ವಿಡಿಯೋ: 10 ಓವರ್, 10 ರನ್, 8 ವಿಕೆಟ್, ಶಾಬಾಜ್ ನದೀಮ್ ವಿಶ್ವದಾಖಲೆ

ಚೆನ್ನೈ, ಸೆಪ್ಟೆಂಬರ್ 21: ಪ್ರಥಮ ದರ್ಜೆ ಪಂದ್ಯಗಳ ಇತಿಹಾಸದಲ್ಲಿ ಎರಡು ದಶಕಗಳಿಂದ ಯಾರೂ ಮುರಿಯಲಾಗದಿದ್ದ ವಿಶ್ವದಾಖಲೆಯನ್ನು ಜಾರ್ಖಂಡ್‌ನ ಸ್ಪಿನ್ನರ್ ಶಾಬಾಜ್ ನದೀಮ್ ಮುರಿದು ಹೊಸ ದಾಖಲೆ ಬರೆದಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ತಂಡದ ಪರ ಆಡುತ್ತಿರುವ ಶಾಬಾಜ್ ನದೀಮ್ ಅವರು, ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಬರೋಬ್ಬರಿ 8 ವಿಕೆಟ್ ಪಡೆದಿದ್ದಾರೆ. ಅದೂ ಕೇವಲ 10 ರನ್ ನೀಡಿ. ಈ ಮುಂಚೆ 1998 ರಲ್ಲಿ ರಾಹುಲ್ ಸಾಂಘ್ವಿ 15 ರನ್‌ಗೆ 8 ವಿಕೆಟ್ ಕಬಳಿಸಿದ್ದುದು ಈವರೆಗಿನ ಪ್ರಥಮ ದರ್ಜೆ ಪಂದ್ಯದ ಬೆಸ್ಟ್ ಬೌಲಿಂಗ್ ಆಗಿತ್ತು.
ಹತ್ತು ಓವರ್ ಹಾಕಿದ ಎಡಗೈ ಸ್ಪಿನ್ನರ್ ಶಾಬಾಜ್ ನದೀಮ್ ರಾಜಸ್ತಾನ ತಂಡದ ಎಂಟು ಬ್ಯಾಟ್ಸ್‌ಮನ್‌ಗಳನ್ನು ಕ್ರಮವಾಗಿ ಔಟ್ ಮಾಡಿದರು. ರಾಜಸ್ತಾನ ತಂಡದ ಮೊದಲ ಎಂಟು ಬ್ಯಾಟ್ಸ್‌ಮನ್‌ಗಳು ಶಬಾಜ್ ಅವರಿಗೆ ವಿಕೆಟ್ ಒಪ್ಪಿಸಿದರು. ಕೊನೆಯ ಎರಡು ವಿಕೆಟ್‌ಗಳು ಅಂಕುಲ್ ರಾಯ್ ಪಾಲಾಯಿತು.
ನಾಲ್ಕು ಮೇಡಿನ್, ಹತ್ತು ರನ್, ಎಂಟು ವಿಕೆಟ್
ಹತ್ತು ಓವರ್ ಎಸೆದ ಶಾಬಾಜ್ ನದೀಮ್ ನಾಲ್ಕು ಮೇಡಿನ್ ಹಾಕಿ ಎಂಟು ವಿಕೆಟ್ ಪಡೆದರು. ಪ್ರತಿಯಾಗಿ ಕೊಟ್ಟಿದ್ದು ಕೇವಲ 10 ರನ್. ಎಂಟು ವಿಕೆಟ್‌ಗಳಲ್ಲಿ ಐದು ವಿಕೆಟ್‌ಗಳು ಬೌಲ್ಡ್ ಆಗಿರುವುದು ವಿಶೇಷ ಉಳಿದ ಮೂರು ವಿಕೆಟ್‌ನಲ್ಲಿ ಎರಡು ಕ್ಯಾಚ್ ಆದರೆ ಒಂದು ಎಲ್‌ಬಿಡಬ್ಲು ಆಗಿದೆ.

ಹ್ಯಾಟ್ರಿಕ್ ಸಾಧನೆ ಮಾಡಿದ ನದೀಮ್
ಶಾಬಾಜ್ ನದೀಮ್ ಇದೇ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಸಹ ಮಾಡಿದರು. 20 ನೇ ಓವರ್‌ನ ಐದು ಮತ್ತು ಆರನೇ ಎಸೆತದಲ್ಲಿ ಅವರು ಬ್ಯಾಟ್ಸ್‌ಮನ್‌ಗಳಾದ ಎಂ.ಕೆ.ಲೊಮ್ರೋರ್ ಮತ್ತು ಸಿ.ಡಿ.ಬಿಸ್ಟ್ ಅವರನ್ನು ಔಟ್ ಮಾಡಿದರು ಆ ನಂತರ 22 ನೇ ಓವರ್‌ನ ಮೊದಲ ಎಸೆತದಲ್ಲಿ ಟಿ.ಎನ್.ದಿಲೋನ್ ಅವರನ್ನು ಔಟ್ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ನದೀಮ್ ಬೌಲಿಂಗ್‌ನಿಂದ 73 ಕ್ಕೆ ರಾಜಸ್ಥಾನ ಕುಸಿತ
ಶಾಬಾಜ್ ನದೀಮ್ ಅವರ ಅತ್ಯುತ್ತಮ ಬೌಲಿಂಗ್‌ನಿಂದಾಗಿ ರಾಜಸ್ತಾನ ತಂಡವು ಕೇವಲ 28.3 ಓವರ್‌ಗಳಲ್ಲಿ 73 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನತ್ತಿದ ಜಾರ್ಖಂಡ್ ತಂಡ 14.3 ಓವರ್‌ನಲ್ಲಿ 76 ರನ್ ಗಳಿಸಿ ಗೆದ್ದು ಬೀಗಿತು.

ಐಪಿಎಲ್‌ನಲ್ಲಿ 40 ವಿಕೆಟ್ ಗಳಿಸಿರುವ ನದೀಮ್
ಡೆಲ್ಲಿ ಡೇರ್‌ಡೆವಿಲ್ಸ್ ಪರವಾಗಿ ಆಡಿರುವ ಶಾಬಾಜ್ ನದೀಮ್ ಈ ಹಿಂದೆ ರಣಜಿ ಪಂದ್ಯವೊಂದರಲ್ಲಿ ಹಿಮಾಚಲ ಪ್ರದೇಶದ ಎದುರು ಒಂದೇ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ಪಡೆದಿದ್ದರು. ಐಪಿಎಲ್‌ನಲ್ಲಿ ಈವರೆಗೆ 40 ವಿಕೆಟ್ ಪಡೆದಿರುವ ನದೀಮ್, ಭಾರತ ಪರವಾಗಿ ಏಕದಿನ ಅಥವಾ ಟೆಸ್ಟ್ ಪಂದ್ಯ ಆಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications