ಶ್ರೀಲಂಕಾ ವಿರುದ್ಧದ ಸರಣಿಗೆ ಬಾಂಗ್ಲಾ ತಂಡಕ್ಕೆ ಮರಳಿದ ಶಕೀಬ್

ಧಾಕಾ: ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಮಾಜಿ ನಾಯಕ ಶಕೀಬ್ ಅಲ್ ಹಸನ್ ಮತ್ತೆ ವಾಪಸ್ಸಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಗೆ ಬಾಂಗ್ಲಾ ತಂಡ ಪ್ರಕಟಗೊಂಡಿದ್ದು, ತಂಡದಲ್ಲಿ ಆಲ್ ರೌಂಡರ್ ಶಕೀಬ್ ಕಾಣಿಸಿಕೊಂಡಿದ್ದಾರೆ. ಮೇ 23ರಿಂದ ಬಾಂಗ್ಲಾ-ಶ್ರೀಲಂಕಾ ಏಕದಿನ ಸರಣಿ ಆರಂಭಗೊಳ್ಳಲಿದೆ.
ಮೇ 23, 25ಕ್ಕೆ ನಡೆಯಲಿರುವ ಶ್ರೀಲಂಕಾ ನಡುವಿನ ಎರಡು ಏಕದಿನ ಪಂದ್ಯಗಳಿಗೆ ಬಾಂಗ್ಲಾ ತಂಡ ಪ್ರಕಟಗೊಂಡಿದ್ದು, ನೈಮ್ ಶೇಖ್, ತೈಜುಲ್ ಇಸ್ಲಾಂ, ಶೋಹಿದುಲ್ ಇಸ್ಲಾಂ, ಮತ್ತು ಅಮೀನುಲ್ ಇಸ್ಲಾಂ ಬಿಪ್ಲೋಬ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಒಟ್ಟಿಗೆ ಮೂರು ಪಂದ್ಯಗಳನ್ನು ಏಕದಿನ ಸರಣಿ ಒಳಗೊಂಡಿದೆ. 'ಶ್ರೀಲಂಕಾ ವಿರುದ್ಧ ಮೊದಲ ಮತ್ತು ದ್ವಿತೀಯ ಏಕದಿನ ಪಂದ್ಯಗಳಿಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ತಂಡ ಪ್ರಕಟಿಸಿದೆ,' ಎಂದು ಬಿಸಿಬಿ ಹೇಳಿದೆ. ಬಾಂಗ್ಲಾ ತಂಡವನ್ನು ತಮೀಮ್ ಇಕ್ಬಾಲ್ ಮುನ್ನಡೆಸಲಿದ್ದಾರೆ.
ಶ್ರೀಲಂಕಾ ವಿರುದ್ಧ 2 ಏಕದಿನ ಪಂದ್ಯಗಳಿಗೆ ಬಾಂಗ್ಲಾ ತಂಡ
ತಮೀಮ್ ಇಕ್ಬಾಲ್ (ಕ್ಯಾಪ್ಟನ್), ಲಿಟಾನ್ ದಾಸ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮೊಹಮ್ಮದ್ ಮಿಥುನ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್, ಸೌಮ್ಯ ಶೇಖರ್ ಇಸ್ಲಾಂ, ಶೋಮಾದ್ಕರ್ ಇಸ್ಲಾಂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications