Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಷ್ಟ್ರೀಯ ತಂಡದ ಬದಲು ಐಪಿಎಲ್ ಆಯ್ಕೆ ಮಾಡಿದ ಕಾರಣ ವಿವರಿಸಿದ ಶಕೀಬ್ ಅಲ್‌ ಹಸ್ಸನ್

Shakib Al Hasan clarifies reason to chose IPL over National Team representation

ಬಾಂಗ್ಲಾದೇಶದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ದಿನಾಂಕವನ್ನು ಶ್ರೀಲಂಕಾ ಕ್ರಿಕೆಟ್ ಶುಕ್ರವಾರ ಖಚಿತಪಡಿಸಿದ್ದು ಏಪ್ರಿಲ್ 21ರಿಂದ ಸರಣಿ ಆರಂಭವಾಗಲಿದೆ. ಈ ಸರಣಿಗೆ ಬಾಂಗ್ಲಾದೇಶದ ಮಾಜಿ ನಾಯಕ ಶಕೀಬ್ ಅಲ್ ಹಸ್ಸನ್ ಐಪಿಎಲ್‌ನಲ್ಲಿ ಪಾಳ್ಗೊಳ್ಳುತ್ತಿರುವ ಕಾರಣ ತಂಡದಿಂದ ಹೊರಗುಳಿಯಲಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಐಪಿಎಲ್‌ನಲ್ಲಿ ಪಾಲ್ಗೊಲ್ಳಲು ಈ ಹಿಂದೆಯೇ ನಿರಾಕ್ಷೇಪಣಾಪತ್ರವನ್ನು ನೀಡಿತ್ತು.

14ನೇ ಆವೃತ್ತಿಯ ಐಪಿಎಲ್‌ನಲ್ಲಿ ಶಕೀಬ್ ಅಲ್ ಹಸ್ಸನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾಗಿಯಾಗಲು ರಾಷ್ಟ್ರೀಯ ತಂಡದ ಜೊತೆಗೆ ಪ್ರಯಾಣಿಸುವುದಿಲ್ಲ ಎಂದು ತಿಳಿಸಿದ್ದರು. ಈ ಬಾರಿ ವಿಶ್ವಕಪ್ ನಡೆಯುತ್ತಿದ್ದು ಅದಕ್ಕೆ ಸಿದ್ಧತೆ ನಡೆಸುವ ಸಲುವಾಗಿ ಐಪಿಎಲ್‌ನಲ್ಲಿ ಭಾಗಿಯಾಗುವುದಾಗಿ ಶಕೀಬ್ ಅಲ್‌ ಹಸ್ಸನ್ ಹೇಳಿಕೆ ನೀಡಿದ್ದಾರೆ.

"ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಭಾಗಿಯಾಗದಿರುವುದನ್ನೇ ನಿರಂತರವಾಗಿ ಜನರು ಮಾತನಾಡುತ್ತಿದ್ದಾರೆ. ನಾನು ಮುಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವುದಿಲ್ಲ ಅಥವಾ ಟೆಸ್ಟ್ ಕ್ರಿಕೆಟ್ ಆಡಲು ಬಯಸುವುದಿಲ್ಲ ಎಂದು ಹೇಳುವ ಜನರು ನನ್ನ ಪತ್ರವನ್ನು ಸರಿಯಾಗಿ ಓದಿಲ್ಲ, ಅಷ್ಟೆ" ಎಂದು ಶಕೀಬ್ ಅಲ್ ಹಸ್ಸನ್ ಹೇಳಿದ್ದಾರೆ.

ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದೆ ಆಡಲ್ಲ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಮುಂದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಸಲುವಾಗಿ ಐಪಿಎಲ್‌ನಲ್ಲಿ ಭಾಗಿಯಾಗುತ್ತೇನೆ ಎಂದು ನಾನು ಆ ಪತ್ರದಲ್ಲಿ ತಿಳಿಸಿದ್ದೇನೆ. ಆದರೆ ಅದನ್ನು ಬಿಟ್ಟು ಅಕ್ರಂ ಅವರು(ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕಾರ್ಯಾಚರಣಾ ಮುಖ್ಯಸ್ಥ) ನಾನು ಟೆಸ್ಟ್ ಕ್ರಿಕೆಟ್ ಆಡಲು ಬಯಸುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ" ಎಂದು ಶಕೀಬ್ ಅಲ್ ಹಸನ್ ಕ್ರಿಕ್ ಬಜ್‌ಗೆ ವಿವರಿಸಿದ್ದಾರೆ.

14ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಆರಂಭವಾಗಿದ್ದು ಏಪ್ರಿಲ್ 9ರಿಂದ ಟೂರ್ನಿ ಆರಂಭವಾಗಲಿದೆ. ಈ ಬಾರಿ ಭಾರತದಲ್ಲಿಯೇ ಐಪಿಎಲ್ ಪಂದ್ಯಗಳು ಆಯೋಜನೆಯಾಗಲಿದೆ. ಬೆಂಗಳೂರು ಸೇರಿದಂತೆ ಭಾರತದ ಆರು ಕ್ರೀಡಾಂಗಣಗಳಲ್ಲಿ ಟೂರ್ನಿಯನ್ನು ಆಯೋಜನೆ ಮಾಡಲಾಗಿದೆ

Story first published: Sunday, March 21, 2021, 20:38 [IST]
Other articles published on Mar 21, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+