ಏಷ್ಯಾಕಪ್, ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡದ ನಾಯಕನಾಗಿ ಶಕೀಬ್ ಅಲ್ ಹಸನ್ ನೇಮಕ
ಮುಂಬರುಯವ ಏಷ್ಯಾ ಕಪ್ ಹಾಗೂ ವಿಶ್ವಕಪ್ ಟೂರ್ನಿಗೆ ಶಕೀಬ್ ಅಲ್ ಹಸನ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್ ಪಪೊನ್ ಢಾಕಾದ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಎರಡು ಮೆಗಾ ಟೂರ್ನಿಗಳಿಗೆ ಅಲ್ಲದೆ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿಯೂ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
"ಶಕೀಬ್ ಅಲ್ ಹಸನ್ ಏಷ್ಯಾಕಪ್, ನ್ಯೂಜಿಲೆಂಡ್ ಸರಣಿ ಹಾಗೂ ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್‌ನಿಂದ ಅವರು ಬಾಂಗ್ಲಾದೇಶಕ್ಕೆ ವಾಪಾಸಾದ ಬಳಿಕ ಅವರೊಂದಿಗೆ ಮತ್ತಷ್ಟು ಮಾತುಕತೆ ನಡೆಸಲಿದ್ದೇವೆ. ಅವರ ದೀರ್ಘ ಕಾಲದ ಯೋಜನೆಯ ಬಗ್ಗೆಯೂ ನಾವು ಮಾಹಿತಿಯನ್ನು ಪಡೆದುಕೊಳ್ಳಬೇಕಿದೆ"

"ಅವರೊಂದಿಗೆ ನಿನ್ನೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದೇನೆ. ಸದ್ಯ ಅವರು ಫ್ರಾಂಚೈಸಿ ಲೀಗ್‌ನಲ್ಲಿ ಬ್ಯುಸಿ ಇರುವ ಕಾರಣ ಅದರ ಮುಕ್ತಾಯದ ಬಳಿಕ ವೈಯಕ್ತಿಕವಾಗಿ ಮಾತುಕತೆ ನಡೆಸುವುದು ಉತ್ತಮ. ಅವರು ಯಾವೆಲ್ಲಾ ಮಾದರಿಯಲ್ಲಿ ತಂಡವನ್ನು ಮುನ್ನಡೆಸಲು ಸಿದ್ದರಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಎಲ್ಲಾ ಮಾದರಿಯಲ್ಲಿಯೂ ನಾಯಕನಾಗಿ ಮುಂದುವರಿಯಲು ಬಯಸುತ್ತಾರೆಯೇ ಅಥವಾ ಒಂದು ಅಥವಾ ಎರಡು ಮಾದರಿಯಲ್ಲಿ ಮಾತ್ರವೇ ನಾಯಕನಾಗಿರಲಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕು" ಎಂದಿದ್ದಾರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಜ್ಮುಲ್ ಹಸನ್.
ಬಾಂಗ್ಲಾದೇಶ ಏಕದಿನ ತಂಡದ ನಾಯಕನಾಗಿದ್ದ ತಮಿಮ್ ಇಕ್ಬಾಲ್ ನಿವೃತ್ತಿ ವಾಪಸ್ ಪಡೆದುಕೊಂಡ ಬಳಿಕ ವಿಶ್ವಕಪ್‌ನಲ್ಲಿ ತಂಡದ ನಾಯಕನಾಗಿ ಮುನ್ನಡೆಸುವುದು ನಿಶ್ಚಿತ ಎನ್ನಲಾಗಿತ್ತು. ಆದರೆ ತಮಿಮ್ ಇಕ್ಬಾಲ್ ಗಾಯಕ್ಕೆ ತುತ್ತಾಗಿದ್ದಲ್ಲದೆ ಏಕದಿನ ನಾಯಕತ್ವವನ್ನು ತೊರೆದಿದ್ದಾರೆ. ಹೀಗಾಗಿ ನೂತನ ನಾಯಕನನ್ನು ನೇಮಿಸುವುದು ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಬಿ ಮೂವರು ಆಟಗಾರರು ನಾಯಕತ್ವದ ರೇಸ್‌ನಲ್ಲಿ ಇದ್ದಾರೆ ಎನ್ನುವುದನ್ನು ಬಹಿರಂಗಪಡಿಸಿತ್ತು. ಶಕೀಬ್ ಅಲ್ ಹಸನ್, ಮೆಹ್ದಿ ಹಸನ್ ಮಿರಾಜ್ ಹಾಗೂ ಲಿಟನ್ ದಾಸ್ ಈ ಮೂವರ ಪೈಕಿ ಒಬ್ಬರು ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಸುಳಿವು ನೀಡಿತ್ತು.
"ನಮಗೆ ಯಾವತ್ತೂ ಗೊಂದಲವೇ ಇರಲಿಲ್ಲ. ಮೊದಲೇ ಹೇಳಿದಂತೆ ಆತ ಮೊದಲ ಆಯ್ಕೆಯಾಗಿದ್ದರು. ಅವರಲ್ಲದೆ ಮತ್ತೆ ಯಾರು ಮುನ್ನಡೆಸಲು ಸಾಧ್ಯ. ಆದರೆ ಅವರನ್ನು ಆಯ್ಕೆ ಮಾಡುವುದಕ್ಕೂ ಮುನ್ನ ಅವರೊಂದಿಗೆ ಮಾತುಕತೆ ನಡೆಸಬೇಕಿತ್ತು. ಶಕೀಬ್ ತಮಡದ ನಾಯಕ. ಆತ ಯಾವಾಗಲೂ ನಮ್ಮ ಮೊದಲ ಆದ್ಯತೆ" ಎಂದು ಪಪೊನ್ ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷ ಮಹ್ದುಲ್ಲಾ ರಿಯಾದ್ ಅವರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಟಿ20 ಮಾದರಿಗೆ ಶಕೀಬ್ ಅಲ್ ಹಸನ್ ಅವರನ್ನು ನಾಯಕನ್ನಾಗಿ ನೇಮಿಸಲಾಗಿತ್ತು. ಇನ್ನು ಈಗಾಘಲೇ ಶಕೀಬ್ ಟೆಸ್ಟ್ ತಂಡವನ್ನು ಕೂಡ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಎಲ್ಲಾ ಮಾದರಿಗೂ ಶಕೀಬ್ ನಾಯಕನಾದಂತಾಗಿದೆ. ಶಕೀಬ್ ಅಲ್ ಹಸನ್ ಈಗಾಗಲೇ 52 ಏಕದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅಲ್ಲದೆ 19 ಟೆಸ್ಟ್ ಹಾಗೂ 39 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications