
ದುಬೈ, ಸೆಪ್ಟೆಂಬರ್ 25: ಭಾರತದೆದುರು ಏಕದಿನ ಶತಕ ಚಚ್ಚಿದ ಮೊದಲ ಅಫ್ಘಾನಿಸ್ತಾನ ಆಟಗಾರ ಎಂಬ ಕೀರ್ತಿಗೆ ಮೊಹಮ್ಮದ್ ಶಹಝಾದ್ ಪಾತ್ರರಾಗಿದ್ದಾರೆ. ಏಷ್ಯಾ ಕಪ್ 5ನೇ ಸೂಪರ್ ಫೋರ್ ಪಂದ್ಯದ ವೇಳೆ ಶಹಝಾದ್ ಆಕರ್ಷಕ ಶತಕ (124 ರನ್/116 ಎಸೆತ ) ಸಿಡಿಸಿದರು.
ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಸೆಪ್ಟೆಂಬರ್ 25ರಂದು ದುಬೈಯ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಭಾರತ-ಅಫ್ಘಾನಿಸ್ತಾನ ಔಪಚಾರಿಕ ಪಂದ್ಯದಲ್ಲಿ ಶಹಝಾದ್ ಅವರೂಪದ ಸಾಧನೆ ಮೆರದುರು. ಅಲ್ಲದೆ ತಂಡದ ಮೊತ್ತ ಕಡಿಮೆ ಇದ್ದಾಗ (131 ರನ್) ಇದ್ದಾಗ ಶತಕ ಪೂರೈಸಿದ ಅಪರೂಪದ ದಾಖಲೆಯನ್ನು ಪಾಕಿಸ್ತಾನ ಆಟಗಾರ ಶಾಹಿದಿ ಅಫ್ರಿದಿ ಅವರೊಂದಿಗೆ ಶಹಝಾದ್ ಹಂಚಿಕೊಂಡಿದ್ದಾರೆ.
2005ರಲ್ಲಿ ಶಾಹಿದ್ ಅಫ್ರಿದಿ ಅವರು ಭಾರತದೆದುರು ತಂಡದ ಮೊತ್ತ 131ರನ್ ಇದ್ದಾಗ ಶತಕ ಪೂರೈಸಿ ದಾಖಲೆ ಬರೆದಿದ್ದರು. ಭಾರತದದಂತಹ ಬಲಾಡ್ಯ ದೇಶದೆದುರು ಅಪರೂಪದ ಸಾಧನೆ ಮೆರೆದ ಅಫ್ಘಾನಿಸ್ತಾನ ಆಟಗಾರ ಶಹಝಾದ್ ವಿಶ್ವದ ಗಮನ ಸೆಳೆದಿದ್ದಾರೆ. ಶಹಝಾದ್ ಶತಕದ ನೆರವಿನೊಂದಿಗೆ ಅಫ್ಘಾನ್ ತಂಡ 8 ವಿಕೆಟ್ ನಷ್ಟದೊಂದಿಗೆ ಭಾರತಕ್ಕೆ 253 ರನ್ ಗುರಿ ನೀಡಿತ್ತು.