ಐಪಿಎಲ್ 2021: ಶಹ್ಬಾಜ್ ಪ್ರದರ್ಶನಕ್ಕೆ ಸಿರಾಜ್ ಮೆಚ್ಚುಗೆಯ ಮಾತು

ಎರಡನೇ ಪಂದ್ಯದಲ್ಲಿ ಆರ್‌ಸಿಬಿ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಸೋಲಿನತ್ತ ಸಾಗುತ್ತಿದ್ದ ಆರ್‌ಸಿಬಿ ತಂಡವನ್ನು ಗೆಲುವಿನತ್ತ ವಾಲಿಸಿದ್ದು ಶಹ್ಬಾಜ್ ಅಹ್ಮದ್ ಎಸೆದ ಒಂದು ಓವರ್. ಆ ಓವರ್‌ನಲ್ಲಿ ಶಹ್ಬಾಜ್ ಎದುರಾಳಿಯ ಪ್ರಮುಖ ಮೂರು ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು.
ಈ ಫಲಿತಾಂಶದ ನಂತರ ಆರ್‌ಸಿಬಿ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಆಲ್‌ರೌಂಡರ್ ಶಹ್ಬಾಜ್ ಅಹ್ಮದ್ ಪ್ರದರ್ಶನಕ್ಕೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಜೊತೆಗೆ ರಜತ್ ಪಾಟೀದಾರ್ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದು ಈ ಇಬ್ಬರು ಆಟಗಾರರು ಆರ್‌ಸಿಬಿ ಅಭ್ಯಾಸ ಪಂದ್ಯದಲ್ಲಿ ಮಿಂಚು ಹರಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.
ಶಹ್ಬಾಸ್ ಅಹ್ಮದ್ ಅವರ ಈ ಪ್ರದರ್ಶನ ಆಲ್‌ರೌಂಡರ್ ಆಗಿ ತಂಡದ ಮ್ಯಾನೇಜ್‌ಮೆಂಟ್‌ಗೆ ಹೆಚ್ಚುವರಿ ಅವಕಾಶವನ್ನು ನೀಡಿದಂತಾಗಿದೆ ಎಂದು ಸಿರಾಜ್ ಹೇಳಿದ್ದಾರೆ. ತಂಡದ ಮ್ಯಾನೇಜ್‌ಮೆಂಡ್ ಅತ್ಯುತ್ತಮ ಆಡುವ ಬಳಗವನ್ನು ಎದುರಾಳಿ ಹಾಗೂ ಆಡುವ ಪರಿಸ್ಥಿಯನ್ನು ನೋಡಿಕೊಂಡು ಆಯ್ಕೆ ಮಾಡುತ್ತದೆ ಎಂದು ವಿವರಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಸಿರಾಜ್ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಬದಲಿಗೆ ಶಹ್ಬಾಜ್‌ಗೆ ಚೆಂಡು ನೀಡಿದ ಕಾರಣವನ್ನು ಕೂಡ ಹೇಳಿದರು. "ವಾಶಿಂಗ್ಟನ್ ಸುಂದರ್ ಅವರ ಓವರ್‌ಗಳು ಕೂಡ ಉಳಿದುಕೊಂಡಿತ್ತು. ಆದರೆ ಆಗ ಕ್ರೀಸ್‌ನಲ್ಲಿ ಇಬ್ಬರು ಬಲಗೈ ಬ್ಯಾಟ್ಸ್‌ಮನ್‌ಗಳು ಇದ್ದ ಕಾರಣ ಎಡಗೈ ಸ್ಪಿನ್ನರ್‌ನನ್ನು ಕಣಕ್ಕಿಳಿಸುವುದು ಸೂಕ್ತ ಎಂದು ನಿರ್ಧರಿಸಿದರು. ಇದು ಪಂದ್ಯದ ಗತಿಯನ್ನು ಬದಲಿಸಿತ್ತು" ಎಂದು ಸಿರಾಜ್ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications