡಿದ್ದಾರೆ. ಟೀಮ್ ಇಂಡಿಯಾದ ಮತ್ತೋರ್ವ ಅಗ್ರ ಕ್ರಮಾಂಕದ ಆಟಗಾರ್ತಿ ಜಮಿಮಾ ರೋಡ್ರಿಗ್ರಸ್ ಟಾಪ್ 10 ರಲ್ಲಿ ಸ್ಥಾನವನನ್ನು ಉಳಿಸಿಕೊಂಡಿರುವ ಮತ್ತೋರ್ವ ಆಟಗಾರ್ತಿ. ಆದರೆ ಜಮಿಮಾ ಎರಡು ಸ್ಥಾನಗಳ ಕುಸಿತವನ್ನು ಕಂಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್‌ನ ಸೋಫಿ ಎಕ್ಲಿಸ್ಟನ್ ಎರಡು ಸ್ಥಾನಗಳ ಏರಿಕೆಯೊಂದಿಗೆ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಸ್ಪಿನ್ನರ್ ಪೂನಮ್ ಯಾದವ್ ಟಾಪ್ 10ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ದೀಪ್ತಿ ಶರ್ಮಾ, ರಾಧಾ ಯಾದವ್ ಜೊತೆಗೆ ಟಾಪ್10ನಲ್ಲಿ ಕಾಣಿಸಿಕೊಂಡಿರುವ ಮೂರನೇ ಆಟಗಾರ್ತಿಯಾಗಿದ್ದಾರೆ.