Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತನ್ನ ಎಲ್ಲೆ ಮೀರಿದ ವರ್ತನೆಗೆ ಕ್ಷಮೆಯಾಚಿಸಿದ ಶಕೀಬ್ ಅಲ್ ಹಸನ್

Shakib al Hasan apologises for on-field meltdown, calls it human error

ಧಾಕಾ: ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಮೈದಾನದಲ್ಲಿ ಎಲ್ಲೆ ಮೀರಿ ವರ್ತಿಸಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ. ಧಾಕಾ ಪ್ರೀಮಿಯರ್ ಡಿವಿಶನ್ ಟ್ವೆಂಟಿ ಟ್ವೆಂಟಿ ಕ್ರಿಕೆಟ್‌ ಲೀಗ್‌ನ ಪಂದ್ಯವೊಂದರಲ್ಲಿ ಶಕೀಬ್ ಕ್ರೀಡಾಸ್ಫೂರ್ತಿ ಮೀರಿ ನಡೆದುಕೊಂಡಿದ್ದು, ಅಂಪೈರ್‌ಗೆ ಅಗೌರವ ತೋರಿಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.

ಜೂನ್ 11ರಂದು ಮಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಅಬಹನಿ ಲಿಮಿಟೆಡ್ ನಡುವಿನ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ದುರ್ವರ್ತನೆ ತೋರಿದ್ದರು. ಮಹಮ್ಮದನ್ ತಂಡದಲ್ಲಿದ್ದ ಶಕೀಬ್‌ ತನ್ನ ಬಾಂಗ್ಲಾ ತಂಡದ ಸಹ ಆಟಗಾರ ಮುಸ್ತಫಿಝುರ್ ರಹೀಮ್ ವಿಕೆಟ್‌ಗಾಗಿ ಎಲ್‌ಬಿಡಬ್ಲ್ಯೂ ಅಪೀಲ್ ಮಾಡಿದರು. ಆಗ ಅಂಪೈರ್ ಔಟ್ ನೀಡಲಿಲ್ಲ.

ಅಂಪೈರ್ ತೀರ್ಪು ತನ್ನ ಪರವಾಗಿ ಬಾರದಿದ್ದರಿಂದ ಹತಾಶೆಗೊಂಡ ಶಕೀಬ್ ಸ್ಟಂಪ್ಟ್‌ಗೆ ಒದ್ದು ತನ್ನ ಸಿಟ್ಟನ್ನು ತೋರಿಕೊಂಡಿದ್ದರು. ಇದೇ ಪಂದ್ಯದಲ್ಲಿ ಮತ್ತೊಮ್ಮೆ ಸ್ಟಂಪ್‌ಗಳನ್ನು ಕಿತ್ತೆಸೆದು ಅಂಪೈರ್ ವಿರುದ್ಧ ಸಿಡುಕಾಡಿದ್ದರು. ಶಕೀಬ್ ವರ್ತನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪಂದ್ಯದ ಬಳಿಕ ಶಕೀಬ್ ತನ್ನ ನಡೆಗೆ ಕ್ಷಮೆ ಕೋರಿದ್ದಾರೆ.

'ತಾಳ್ಮೆ ಮೀರಿ ವರ್ತಿಸಿದ್ದಕ್ಕೆ ಮತ್ತು ಪಂದ್ಯವನ್ನು ಹಾಳುಗೆಡವಿದ್ದಕ್ಕೆ ನನ್ನನ್ನು ದಯವಿಟ್ಟು ಕ್ಷಮಿಸಿ. ಮುಖ್ಯವಾಗಿ ತವರಿನಲ್ಲಿದ್ದು ಪಂದ್ಯ ವೀಕ್ಷಿಸುತ್ತಿದ್ದವರು ಕ್ಷಮಿಸಿ. ನನ್ನಂತ ಅನುಭವಿ ಆಟಗಾರರು ಯಾವತ್ತೂ ಹಾಗೆ ನಡೆದುಕೊಳ್ಳಬಾರದು. ಆದರೆ ದುರದೃಷ್ಟಕರವಾಗಿ ಕೆಲವೊಮ್ಮೆ ನಮ್ಮ ಕೈಮೀರಿ ಇಂಥದ್ದು ನಡೆಯುತ್ತವೆ,' ಎಂದು ಫೇಸ್ಬುಕ್ ಪೇಜ್‌ನಲ್ಲಿ ಶಕೀಬ್ ಕ್ಷಮೆ ಯಾಚಿಸಿದ್ದಾರೆ.

Story first published: Friday, June 11, 2021, 21:12 [IST]
Other articles published on Jun 11, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+