For Quick Alerts
ALLOW NOTIFICATIONS  
For Daily Alerts
 

T20 world cup 2024: ಪಾಕಿಸ್ತಾನ ತಂಡದ ಉಪನಾಯಕನ ಆಫರ್‌ ತಿರಸ್ಕರಿಸಿದ ಶಾಹೀನ್‌ ಅಫ್ರಿದಿ!

ಮೇ 25 ಶನಿವಾರ: ಜೂನ್ 1 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ನಡೆಯಲಿರುವ ಬಹು ನಿರೀಕ್ಷಿತ 2024ರ ಪುರುಷರ ಐಸಿಸಿ ಟಿ20 ವಿಶ್ವಕಪ್‌ಗೆ (ಮೇ 24) ಕೊನೆಗೂ ಪಾಕಿಸ್ತಾನ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಪಾಕಿಸ್ತಾನ ತಂಡವನ್ನು ಈ ಬಾರಿಯೂ ಬಾಬರ್‌ ಅಜಮ್‌ ನಾಯಕನಾಗಿ ಮುನ್ನೆಡೆಸುತ್ತಿದ್ದಾರೆ. ಆದರೆ ತಂಡ ಪ್ರಕಟ ಆಗುವ ಮೊದಲು ಉಪನಾಯಕನ ಸ್ಥಾನಕ್ಕೆ ಶಾಹೀನ್‌ ಅಫ್ರಿದಿ ಎಂದು ಹೇಳಲಾಗುತ್ತಿತ್ತು.

Shaheen Afridi rejected Pakistan team vice captain offer

ಇದೀಗ ತಂಡ ಘೋಷಣೆ ಮಾಡಿದ ಮೇಲೆ ಪಾಕಿಸ್ತಾನದ ಉಪನಾಯಕನ ಆಫರ್‌ ಅನ್ನು ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ ತಿರಸ್ಕರಿಸಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ತಿಳಿಸಿದೆ. ಹೀಗಾಗಿ 2024ರ ಟಿ20 ವಿಶ್ವಕಪ್‌ಗೆ ಪ್ರಕಟಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಅಧಿಕೃತ ಉಪನಾಯಕನಿಲ್ಲ.

2023ರ ಪುರಷರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಲೀಗ್ ಹಂತದಲ್ಲಿ ಹೊರಬಿದ್ದಿತ್ತು. ಬಳಿಕ ಬಾಬರ್‌ ಅಜಮ್‌ ಅವರನ್ನು ನಾಯಕತ್ವದಿಂದ ಕೆಳಗಿಸಿ ಶಾಹೀನ್‌ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಬಳಿಕ ಜನವರಿಯಲ್ಲಿ 5 ಟಿ20 ಪಂದ್ಯಗಳ ಸರಣಿಗಾಗಿ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡ ಪಾಕ್‌ ತಂಡವನ್ನು ಶಾಹೀನ್‌ ಮುನ್ನಡೆಸಿದ್ದರು.

ನಂತರ ಶಾಹೀನ್​ ನಾಯಕತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲು ಮತ್ತು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಶಾಹೀನ್‌ ಅವರ ಕಳಪೆ ಬೌಲಿಂಗ್​ ನಿಂದ ಲಾಹೋರ್ ತಂಡವು ನಾಯಕತ್ವದಿಂದ ಕೆಳಗಿಳಿಸಿತ್ತು. ಇದನ್ನು ಕಂಡ ಪಿಸಿಬಿಗೆ ನೂತನ ಅಧ್ಯಕ್ಷರಾಗಿ ಮೊಹ್ಸಿನ್ ನಖ್ವಿ ಅವರು ಬಾಬರ್ ನನ್ನು ನಾಯಕನಾಗಿ ಮರು ನೇಮಕ ಮಾಡಿದ್ದರು.

ನಾಯಕತ್ವದ ಸ್ಥಾನದಿಂದ ಕೆಳಗಿಳಿಸಿದಕ್ಕಾಗಿ ಉಪನಾಯಕನ ಆಫರ್‌ ಅನ್ನು ಶಾಹೀನ್​ ​ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಅದಾಗ್ಯೂ ಉಪನಾಯಕತ್ವ ಸ್ಥಾನಕ್ಕೆ ಆಲ್‌ರೌಂಡರ್ ಶಾದಾಬ್ ಖಾನ್ ಮತ್ತು ಅನುಭವಿ ವಿಕೆಟ್‌ ಕೀಪರ್ ಮೊಹಮ್ಮದ್ ರಿಜ್ವಾನ್ ಹೆಸರುಗಳು ಕೇಳಿ ಬಂದಿದ್ದವು. ಆದರೆ ಪಿಸಿಬಿ ಉಪನಾಯಕ ಯಾರು ಎಂದು ತಿಳಿಸಿಲ್ಲ.

ಪಾಕಿಸ್ತಾನ ಸದ್ಯ ಇಂಗ್ಲೆಂಡ್‌ನಲ್ಲಿ ಟಿ20 ಸರಣಿಯಲ್ಲಿ ಬ್ಯುಸಿಯಾಗಿದೆ. ಈ ಸರಣಿ ಮುಗಿಯುತ್ತಿದ್ದಂತೆ ಜೂನ್ 6 ರಂದು ಡಲ್ಲಾಸ್‌ನಲ್ಲಿಆತಿಥೇಯ ಅಮೆರಿಕಾ ವಿರುದ್ಧ ಪಾಕ್‌ ಟಿ20 ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್‌ ಪಂದ್ಯ ನಡೆಲಿದೆ.

ಪಾಕಿಸ್ತಾನ ​ತಂಡ: ಬಾಬರ್ ಅಜಮ್ (ನಾಯಕ), ಅಜಮ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಫಖರ್ ಜಮಾನ್, ಇಮಾದ್ ವಾಸಿಮ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಶಾದಾಬ್ ಖಾನ್, ಸೈಮ್ ಅಯೂಬ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಉಸ್ಮಾನ್ ಖಾನ್.

Story first published: Saturday, May 25, 2024, 23:03 [IST]
Other articles published on May 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+