Mohammed Shami: ಮೈಖೇಲ್‌ಗೆ ಮೊಹಮ್ಮದ್ ಶಮಿ ವಿಶೇಷ ಸಂದರ್ಶನ: ಭಾರತದ ಬೌಲಿಂಗ್ ದಾಳಿಯ ಬಗ್ಗೆ ಹೇಳಿದ್ದೇನು?
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅಂಗಳಕ್ಕೆ ಇಳಿಯಲು ತಯಾರಾಗಿದ್ದಾರೆ. ಈಗ ಫುಲ್ ಬೌಲಿಂಗ್ ಪ್ರ್ಯಾಕ್ಟಿಸ್ ಆರಂಭಿಸಿರುವ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮೊಹಮ್ಮದ್ ಶಮಿ ಮೈಖೇಲ್ ಜೊತೆ ಮನ ಬಿಚ್ಚಿ ಮಾತನಾಡಿದ್ದಾರೆ.
ಭಾರತದಲ್ಲಿ ನಡೆದಿದ್ದ 2023ರ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಶಮಿ, ಅಬ್ಬರಿಸಿದ್ದರು. ಫೈನಲ್ ಪಂದ್ಯದ ಬಳಿಕ ಗಾಯಕ್ಕೆ ತುತ್ತಾಗಿದ್ದ ಶಮಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ, ಚೇತರಿಸಿಕೊಳ್ಳುತ್ತಿದ್ದಾರೆ. ಈಗ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿರುವ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ಸರಣಿಗೆ ಫ್ಲೈಟ್ ಏರುವ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ದರೆ ಶಮಿ ಏನೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

100 ಪ್ರತಿಶತ್ ನೀವು ಫಿಟ್ ಆಗಿದ್ದೀರಾ?
ನಾನು ಚೇತರಿಸಿಕೊಂಡಿದ್ದು ಫಿಟ್ ಆಗಿರುವೆ. ಕಳೆದ ಕೆಲವು ದಿನಗಳಿಂದ ಪೂರ್ತಿ ಲೈನ್‌ಅಪ್‌ನಿಂದ ಬೌಲಿಂಗ್ ಮಾಡುತ್ತಿರುವೆ. ನಾನು ಫಿಟ್ನೆಸ್ ಮರಳಿ ಪಡೆದಿರುವ ಬಗ್ಗೆ ನನಗೆ ವಿಶ್ವಾಸವಿದೆ. ಆದರೆ ಸಾಮಾಜಿಕ ತಾಣದಲ್ಲಿ ಲಭ್ಯ ಇರುವ ವದಂತಿ ಸುದ್ದಿಗಳಿಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ಕಿವಿ ಮಾತು ನೀಡಿದ್ದಾರೆ.
ಆಸ್ಟ್ರೇಲಿಯಾ ಸರಣಿಯ ವೇಳೆ ಫಿಟ್ ಆಗುವಿರಾ?
ನಾನು ಸಹ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದೇನೆ. ನಾನು ಆಸೀಸ್ ಪ್ರವಾಸ ಕೈ ಗೊಳ್ಳುತ್ತೇನೋ ಇಲ್ಲವೋ ನನಗೂ ತಿಳಿಯದು. ಆದರೆ ಮೈದಾನದಲ್ಲಿ ನಾನು ಬೆವರು ಹರಿಸಲು ಆರಂಭಿಸಿರುವುದು ಖುಷಿಯ ವಿಚಾರ. ಅಂತಾರಾಷ್ಟ್ರೀಯ ಸರಣಿಗೆ ವಾಪಸ್ ಆಗುವ ಮುನ್ನ ನಾನು ದೇಶೀಯ ಟೂರ್ನಿಗಳಲ್ಲಿ ಆಡುವ ಇರಾದೆಯನ್ನು ಹೊಂದಿದ್ದೇನೆ.
ಸದ್ಯದ ಭಾರತದ ಬೌಲಿಂಗ್ ಲೈನ್ ಅಪ್ ಹೇಗಿದೆ?
ಒಂದು ಕಾಲ ಇತ್ತು. ಆಗ ಭಾರತದಲ್ಲಿ ಮೂವರು ವೇಗಿಗಳು ಇದ್ದರೆ ಅದರಲ್ಲಿ ಇಬ್ಬರು ಮಾತ್ರ ಎದುರಾಳಿ ಬ್ಯಾಟರ್‌ಗಳಿಗೆ ಕಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ತಂಡದಲ್ಲಿರುವ ಮೂರು ಬೌಲರ್‌ಗಳು ಗಂಟೆಗೆ 140 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಅಲ್ಲದೆ ಬೆಂಚ್ ಮೇಲೂ ಹಲವು ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದು, ಈ ಪ್ಲೇಯರ್ಸ್ ಸಹ ಗಂಟೆಗೆ 135 ಕಿಲೋ ಮೀಟರ್‌ನಲ್ಲಿ ಬೌಲಿಂಗ್ ನಡೆಸಬಲ್ಲರು. ಕಳೆದ ಒಂದು ದಶಕದಿಂದ ಬೌಲಿಂಗ್ ಯೂನಿಟ್ ಮೇಲೆ ನಾವೇಲ್ಲಾ ಕೆಲಸ ಮಡಿದ್ದೇವೆ. ಈಗ ಅದು ಫಲ ನೀಡುತ್ತಿದೆ ಎಂದು ಅನಿಸುತ್ತಿದೆ.
ನಿಮ್ಮ ನೆಚ್ಚಿನ ಮೈದಾನ ಯಾವುದು?
ನನ್ನ ತವರು ಮೈದಾನವೇ ನನ್ನ ನೆಚ್ಚಿನ ಸ್ಟೇಡಿಯಂ ಆಗಿದೆ ಎಂದು ಶಮಿ ತಿಳಿಸಿದ್ದಾರೆ.
ಯಾವ ಬ್ಯಾಟರ್‌ಗೆ ಬೌಲ್ ಮಾಡಲು ನಿಮಗೆ ಕಷ್ಟ?
ನಿಜ ಹೇಳ ಬೇಕು ಎಂದರೆ ಅಂತಹ ಯಾವುದೇ ಬ್ಯಾಟರ್ ಇಲ್ಲ. ಯಾರು ನನಗೆ ಕಷ್ಟ ಎಂದು ಅನಿಸಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತಂಡದಲ್ಲಿರುವ ಭರವಸೆಯ ಆಟಗಾರರನ್ನು ನೋಡಿದಾಗ ಏನು ಅನಿಸುತ್ತದೆ?
ಭಾರತ ತಂಡದಲ್ಲಿ ಹಲವು ಯುವ ಆಟಗಾರರು ಇದ್ದಾರೆ. ಇವರು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡದಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಬೆವರು ಹರಿಸುತ್ತಿದ್ದಾರೆ. ಈ ಸಾಲಿನಲ್ಲಿ ನಿಮಗೆ ಯಶಸ್ವಿ ಜೈಸ್ವಾಲ್, ಮಯಾಂಕ್ ಯಾದವ್, ಧ್ರುವ್ ಜುರೇಲ್ ರಂತಹ ಆಟಗಾರರು ಕಾಣಿಸಿಕೊಳ್ಳುತ್ತಾರೆ. ನಮ್ಮ ತಂಡ ಈಗ ಬಲಿಷ್ಠವಾಗಿದ್ದು, ಯಾವುದೇ ತಂಡಕ್ಕೆ ಕಾಟ ನೀಡಬಲ್ಲ ಕ್ಷಮತೆ ಹೊಂದಿದೆ ಎಂದಿದ್ದಾರೆ.
ಗಾಯದಿಂದ ಚೇತರಿಸಿಕೊಳ್ಳುವ ಯುವ ಆಟಗಾರರಿಗೆ ನಿಮ್ಮ ಕಿವಿಮಾತು?
ಆಟಗಾರರು ಯಾವಗಲೂ ಒತ್ತಡವನ್ನು ಮೆಟ್ಟಿನಿಂತು ಆಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗಾಯದಿಂದ ಚೇತರಿಸಿಕೊಂಡು ಅಂಗಳಕ್ಕೆ ಮರಳುವಾಗಿ ಒತ್ತಡ ಇದ್ದೇ ಇರುತ್ತದೆ. ಒತ್ತಡದಿಂದ ದೂರ ಇರಬೇಕು. ಇನ್ನು ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಏಕಾಗ್ರತೇ ಮೂಲ ಮಂತ್ರವಾಗಿದೆ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications