ಕೋವಿಡ್-19 ನಿಧಿಗಾಗಿ ವಿಶ್ವಕಪ್ ಬ್ಯಾಟ್ ಹರಾಜಿಗಿಡಲಿದ್ದಾರೆ ಶಕೀಬ್ ಅಲ್ ಹಸನ್

ಧಾಕಾ, ಏಪ್ರಿಲ್ 22: ಬಾಂಗ್ಲಾದೇಶ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ತಾನು 2019ರ ವಿಶ್ವಕಪ್‌ನಲ್ಲಿ ಆಡುವಾಗ ಬಳಸಿದ್ದ ಬ್ಯಾಟನ್ನು ಹರಾಜಿಗಿಡಲಿದ್ದಾರೆ. ಕೊರೊನಾವೈರಸ್ ಪಿಡುಗು ಹತ್ತಿಕ್ಕಲು ದೇಣಿಗೆ ಸಂಗ್ರಹಿಸುವುದಕ್ಕಾಗಿ ಶಕೀಬ್ ಬ್ಯಾಟ್ ಹರಾಜಿಗಿಡಡುತ್ತಿದ್ದಾರೆ.
ಬುಕ್ಕಿಗಳು ಸಂಪರ್ಕಿಸಿದ್ದನ್ನು ತನ್ನ ಕ್ರಿಕೆಟ್ ಬೋರ್ಡ್‌ಗೆ ಮಾಹಿತಿ ನೀಡದ ತಪ್ಪಿಗಾಗಿ ಸದ್ಯ ಶಕೀಬ್ ಅಲ್ ಹಸನ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಎರಡು ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದಾರೆ. ಬಾಂಗ್ಲಾ ಕ್ರಿಕೆಟ್ ಬೋರ್ಡ್ ಶಕೀಬ್‌ಗೆ 2 ವರ್ಷಗಳ ನಿಷೇಧ ಹೇರಿದೆ.
'ನಾನು ಕ್ರಿಕೆಟ್ ಬ್ಯಾಟನ್ನು ಹರಾಜಿಗಿಡುವುದಾಗಿ ಈ ಮೊದಲೇ ಹೇಳಿದ್ದೆ. 2019ರ ವಿಶ್ವಕಪ್‌ನಲ್ಲಿ ನಾನು ಬಳಸಿದ್ದ ಬ್ಯಾಟನ್ನು ಹರಾಜಿಗಿಡಲು ನಿರ್ಧರಿಸಿದ್ದೇನೆ. ನಾನು ಹರಾಜಿಗಿಡುತ್ತಿರುವುದು ನನ್ನ ಫೇವರಿಟ್ ಬ್ಯಾಟ್,' ಎಂದು ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಶಕೀಬ್ ಹೇಳಿದ್ದಾರೆ.
ಇಂಗ್ಲೆಂಡ್‌ನಲ್ಲಿ ಕಳೆದವರ್ಷ ನಡೆದಿದ್ದ ಪುರುಷರ ಐಸಿಸಿ ವಿಶ್ವಕಪ್‌ನಲ್ಲಿ 33ರ ಹರೆಯದ ಶಕೀಬ್ ಯಶಸ್ವಿ ಪ್ರದರ್ಶನ ನೀಡಿದ್ದರು. ಟೂರ್ನಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡಿದ್ದ ಶಕೀಬ್, 86.57ರ ಸರಾಸರಿಯಂತೆ 606 ರನ್ ಗಳಿಸಿದ್ದರು. ಇದರಲ್ಲಿ 2 ಶತಕಗಳು ಮತ್ತು 5 ಅರ್ಧ ಶತಕಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications