For Quick Alerts
ALLOW NOTIFICATIONS  
For Daily Alerts
 

Shakib Al Hasan: ಭಾರತ ವಿರುದ್ಧದ ಸರಣಿ ಮಧ್ಯೆ ಟಿ20 ಕ್ರಿಕೆಟ್‌ಗೆ ಶಕೀಬ್ ಅಲ್ ಹಸನ್ ವಿದಾಯ

ಬಾಂಗ್ಲಾದೇಶ ಟೆಸ್ಟ್ ಮತ್ತು ಟಿ20 ಸರಣಿ ಆಡಲು ಭಾರತಕ್ಕೆ ಪ್ರವಾಸ ಕೈಗೊಂಡಿದೆ. ಈಗಾಗಲೇ ಉಭಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆದಿದ್ದು, ಇದರಲ್ಲಿ ಟೀಮ್ ಇಂಡಿಯಾ ಗೆದ್ದು 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ನಾಳೆಯಿಂದ (ಶುಕ್ರವಾರ) ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಅದಕ್ಕೂ ಮುನ್ನ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ಎದುರಾಗಿದೆ. ಬಾಂಗ್ಲಾದೇಶದ ಹಿರಿಯ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

Shakib Al Hasan retires from international T20 cricket

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಸರಣಿ ಸೆಪ್ಟೆಂಬರ್ 27 ರಿಂದ ಆಕ್ಟೋಂಬರ್ 1 ರವರೆಗೆ ನಡೆಯಲಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಅಕ್ಟೋಂಬರ್ 6 ರಿಂದ ಆರಂಭವಾಗಲಿದೆ. ಅದಕ್ಕೂ ಮುನ್ನ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಈ ಕೂಡಲೇ ಜಾರಿಗೆ ಬರುವಂತೆ ಶಕೀಬ್ ಅಲ್ ಹಸನ್ ನಿವೃತ್ತಿ ಹೇಳಿದ್ದು, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಅವರು ತಮ್ಮ ಕೊನೆಯ ಪಂದ್ಯವನ್ನು ಆಡುವ ಬಯಕೆಯನ್ನು ಹೊರಹಾಕಿದ್ದಾರೆ.

ಭಾರತ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಶಕೀಬ್ ತಮ್ಮ ನಿವೃತ್ತಿ ನಿರ್ಧಾರ ಬಗ್ಗೆ ಹೇಳಿದ್ದಾರೆ. 'ನಾನು ದಕ್ಷಿಣ ಆಫ್ರಿಕಾ ಸರಣಿಗೆ ಲಭ್ಯವಿದ್ದೇನೆ. ಆದರೆ ನಮ್ಮ ದೇಶದಲ್ಲಿ ಬಹಳಷ್ಟು ಬಿಕ್ಕಟ್ಟಿನ ಪರಿಸ್ಥಿತಿ ಇದೆ. ಈಗಾಗಕೇ ಟೆಸ್ಟ್ ಕ್ರಿಕೆಟ್‌ಗೆ ಸಂಬಂಧಿಸಿದಂತೆ ನನ್ನ ಭವಿಷ್ಯದ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್‌ ಬೋರ್ಡ್ (ಬಿಸಿಬಿ) ಜೊತೆಗೆ ಚರ್ಚಿಸಿದ್ದೇನೆ. ಭಾರತ ವಿರುದ್ಧ ಆಡುತ್ತಿರುವುದು ನನ್ನ ಕೊನೆಯ ಟೆಸ್ಟ್ ಆಗಿರಬಹುದು. ಬಾಂಗ್ಲಾದೇಶದಲ್ಲಿ ನನಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದರೆ, ನನ್ನ ಕೊನೆಯ ಟೆಸ್ಟ್ ಅನ್ನು ಮೀರ್‌ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತೇನೆ ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶದ ಪರ ಶಕೀಬ್ ಅಲ್ ಹಸನ್ 2007ರ ಟಿ20 ವಿಶ್ವಕಪ್ ಆರಂಭಿಕ ಆವೃತ್ತಿಯಿಂದಲ್ಲೂ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಅವರು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಅವರ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

ಶಕೀಬ್ ವೃತ್ತಿಜೀವನ

ಕಳೆದ ಒಂದು ದಶಕದಿಂದ ಮೂರು ಮಾದರಿ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ತಂಡಕ್ಕೆ ಶಕೀಬ್ ಅಲ್ ಹಸನ್ ಅವರ ಆಲ್‌ರೌಂಡರ್ ಕೊಡುಗೆ ಅಪಾರವಾಗಿದೆ. ಬಾಂಗ್ಲಾ ಪರ ಇದುವರೆಗೆ ಅವರು 70 ಟೆಸ್ಟ್ ಪಂದ್ಯಗಳಲ್ಲಿ 242 ವಿಕೆಟ್ ಪಡೆದಿದ್ದು, 4600 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 5 ಶತಕಗಳನ್ನು ಹೊಂದಿರುವ ಅವರು ಇನ್ನಿಂಗ್ಸ್‌ವೊಂದರಲ್ಲಿ 217 ಅತ್ಯುತ್ತಮ ಸ್ಕೋರ್ ಕಲೆ ಹಾಕಿದ್ದಾರೆ. 129 ಟಿ20 ಪಂದ್ಯಗಳಲ್ಲಿ 149 ವಿಕೆಟ್ ಕಬಳಿಸಿರುವ ಅವರು 2551 ರನ್ ಹೊಡೆದಿದ್ದಾರೆ.

Story first published: Thursday, September 26, 2024, 14:19 [IST]
Other articles published on Sep 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+