For Quick Alerts
ALLOW NOTIFICATIONS  
For Daily Alerts
 

ಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನ

ನವಿ ಮುಂಬೈನ ಡಿವೈ ಪಾಟೀಲ್‌ ಮೈದಾನದಲ್ಲಿ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದೆ. ಫೈನಲ್‌ ಪಂದ್ಯದಲ್ಲಿ ಭಾರತದ ಭರವಸೆಯ ಆಟಗಾರ್ತಿ ಶೆಫಾಲಿ ವರ್ಮಾ ಆಲ್‌ರೌಂಡರ್‌ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇವರ ಸ್ಥಿರ ಪ್ರದರ್ಶನಕ್ಕೆ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ನೀಡಲಾಗಿತ್ತು. ಈಗ ಇವರನ್ನು ಐಸಿಸಿ ತಿಂಗಳು ಆಟಗಾರರ ಪ್ರಶಸ್ತಿಗ ನಾಮನಿರ್ದೇಶನ ಮಾಡಲಾಗಿದೆ.

ಮಹಿಳಾ ವಿಶ್ವಕಪ್‌ನ ಲೀಗ್‌ ಹಂತದ ಪಂದ್ಯದಲ್ಲಿ ಪ್ರತಿಕಾ ರಾವಲ್‌ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಶೆಫಾಲಿ ವಾರ್ಮಾ ಅವರು ತಂಡದಲ್ಲಿ ಆಡುವ ಅವಕಾಶವನ್ನು ಪಡೆದರು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಕಲೆಯನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡಿರುವ ಶೆಫಾಲಿ, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಆಟದ ಪ್ರದರ್ಶನ ನೀಡಿದರು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಶೆಫಾಲಿ 78 ಎಸೆತಗಳಲ್ಲಿ 87 ರನ್‌ ಬಾರಿಸಿದರು. ಇವರ ಬ್ಯಾಟಿಂಗ್‌ನಿಂದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 298 ರನ್‌ ಸೇರಿಸಿತು. ಇವರು ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಈ ವೇಳೆ ಇವರು 7 ಓವರ್‌ ಬೌಲಿಂಗ್ ನಡೆಸಿ 36 ರನ್‌ ನೀಡಿ 2 ವಿಕೆಟ್‌ ಪಡೆದರು. ಇವರ ಕ್ಲಾಸಿಕ್ ಆಟದ ಪರಿಣಾಮ ಭಾರತ 52 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು.

Shafali Verma Nominated for ICC Player of the Month After World Cup Final Heroics

ಶೆಫಾಲಿ ವರ್ಮಾ ಅವರೊಂದಿಗೆ ಯುಎಇನ ಇಶಾ ಓಜಾ ಮತ್ತು ಥೈಲ್ಯಾಂಡ್‌ನ ತಿಪಚ್ಚ ಪುಟ್ಟವಾಂಗ್ ಅವರನ್ನು ಸಹ ನಾಮನಿರ್ದೇಶನ ಮಾಡಲಾಗಿದೆ. ಐಸಿಸಿ ಮಹಿಳಾ ಉದಯೋನ್ಮುಖ ಟ್ರೋಫಿಯ ಸಮಯದಲ್ಲಿ ಓಜಾ ಮತ್ತೊಮ್ಮೆ ಸ್ಥಿರ ಆಟವನ್ನು ಆಡಿ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಿದ್ದರು. ಇವರು ಈ ತಿಂಗಳಲ್ಲಿ ಆಡಿದ 7 ಟಿ20 ಪಂದ್ಯಗಳಲ್ಲಿ 137ರ ಸ್ಟ್ರೈಕ್‌ ರೇಟ್‌ನಲ್ಲಿ 187 ರನ್‌ ಕಲೆ ಹಾಕಿದ್ದಾರೆ. ಇವರು ಬೌಲಿಂಗ್‌ನಲ್ಲೂ ಬಿಗುವಿನ ದಾಳಿಯನ್ನು ನಡೆಸಿದ್ದಾರೆ. ಇವರ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ 7 ಬ್ಯಾಟರ್‌ಗಳು ವಿಫಲರಾಗಿದ್ದಾರೆ. ಹೀಗಾಗಿ ಇವರನ್ನು ಸಹ ಐಸಿಸಿ ತಿಂಗಳು ಆಟಗಾರರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ. ನಮಿಬಿಯಾ ಪಂದ್ಯದ ವೇಳೆ ಇಶಾ ಓಜಾ ಶ್ರೇಷ್ಠ ಪ್ರದರ್ಶನ ನೀಡಿದ್ದರು.

ಮೂವರು ನಾಮ ನಿರ್ದೇಶನ

ಥೈಲ್ಯಾಂಡ್‌ನ ತಿಪಚ್ಚ ಪುಟ್ಟವಾಂಗ್ ಸಹ ನಾಮನಿರ್ದೇಶನಗೊಂಡ ಮತ್ತೊಬ್ಬ ಆಟಗಾರ್ತಿ. ಇವರ ಸ್ಥಿರ ಬೌಲಿಂಗ್ ಪ್ರದರ್ಶನದ ನೆರವಿನಿಂದ ಥೈಲ್ಯಾಂಡ್‌ ಉದಯೋನ್ಮುಖ ಆಟಗಾರರ ಟ್ರೋಫಿಯನ್ನು ಜಂಟಿಯಾಗಿ ಎತ್ತಿದೆ. ಇದೇ ವೇಳೆ ಥೈಲ್ಯಾಂಡ್‌ನ ತಿಪಚ್ಚ ಪುಟ್ಟವಾಂಗ್ 15 ವಿಕೆಟ್‌ ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಐಸಿಸಿ ಪ್ರತಿಷ್ಠಿತ ಪ್ರಶಸ್ತಿ ಯಾರ ಪಾಲಾಗಲಿದೆ ಎಂಬುದಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Story first published: Friday, December 5, 2025, 18:33 [IST]
Other articles published on Dec 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+