Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women’s T20 World Cup: ಭಾರತಕ್ಕೆ 5 ವಿಕೆಟ್‌ ಜಯ; ಶಫಾಲಿ ಅರ್ಧಶತಕದ ಮಿಂಚು

ಮ್ಯಾಂಚೆಸ್ಟರ್‌: ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (53) ಹಾಗೂ ಆಲ್‌ರೌಂಡರ್ ರಾಧಾ ಯಾದವ್ (28ಕ್ಕೆ 3) ಇವರುಗಳ ಭರ್ಜರಿ ಪ್ರದರ್ಶನ ಬಲದಿಂದ ಭಾರತ ತಂಡ ಮಹಿಳಾ ಟಿ20 ವಿಶ್ವಕಪ್‌ನ ಮೊದಲ ಗುಂಪಿನಲ್ಲಿ 5 ವಿಕೆಟ್‌ಗಳಿಂದ ಬಾಂಗ್ಲಾದೇಶ ವಿರುದ್ಧ ಜಯ ಸಾಧಿಸಿತು. ಈ ಮೂಲಕ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸುವ ಆಸೆಯನ್ನು ಭಾರತ ಜೀವಂತವಾಗಿರಿಸಿಕೊಂಡಿದೆ. ಟೀಮ್ ಇಂಡಿಯಾ ಆಡಿದ 4 ಪಂದ್ಯಗಳಲ್ಲಿ 3 ಜಯ, 1 ಸೋಲು ಕಂಡಿದ್ದು, 6 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ದಿಲಾರಾ ಅಖ್ತರ್ (4) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಜುವೈರಿಯಾ ಫೆರ್ಡೌಸ್ ಹಾಗೂ ಸೋಭಾನ ಮೊಸ್ತರಿ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. ಈ ಜೋಡಿ ಪವರ್‌ ಪ್ಲೇನಲ್ಲಿ ವಿಕೆಟ್‌ ಬೀಳದಂತೆ ಕಾಯ್ದುಕೊಂಡು ಬ್ಯಾಟ್ ಮಾಡಿದ ಜೋಡಿ ಅಬ್ಬರಿಸಿತು.

Shafali Verma s

ಜುವೈರಿಯಾ ಫೆರ್ಡೌಸ್ ಹಾಗೂ ಸೋಭಾನ ಮೊಸ್ತರಿ ಜೋಡಿ 42 ಎಸೆತಗಳಲ್ಲಿ 51 ರನ್‌ ಸೇರಿಸಿತು. ಈ ಅವಧಿಯಲ್ಲಿ ಜುವೈರಿಯಾ ಫೆರ್ಡೌಸ್ 5 ಬೌಂಡರಿ ಸಹಾಯದಿಂದ 33 ರನ್‌ ಬಾರಿಸಿ ನಂದಿನಿ ಶರ್ಮಾ ಅವರಿಗೆ ವಿಕೆಟ್‌ ಒಪ್ಪಿಸಿದರು. ಸೋಭಾನ ಮೊಸ್ತರಿ ಆಟ 22 ರನ್‌ಗಳಿಗೆ ಕೊನೆಯಾಯಿತು. 4ನೇ ವಿಕೆಟ್‌ಗೆ ನಿಗರ್ ಸುಲ್ತಾನಾ ಹಾಗೂ ಶರ್ಮಿನ್ ಅಖ್ತರ್ ಜೋಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಈ ಜೋಡಿ 27 ರನ್‌ ಸೇರಿಸಿತು. ನಿಗರ್ ಸುಲ್ತಾನಾ 4 ಬೌಂಡರಿ ನೆರವಿನಿಂದ 32 ರನ್‌, ಶರ್ಮಿನ್ ಅಖ್ತರ್ 10 ರನ್‌, ಶೋರ್ನಾ ಅಖ್ತರ್ 10 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 136 ರನ್‌ ಸೇರಿಸಿತು.

ಶಫಾಲಿ ವರ್ಮಾ ಅರ್ಧಶತಕ

ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 3 ಓವರ್‌ಗಳಲ್ಲಿ 31 ರನ್‌ ಸೇರಿಸಿದರು. ಈ ಹಂತದಲ್ಲಿ 8 ರನ್‌ ಬಾರಿಸಿದ್ದ ಸ್ಮೃತಿ ಔಟ್ ಆದರು.

Shafali Verma s

ಎರಡನೇ ವಿಕೆಟ್‌ಗೆ ಶಫಾಲಿ ವರ್ಮಾ ಹಾಗೂ ಯಾಸ್ತಿಕಾ ಭಾಟಿಯಾ ಜೋಡಿ ರನ್‌ ವೇಗಕ್ಕೆ ಚುರುಕು ಮುಟ್ಟಿಸುವ ಕಾರ್ಯವನ್ನು ಮಾಡಿತು. ಈ ಜೋಡಿ 34 ಎಸೆತಗಳಲ್ಲಿ 45 ರನ್‌ ಸೇರಿಸಿತು. ಶಫಾಲಿ ವರ್ಮಾ ತಮ್ಮ ನೈಜ ಆಟವನ್ನು ಆಡಿ ಅರ್ಧಶತಕ ಬಾರಿಸಿದರು. ಇವರು 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 53 ರನ್‌ ಬಾರಿಸಿ ಔಟ್ ಆದರು. ಯಾಸ್ತಿಕಾ ಭಾಟಿಯಾ 23 ರನ್‌ ಸಿಡಿಸಿದರೆ, ರಿಚಾ ಘೋಷ್ 10 ರನ್‌ ಬಾರಿಸಿ ಪೆವಿಲಿಯನ್ ಸೇರಿದರು.

ಹರ್ಮನ್‌ಪ್ರೀತ್ ಕೌರ್‌ (ಅಜೇಯ 13) ಹಾಗೂ ದೀಪ್ತಿ ಶರ್ಮಾ (ಅಜೇಯ 5) ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಭಾರತ 16.5 ಓವರ್‌ಗಳಲ್ಲಿ 5 ವಿಕೆಟ್‌ಗೆ 139 ರನ್‌ ಸೇರಿಸಿ ಜಯ ಸಾಧಿಸಿತು.

Story first published: Thursday, June 25, 2026, 23:08 [IST]
Other articles published on Jun 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+