Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

INDW vs SLW: ಭಾರತಕ್ಕೆ 7 ವಿಕೆಟ್‌ ಗೆಲುವು: ಸ್ಮೃತಿ ದಾಖಲೆ ಅಳಿಸಿದ ಶೆಫಾಲಿ

ವಿಶಾಖಾಪಟ್ಟಣಂ: ಭರವಸೆಯ ಬ್ಯಾಟರ್‌ ಶೆಫಾಲಿ ವರ್ಮಾ (ಅಜೇಯ 69 ರನ್‌) ನೆರವಿನಿಂದ ಟೀಮ್ ಇಂಡಿಯಾ 7 ವಿಕೆಟ್‌ ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ, 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

129 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಆರಂಭ ಸಾಧಾರಣವಾಗಿತ್ತು. ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್‌ ಸ್ಮೃತಿ ಮಂಧಾನ 14 ರನ್‌ ಬಾರಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಹಾಗೂ ಜೆಮಿಮಾ ರೋಡ್ರಿಗಸ್‌ ಜೋಡಿ ತಂಡಕ್ಕೆ ಕೊಂಚ ಆಧಾರವಾಯಿತು. ಈ ಜೋಡಿ ಎರಡನೇ ವಿಕೆಟ್‌ಗೆ 58 ರನ್‌ ಕಾಣಿಕೆ ನೀಡಿತು. ಮೊದಲ ಪಂದ್ಯದ ಹೀರೋ ಜೆಮಿಮಾ ಎರಡನೇ ಪಂದ್ಯದಲ್ಲಿ ಕೇವಲ 26 ರನ್‌ ಬಾರಿಸಲು ಮಾತ್ರ ಶಕ್ತರಾದರು. ಇವರು ಈ ಮನಮೋಹಕ ಇನಿಂಗ್ಸ್‌ನಲ್ಲಿ 4 ಬೌಂಡರಿ, 1 ಸಿಕ್ಸರ್‌ಗಳು ಸೇರಿವೆ.

Shafali Verma s Unbeaten 69 Leads India to 7-Wicket Win Over Sri Lanka India Leads Series 2-0

ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ಮೇಲೆ ಒತ್ತಡವನ್ನು ಹೇರಿಕೊಳ್ಳದೇ ನೈಜ ಬ್ಯಾಟಿಂಗ್ ನಡೆಸಿ ರನ್‌ ಮಹಲ್ ಕಟ್ಟಿದರು. ಇವರು ಎರಡನೇ ಪಂದ್ಯದಲ್ಲಿ 202ರ ಸ್ಟ್ರೈಕ್‌ ರೇಟ್‌ನಲ್ಲಿ 69 ರನ್‌ ಕಲೆ ಹಾಕಿದರು. ಈ ವೇಳೆ 11 ಬೌಂಡರಿ, 1 ಸಿಕ್ಸರ್‌ ಬಾರಿಸಿ ರಂಜಿಸಿದರು. ಅಂತಿಮವಾಗಿ ಭಾರತ 11.5 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 129 ರನ್‌ ಕಲೆ ಹಾಕಿ ಜಯ ಸಾಧಿಸಿತು.

ರನ್‌ ಕಲೆ ಹಾಕಲು ಪರದಾಡಿದ ಲಂಕಾ ಬ್ಯಾಟರ್ಸ್‌

ಶ್ರೀಲಂಕಾ ತಂಡದ ಆರಂಭಿಕ ಆಟಗಾರ್ತಿ ವಿಶ್ಮಿ ಗುಣರತ್ನೆ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಚಾಮರಿ ಅಟಪಟ್ಟು ಹಾಗೂ ಹಾಸಿನಿ ಪೆರೇರಾ ಜೋಡಿ 27 ಎಸೆತಗಳಲ್ಲಿ 36 ರನ್‌ ಸೇರಿಸಿತು. ಈ ವೇಳೆ ಚಾಮರಿ ಅಟಪಟ್ಟು 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 31 ರನ್‌ ಬಾರಿಸಿ ಔಟ್ ಆದರು. ಹಾಸಿನಿ ಪೆರೇರಾ 3 ಬೌಂಡರಿ ನೆರವಿನಿಂದ 22 ರನ್‌ ಬಾರಿಸಿದರೆ, ಹರ್ಷಿತಾ ಸಮರವಿಕ್ರಮ 32 ಎಸೆತಗಳಲ್ಲಿ 33 ರನ್‌ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 128 ರನ್‌ ಸೇರಿಸಿತು.

Shafali Verma s Unbeaten 69 Leads India to 7-Wicket Win Over Sri Lanka India Leads Series 2-0

ಭಾರತ ತಂಡದ ಪರ ವೈಷ್ಣವಿ ಶರ್ಮಾ, ಶ್ರೀ ಚರಣಿ ತಲಾ ಎರಡು ವಿಕೆಟ್‌ ಕಬಳಿಸಿದರು. ಕ್ರಾಂತಿ ಗೌಡ, ಸ್ನೇಹಾ ರಾಣಾ ತಲಾ ಒಂದು ವಿಕೆಟ್‌ ಪಡೆದರು.

ಶೆಫಾಲಿ ವರ್ಮಾ ದಾಖಲೆ

ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಶೆಫಾಲಿ ವರ್ಮಾ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇವರು ಶ್ರೀಲಂಕಾ ವಿರುದ್ಧ ಆಡಿದ ಅಮೋಘ ಆಟಕ್ಕೆ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಈ ಮೂಲಕ ಶೆಫಾಲಿ ವರ್ಮಾ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ದಾಖಲೆಯ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಈ ಮೂಲಕ ಶೆಫಾಲಿ ಸ್ಮೃತಿ ಮಂಧಾನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಶೆಫಾಲಿ ಅವರು ಒಟ್ಟು 8 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ದಾಖಲೆ ಬರೆದಿದ್ದಾರೆ.


ಅತಿ ಹೆಚ್ಚು ಟಿ20 ಪಂದ್ಯ ಶ್ರೇಷ್ಠ ಗೆದ್ದ ಭಾರತೀಯ ಆಟಗಾರ್ತಿಯರು

12- ಮಿಥಾಲಿ ರಾಜ್
11- ಹರ್ಮನ್‌ಪ್ರೀತ್ ಕೌರ್
8 - ಶಫಾಲಿ ವರ್ಮಾ
7- ಸ್ಮೃತಿ ಮಂಧಾನ
7- ದೀಪ್ತಿ ಶರ್ಮಾ
7 - ಜೆಮಿಮಾ ರೊಡ್ರಿಗಸ್

Story first published: Tuesday, December 23, 2025, 23:13 [IST]
Other articles published on Dec 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+