ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ್ ಸೂಪರ್ ಲೀಗ್‌ನಿಂದ ಹೊರಬಿದ್ದ ಶಾಹಿದ್ ಅಫ್ರಿದಿ!

Shahid Afridi ruled out of PSL 2021 Abu Dhabi leg

2021ರ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿ ಫೆಬ್ರವರಿ 20ರಂದು ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಆರಂಭವಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ ಪಿಎಸ್ಎಲ್ ಟೂರ್ನಿಯ ಬಯೋ ಬಬಲ್ ಒಳಗೆ ಕೊರೊನಾವೈರಸ್ ಪ್ರವೇಶಿಸಿ ಕೆಲ ಆಟಗಾರರು ಸೋಂಕಿಗೆ ಒಳಗಾದ ಕಾರಣ ಪಿಎಸ್ಎಲ್ ಟೂರ್ನಿಯನ್ನು ಮುಂದೂಡಲಾಯಿತು.

ಕೊಹ್ಲಿ, ಪೂಜಾರ ಅಲ್ಲ ಈ ಆಟಗಾರ ನಮಗೆ ದೊಡ್ಡ ತಲೆನೋವಾಗಿದ್ದಾನೆ ಎಂದ ನ್ಯೂಜಿಲೆಂಡ್‌ ಕೋಚ್ಕೊಹ್ಲಿ, ಪೂಜಾರ ಅಲ್ಲ ಈ ಆಟಗಾರ ನಮಗೆ ದೊಡ್ಡ ತಲೆನೋವಾಗಿದ್ದಾನೆ ಎಂದ ನ್ಯೂಜಿಲೆಂಡ್‌ ಕೋಚ್

ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಉಳಿದಿರುವ 20 ಪಿಎಸ್ಎಲ್ ಪಂದ್ಯಗಳನ್ನು ಜೂನ್ ತಿಂಗಳಿನಲ್ಲಿ ಅಬುದಾಬಿಯಲ್ಲಿ ನಡೆಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಜೂನ್ ತಿಂಗಳಿನಲ್ಲಿ ಈ ಬಾರಿಯ ಪಿಎಸ್ಎಲ್ ಅಬುದಾಬಿಯಲ್ಲಿ ಮುಂದುವರಿಯಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಪಿಎಸ್ಎಲ್‌ನ 6 ಫ್ರಾಂಚೈಸಿಗಳು ಟೂರ್ನಿಗೆ ಬೇಕಾದ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿವೆ.

ಆರ್‌ಸಿಬಿ ವಿರುದ್ಧ ನಡೆದಿದ್ದ ಆ ಘಟನೆ ನೆನೆದು ಖುಷಿಪಟ್ಟ ಸೂರ್ಯಕುಮಾರ್ ಯಾದವ್ಆರ್‌ಸಿಬಿ ವಿರುದ್ಧ ನಡೆದಿದ್ದ ಆ ಘಟನೆ ನೆನೆದು ಖುಷಿಪಟ್ಟ ಸೂರ್ಯಕುಮಾರ್ ಯಾದವ್

ಆದರೆ ಮುಲ್ತಾನ್ ಸುಲ್ತಾನ್ಸ್ ತಂಡಕ್ಕೆ ಹಿನ್ನಡೆಯಾಗುವಂತಹ ಸುದ್ದಿಯೊಂದು ಇದೇ ವೇಳೆ ಹೊರಬಿದ್ದಿದೆ, ತಂಡದ ಪ್ರಮುಖ ಆಟಗಾರ ಶಾಹಿದ್ ಅಫ್ರಿದಿ ಕೆಳಬೆನ್ನಿನ ಗಾಯದಿಂದ ಬಳಲುತ್ತಿದ್ದು ಮುಂದುವರಿಯಲಿರುವ ಪಿಎಸ್ಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮುಂದುವರಿಯಲಿರುವ ಪಿಎಸ್ಎಲ್ ಟೂರ್ನಿಗಾಗಿ ಕರಾಚಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆಯಲ್ಲಿ ಅಫ್ರಿದಿ ಕೆಳಬೆನ್ನಿನ ನೋವಿನಿಂದ ಬಳಲಿದ್ದು, ಚಿಕಿತ್ಸೆ ನೀಡಿದ ವೈದ್ಯರು ಶಾಹಿದ್ ಅಫ್ರಿದಿ ಈ ಬಾರಿಯ ಪಿಎಸ್ಎಲ್ ಟೂರ್ನಿಯಲ್ಲಿ ಭಾಗವಹಿಸಬಾರದು ಎಂಬ ಸಲಹೆಯನ್ನು ನೀಡಿದ್ದಾರೆ. ಹೀಗಾಗಿ ವೈದ್ಯರ ಸಲಹೆಯ ಮೇರೆಗೆ ಶಾಹಿದ್ ಅಫ್ರಿದಿ ಈ ಬಾರಿಯ ಪಿಎಸ್ಎಲ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.

Story first published: Tuesday, May 25, 2021, 12:53 [IST]
Other articles published on May 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X