For Quick Alerts
ALLOW NOTIFICATIONS  
For Daily Alerts
 

WPL 2025: ಸಿಕ್ಸರ್‌ಗಳ ಮೂಲಕ ಅಬ್ಬರಿಸಿರುವ ಆಟಗಾರ್ತಿಯರ ಪಟ್ಟಿ ಇಲ್ಲಿದೆ

ಇನ್ನೇನು ಕೆಲವೇ ದಿನಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಮಹಾನ್ ಕ್ರಿಕೆಟ್‌ ಲೀಗ್‌ಗೆ ಎಲ್ಲ ತಂಡಗಳು ತಯಾರಿ ನಡೆಸಿವೆ. ಚುಟುಕು ಫಾರ್ಮೆಟ್‌ನಲ್ಲಿ ಮಹಿಳಾ ಆಟಗಾರ್ತಿಯರು ತಮ್ಮ ಸ್ಫೋಟಕ ಆಟದ ಮೂಲಕ ಅಭಿಮಾನಿಗಳ ಮನದಲ್ಲಿ ಸ್ಥಾನ ಪಡೆಯಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಈಗಾಗಲೆ ಡಬಲ್ಲ್ಯುಪಿಎಲ್‌ ಎರಡು ಆವೃತ್ತಿಗಳನ್ನು ಕಂಡಿದ್ದು, ಮೂರನೇ ಆವೃತ್ತಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮಹಿಳಾ ಲೀಗ್‌ ಕೆಲವೇ ದಿನಗಳಲ್ಲಿ ಭಾರತದಲ್ಲಿ ಭಾರೀ ಸದ್ದು ಮಾಡಲಿದೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿಯರು ಅಭಿಮಾನಿಗಳಿಗೆ ಹತ್ತಿರವಾಗಲು ಈ ಲೀಗ್‌ ತುಂಬ ಸಹಾಯಮಾಡುತ್ತಿದೆ. ಈ ಲೀಗ್‌ನಲ್ಲಿ ಅಬ್ಬರಿಸಿದ ಬಳಿಕ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಪಡೆದ ಉದಾಹರಣೆಗಳು ಇವೆ. ಈ ಲೀಗ್‌ನಲ್ಲಿ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಈ ಲೀಗ್‌ನಲ್ಲಿ ಮಹಿಳಾ ಆಟಗಾರ್ತಿಯರು ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಹಾಗಿದ್ದರೆ ಮಹಿಳಾ ಲೀಗ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗರ್ತಿಯರ ಪಟ್ಟಿ ಇಲ್ಲಿದೆ.

Shafali Verma Leads Most Sixes Chart in Women s Premier League Ahead of Third Edition

ಶಫಾಲಿಗೆ ಅಗ್ರ ಸ್ಥಾನ

ಮಹಿಳಾ ಲೀಗ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಪಟ್ಟಿಯಲ್ಲಿ ಭಾರತದ ಆಟಗಾರ್ತಿಗೆ ಅಗ್ರ ಸ್ಥಾನ. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಶಫಾಲಿ ವರ್ಮಾ ಸಿಕ್ಸರ್‌ ಕ್ವಿನ್‌ ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ಆಡಿದ 18 ಪಂದ್ಯಗಳಲ್ಲಿ 561 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರು 33 ಸಿಕ್ಸರ್‌ ಬಾರಿಸಿ ಮಿಂಚಿದ್ದಾರೆ. ಇನ್ನು 59 ಬೌಂಡರಿ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

ಕಿವೀಸ್ ಆಟಗಾರ್ತಿ ಅಬ್ಬರ

ಆರ್‌ಸಿಬಿ ಪರ ಬ್ಯಾಟ್ ಮಾಡುವ ನ್ಯೂಜಿಲೆಂಡ್ ತಂಡದ ಸೋಫಿಯಾ ಡಿವೈನ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಲೀಗ್‌ನಲ್ಲಿ ತಮ್ಮ ನೈಜ ಆಟವನ್ನು ಆಡಿರುವ ಸೋಪಿಯಾ ಆಡಿದ 18 ಟಿ20 ಪಂದ್ಯಗಳಲ್ಲಿ 20 ಸಿಕ್ಸರ್‌ ಸಿಡಿಸಿದ್ದಾರೆ. ಅಲ್ಲದೆ 45 ಬೌಂಡರಿಗಳನ್ನು ಚಚ್ಚಿದ್ದಾರೆ.

Shafali Verma Leads Most Sixes Chart in Women s Premier League Ahead of Third Edition

21 ವರ್ಷದ ಯುವ ಆಟಗಾರ್ತಿಯ ಆರ್ಭಟ

ಈಗಾಗಲೇ ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡು ಆವೃತ್ತಿಗಳಲ್ಲಿ ಧಮಾಕೆದಾರ್ ಪ್ರದರ್ಶನ ನೀಡಿರುವ ರಿಚಾ ಘೋಷ್‌ ಆರ್ಭಟಿಸಿದ್ದಾರೆ. 21 ವರ್ಷದ ರಿಚಾ ಘೋಷ್ ಆರ್‌ಸಿಬಿ ಪರ 18 ಪಂದ್ಯಗಳಲ್ಲಿ ಬ್ಯಾಟ್ ಮಾಡಿದ್ದಾರೆ. ಈ ವೇಳೆ 17 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇನ್ನು ಇವರು 32ರ ಸರಾಸರಿಯಲ್ಲಿ ಟೂರ್ನಿಯಲ್ಲಿ 395 ರನ್‌ ಬಾರಿಸಿದ್ದಾರೆ.

ಅಭಿಮಾನಿಗಳ ಚಿತ್ತ ಕದ್ದಿರುವ ಆಸೀಸ್‌ ಬ್ಯಾಟರ್‌

ಆಸ್ಟ್ರೇಲಿಯಾ ತಂಡದ ಅನುಭವಿ ಬ್ಯಾಟರ್‌ ಗ್ರೇಸ್ ಹ್ಯಾರಿಸ್ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು 14 ಪಂದ್ಯಗಳಲ್ಲಿ 16 ಸಿಕ್ಸರ್‌ ತಮ್ಮ ಬುಟ್ಟಿಯಲ್ಲಿ ಹೊಂದಿದ್ದಾರೆ. ಇನ್ನು ಗ್ರೇಸ್ ಹ್ಯಾರಿಸ್ 41ರ ಸರಾಸರಿಯಲ್ಲಿ 418 ರನ್‌ ಕಲೆ ಹಾಕಿದ್ದು ಎಲ್ಲರ ಚಿತ್ತ ಕದ್ದಿದ್ದಾರೆ.

ಐದನೇ ಸ್ಥಾನದಲ್ಲಿ ಆಲಿಸ್ ಕ್ಯಾಪ್ಸಿ

ಇಂಗ್ಲೆಂಡ್‌ ತಂಡದ 20 ವರ್ಷದ ಆಟಗಾರ್ತಿ ಆಲಿಸ್ ಕ್ಯಾಪ್ಸಿ ಅವರಿಗೂ ಸಹ ಈ ಪಟ್ಟಿಯಲ್ಲಿ ಸ್ಥಾನವಿದೆ. ಇವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 17 ಪಂದ್ಯಗಳಲ್ಲಿ ಮೈದಾನ ಪ್ರವೇಶಿಸಿದ್ದು ಇವರ ಖಾತೆಯಲ್ಲಿ 16 ಸಿಕ್ಸರ್‌ಗಳಿವೆ. ಅಲ್ಲದೆ ಇವರು 389 ರನ್‌ ಕಲೆ ಹಾಕಿದ್ದಾರೆ.

Story first published: Friday, February 7, 2025, 9:01 [IST]
Other articles published on Feb 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+