ಧಾಕಾ ಪ್ರೀಮಿಯರ್ ಲೀಗ್ 4 ಪಂದ್ಯಗಳಿಂದ ಶಕೀಬ್ ಅಲ್ ಹಸನ್‌ಗೆ ನಿಷೇಧ

ಧಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್‌ಗೆ ಧಾಕಾ ಪ್ರೀಮಿಯರ್ ಲೀಗ್ ನಲ್ಲಿ 4 ಪಂದ್ಯಗಳಿಂದ ನಿಷೇಧ ಹೇರಲಾಗಿದೆ ಎಂದು ವರದಿಯೊಂದು ಹೇಳಿದೆ. ಪಂದ್ಯವೊಂದರಲ್ಲಿ ಶಕೀಬ್ ಅಂಪೈರ್ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡಿದ್ದರು. ಹೀಗಾಗಿ ಶಕೀಬ್‌ಗೆ ನಿಷೇಧ ಶಿಕ್ಷೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶದ ಮುಂಚೂಣಿ ಕ್ರಿಕೆಟ್ ಪೋರ್ಟಲ್ ಆದ ಬಿಡಿಕ್ರಿಕ್‌ಟೈಮ್ ವರದಿಯಲ್ಲಿ, 'ಧಾಕಾ ಪ್ರೀಮಿಯರ್ ಲೀಗ್‌ನಲ್ಲಿ ದುರ್ವರ್ತನೆ ತೋರಿದ ಮಹಮ್ಮದನ್ ಸ್ಪೋರ್ಟಿಂಗ್ ಕ್ಲಬ್‌ನ ನಾಯಕ ಶಕೀಬ್ ಅಲ್ ಹಸನ್ ಅವರನ್ನು 4 ಪಂದ್ಯಗಳಿಂದ ನಿಷೇಧಿಸಲಾಗಿದೆ. ಟೂರ್ನಿಯ 8, 9, 10, ಮತ್ತು 11ನೇ ಪಂದ್ಯವನ್ನು ಶಕೀಬ್ ಆಡುತ್ತಿಲ್ಲ' ಎಂದು ತಿಳಿಸಲಾಗಿದೆ.
ಜೂನ್ 11ರಂದು ನಡೆದಿದ್ದ ಮಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಅಬಹನಿ ಲಿಮಿಟೆಡ್ ನಡುವಿನ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ದುರ್ನಡತೆ ತೋರಿದ್ದರು. ಬಾಂಗ್ಲಾ ತಂಡದ ಸಹ ಆಟಗಾರ ಮುಸ್ತಫಿಝುರ್ ರಹೀಮ್ ವಿಕೆಟ್‌ಗಾಗಿ ಶಕೀಬ್ ಎಲ್‌ಬಿಡಬ್ಲ್ಯೂ ಅಪೀಲ್ ಮಾಡಿದರು. ಅಂಪೈರ್ ಔಟ್ ನೀಡಲಿಲ್ಲ. ಆಗ ಸಿಟ್ಟಿಗೆದ್ದ ಶಕೀಬ್ ಸ್ಟಂಪ್‌ಗೆ ಒದ್ದು ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಅದೇ ಪಂದ್ಯದಲ್ಲಿ ಮತ್ತೊಮ್ಮೆ ಸಿಡುಕಾಡಿ ಸ್ಟಂಪ್ಸ್ ಕಿತ್ತೆಸಿದಿದ್ದರು. ಶಕೀಬ್ ಎಲ್ಲೆ ಮೀರಿ ವರ್ತಿಸಿದ್ದ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡುವ ಶಕೀಬ್, ಧಾಕಾ ಲೀಗ್ ಆ ವಿವಾದಾತ್ಮಕ ಪಂದ್ಯದ ಬಳಿಕ ತನ್ನ ನಡೆಗಾಗಿ ಕ್ಷಮೆ ಯಾಚಿಸಿದ್ದರು. ಅನುಭವಿ ಆಟಗಾರನಾಗಿ ತಾನು ಹಾಗೆ ನಡೆದುಕೊಳ್ಳಬಾರದಿತ್ತು ಎಂದು ಹೇಳಿದ್ದರು. ಆದರೆ ಶಕೀಬ್ ವರ್ತನೆಗೆ ಧಾಕಾ ಲೀಗ್ ಆಯೋಜಕರು ಶಿಕ್ಷಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications