IND vs BAN: ಭಾರತ ತಂಡಕ್ಕೆ ಬಿಗ್ ನ್ಯೂಸ್; ವಿರಾಟ್-ರೋಹಿತ್ ಕಟ್ಟಿಹಾಕುವ ಬೌಲರ್ ಅಖಾಡಕ್ಕೆ!
ಆಗಸ್ಟ್ 13 ಮಂಗಳವಾರ, ಬಹುನಿರೀಕ್ಷಿತ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಂತಹ ಸ್ಟಾರ್ ಆಟಗಾರರು ಆಡಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಲು ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲಲೇಬೇಕು. ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾಕ್ಕೆ ಒಂದು ದೊಡ್ಡ ಸುದ್ದಿ ತಲುಪಿದೆ. ರೋಹಿತ್ ಶರ್ಮಾ ಹಾಗು ವಿರಾಟ್ ಕೊಹ್ಲಿ ಅವರಿಗೆ ಕಾಟ ನೀಡುವ ಬಾಂಗ್ಲಾದೇಶದ ಸ್ಟಾರ್ ಬೌಲರ್ ಈ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಂಗ್ಲಾದೇಶದ ಸ್ಟಾರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರ ಟೆಸ್ಟ್ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಸಸ್ಪೆನ್ಸ್ ಸುದ್ದಿವೊಂದು ಹೊರ ಬಿದ್ದಿದೆ. ಬಾಂಗ್ಲಾದೇಶದ ಮುಖ್ಯ ಆಯ್ಕೆಗಾರ ಗಾಜಿ ಅಶ್ರಫ್ ಹೊಸೈನ್ ಅವರು ಶಕೀಬ್ ಅಲ್ ಹಸನ್ ಈ ವರ್ಷದ ಉಳಿದ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಆಡುವ ಬಗ್ಗೆ ಖಚಿತಪಡಿಸಿದ್ದಾರೆ.
ಈ ಮೊದಲು ಶಕೀಬ್ ಭಾರತದ ವಿರುದ್ಧ ಆಡುವ ಬಗ್ಗೆ ನಿರ್ಧಾರವಾಗಿರಲಿಲ್ಲ. ಅವರು ಪಾಕಿಸ್ತಾನ ಪ್ರವಾಸಕ್ಕೆ ಮಾತ್ರ ಲಭ್ಯವಿದ್ದರು. ಈಗ ಅನುಭವಿ ಆಲ್‌ರೌಂಡರ್ ವರ್ಷದ ಉಳಿದ ಎಲ್ಲಾ ಟೆಸ್ಟ್ ಪಂದ್ಯಗಳಿಗೆ ತಮ್ಮ ಲಭ್ಯತೆಯನ್ನು ಖಚಿತಪಡಿಸಿದ್ದಾರೆ. 2024ರ ಋತುವಿನಲ್ಲಿ ಬಾಂಗ್ಲಾದೇಶ ಒಟ್ಟು 8 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ.
ಅಶ್ರಫ್ ಹೇಳಿದ್ದೇನು?
ಮೂಲಗಳ ಪ್ರಕಾರ ಅಶ್ರಫ್ ಹೇಳಿರುವಂತೆ 'ನಾವು ಜುಲೈ ಅಂತ್ಯದಲ್ಲಿ ಶಕೀಬ್ ಅವರೊಂದಿಗೆ ಮಾತನಾಡಿದ್ದೇವೆ. ಜಿಂಬಾಬ್ವೆ ಸರಣಿಯ ಸಮಯದಲ್ಲಿ ಅವರ ಯೋಜನೆಗಳನ್ನು ಅರ್ಥಮಾಡಿಕೊಳ್ಳಲು ಬಯಸಿದ್ದೇವೆ. ಡಿಸೆಂಬರ್ ವರೆಗೆ ಎಂಟು ಟೆಸ್ಟ್ ಪಂದ್ಯಗಳಿರುವ ನಮ್ಮ ವೇಳಾಪಟ್ಟಿ ತುಂಬಾ ಕಾರ್ಯನಿರತವಾಗಿದೆ.
ಕ್ರಿಕೆಟ್ ಮೈದಾನದಲ್ಲಿ ಶಕೀಬ್ ಅಲ್ ಹಸನ್ ತನ್ನ ಮಾರಕ ಬೌಲಿಂಗ್‌ನಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ದೊಡ್ಡ ಶತ್ರು ಎಂದನ್ನು ಸಾಬೀತುಪಡಿಸಿದ್ದಾರೆ. ಇದೀಗ ಮತ್ತೊಮ್ಮೆ ಶಕೀಬ್ ಅಲ್ ಹಸನ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಅಪಾಯಕಾರಿಯಾಗಬಹುದು ಎಂದಿದ್ದಾರೆ.
ಟೆಸ್ಟ್ ಸರಣಿ ಭಾರತಕ್ಕೆ ಏಕೆ ಮುಖ್ಯ?
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಈ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಭಾರತ ಇದುವರೆಗೆ 9 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ ಭಾರತ 6 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದಲ್ಲದೇ ಟೀಮ್ ಇಂಡಿಯಾ 2 ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, ಒಂದು ಟೆಸ್ಟ್ ಡ್ರಾ ಮಾಡಿಕೊಂಡಿದೆ.
ಭಾರತದ ಗೆಲುವಿನ ಶೇಕಡಾವಾರು ಪ್ರಸ್ತುತ 68.52 ರಷ್ಟಿದೆ. ಅಂಕಪಟ್ಟಿಯಲ್ಲಿ ಅಗ್ರ-2 ತಂಡಗಳು ಮಾತ್ರ 2025 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಆಡುತ್ತವೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಲು ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ ಈ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಗೆಲ್ಲಲೇಬೇಕು.
ಬಾಂಗ್ಲಾದೇಶ ತಂಡವು ಪಾಕಿಸ್ತಾನ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ. ಪಾಕಿಸ್ತಾನ ಪ್ರವಾಸದ ಮುಕ್ತಾಯದ ಬಾಂಗ್ಲಾದೇಶವು ಕ್ರಮವಾಗಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತಲಾ ಎರಡು ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications